ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಪ್ರೆಸ್ ಮೀಟ್ 

ಲಾಕ್ ಡೌನ್ ಸಡಿಲಿಕೆ ಬಳಿಕ ಜನದಟ್ಟಣೆ ದಿನೆ ದಿನೆ ಜಾಸ್ತಿಯಾಗಿದೆ. ಜನರ ಓಡಾಟವೂ, ಅಂತರರಾಜ್ಯ ಸಂಚಾರವೂ ಜಾಸ್ತಿಯಾಗಿದೆ. ಎರಡೂವರೆ ತಿಂಗಳ ಕಾಲ ಯಾವುದೇ ಸೋಂಕು ನಮ್ಮಲ್ಲಿ ಇರಲಿಲ್ಲ.ಲಾಕ್ ಡೌನ್ ಸಡಿಲಿಕೆ ಬಳಿಕ ಆರೋಪಿಗಳ ಬಂಧನ, ಕಂಟೈನ್ಮೆಂಟ್ ಜೋನ್ ನಲ್ಲಿ ಕೆಲಸ ಮಾಡುವಾಗ, ಬೀಟ್ ನಲ್ಲಿ ಇದ್ದ ಪೊಲೀಸ್ರಿಗೆ ಸೋಂಕು ತಗುಲಿದೆ. ಸದ್ಯ13 ಜನಕ್ಕೆ ಸೋಂಕು ತಗುಲಿದೆ, ಅದ್ರಲ್ಲಿ ಮೂವರು ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಒಬ್ಬರು ಮೃತಪಟ್ಟಿದ್ದಾರೆ, ಅವರು ಹೊರಗಡೆ ಹೋದಾಗ ಸೋಂಕು ತಗುಲಿದೆ ಕರ್ತವ್ಯದಲ್ಲಿ ಇದ್ದಾಗ ಸೋಂಕು ಬಂದಿಲ್ಲ. ಈಗಾಗಲೇ ಹಲವು ಪೊಲೀಸ್ ಠಾಣೆಗಳು ಸೀಲ್ ಡೌನ್ ಆಗಿದ್ದು 420 ಜನ ಸಿಬ್ಬಂದಿ ಕ್ವಾರಂಟೈನ್ ನಲ್ಲಿ ಇದ್ದಾರೆ. ಸದ್ಯದ ಪರಿಸ್ಥತಿಯಲ್ಲಿ ಪೊಲೀಸರು ಕೇರ್ ತಗೊಳೋದು ಬಹಳ ಮುಖ್ಯವಾಗುತ್ತೆ ಮೊದಲೆನೆದಾಗಿ ಮಾಸ್ಕ್, ಸ್ಯಾನಿಟೈಸ್, ಗ್ಲೌಸ್ ಬಳಕೆ ಮಾಡಲೇಬೇಕು. ಇನ್ನು ಇದರ ಬಗ್ಗೆ ಅಯಾ ಠಾಣೆ ಇನ್ಸ್‌ಪೆಕ್ಟರ್ ಗೆ ಜವಾಬ್ದಾರಿಯನ್ನ ನೀಡಲಾಗಿದೆ. ಮೃತ ಎಎಸ್ಐಗೆ ಮೊದಲು ಹಲವು ಅನಾರೋಗ್ಯ ಸಮಸ್ಯೆ ಇತ್ತು. ಅವರಿಗೆ ರಜೆ ಕೂಡ ನೀಡಲಾಗಿತ್ತು.ಇದಕ್ಕೆ ನಾವು ಹೆದರಬಾರದು, ತುಂಬ ಧೈರ್ಯದಿಂದ ಎದುರಿಸಬೇಕು. ಅಲ್ಲದೇ ಕ್ವಾಟ್ರಸ್ ಗಳಿಗೆ ಡಿಸಿಪಿಗಳು ಬೇಟಿ ನೀಡಿ ಅವರ ಆತ್ಮಸ್ಥೈರ್ಯ ಹೆಚ್ವಿಸಲು ಸೂಚನೆಯನ್ನು ನೀಡಲಾಗಿದೆ ಎಂದು ಕಮೀಷನರ್ ಭಾಸ್ಕರ್ ರಾವ್ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಭಾರತ-ಚೀನಾ ಗಡಿಯಲ್ಲಿ ಸಂಘರ್ಷ..

Tue Jun 16 , 2020
ಭಾರತ-ಚೀನಾ ಗಡಿಯಲ್ಲಿ ಸಂರ‍್ಷದ ವಾತಾವರಣ ಸೃಷ್ಟಿಯಾಗಿದ್ದು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಗಲ್ವಾನ್ ವ್ಯಾಲಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭಾರತದ ಇಬ್ಬರು ಯೋಧರು ಮತ್ತು ಒಬ್ಬ ಅಧಿಕಾರಿಯನ್ನು ಚೀನಾ ಬಲಿ ಪಡೆದಿದೆ. ಗಡಿಯಲ್ಲಿ ನರ‍್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಶಾಂತಗೊಳಿಸಲು ಉಭಯ ರಾಷ್ಟ್ರಗಳ ಹಿರಿಯ ಸೇನಾಧಿಕಾರಿಗಳು ಸಭೆ ನಡೆಸಿದ್ದಾರೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.   Please follow and like us:

Advertisement

Wordpress Social Share Plugin powered by Ultimatelysocial