26 ವರ್ಷಕ್ಕೆ ಈ ಬಾಬಾ ಸಖತ್ ಫೇಮಸ್.

 

ಮಿರ್ಚಿ ಬಾಬಾ, ಜಿಲೇಬಿ ಬಾಬಾನ ನಂತರ ಇದೀಗ ಉತ್ತರದಲ್ಲಿ ಮತ್ತೊಬ್ಬ ಹೊಸ ಬಾಬಾ ಹೆಸ್ರು ಜೋರಾಗಿ ಸದ್ದಾಗ್ತಿದೆ. ಕೇವಲ 26 ವರ್ಷಕ್ಕೆ ಈ ಬಾಬಾ ಸಖತ್ ಫೇಮಸ್. ದೇಶದ ಟಾಪ್​ಮೋಸ್ಟ್​ ಲೀಡರ್ಸ್​ ಅವರನ್ನ ಹುಡುಕಿಕೊಂಡು ಬರ್ತಾರೆ. ಅವರು ಬೇರೆ ಯಾರು ಅಲ್ಲ.

ಮಧ್ಯಪ್ರದೇಶದ ಬಾಗೇಶ್ವರ ಧಾಮದ ಪೀಠಾಧೀಶ್ವರ ಧೀರೇಂದ್ರ ಶಾಸ್ತ್ರಿ ಅಲಿಯಾಸ್ ಬಾಗೇಶ್ವರ್ ಬಾಬಾ.

ಬಾಗೇಶ್ವರ್​ ವಿರುದ್ಧ ಮೂಢನಂಬಿಕೆ ಬಿತ್ತುತ್ತಿರೋ ಆರೋಪ..!
ಬಾಗೇಶ್ವರ್​ ಬಾಬಾ ಮೇಲೆ ಘನಘೋರ ಆರೋಪ ಕೇಳಿಬಂದಿದೆ. ಅಮಾಯಕ ಜನರಿಗೆ ಮೂಢನಂಬಿಕೆಯ ಹೊದಿಕೆ ಹೊದಿಸಿ, ಈ ಮೂಲಕ ಹೊಸ ನಾಟಕದ ಕಂಪನಿನ್ನೇ ಶುರು ಮಾಡಿದ್ರು ಅಂತಾ ಹೇಳಲಾಗ್ತಿದೆ. ಮಾಟ ಮಂತ್ರದ ಹಾಗೂ ವಾಮಾಚಾರದ ಮೂಲಕವೇ ಸಖತ್ ಫೇಮಸ್ ಆಗಿರೋ ಬಾಗೇಶ್ವರ್​ ಬಾಬಾ ಕಳೆದ 2 ದಿನಗಳಿಂದ ದೇಶದಲ್ಲಿ ಭರ್ಜರಿ ಸುದ್ದಿಯಾಗ್ತಿದ್ದಾರೆ. ಸ್ವಯಂ-ಘೋಷಿತ ದೇವಮಾನವ ಎಂದು ಕರೆಸಿಕೊಂಡಿರೋ ಬಾಬಾ ಪವಾಡ ಬಯಲಾಗೋ ಮುನ್ನ ಜೂಟ್ ಆಗಿದ್ದಾರೆ ಅನ್ನೋ ಆರೋಪವೂ ಇದೆ.

ಯಾರು ಈ ಬಾಗೇಶ್ವರ್​ ಬಾಬಾ?
ಬಾಗೇಶ್ವರ್​ ಬಾಬಾ ಮೂಲತಃ ಬಾಗೇಶ್ವರ್​ ಧಾಮ್ ಸರ್ಕಾರ್ ಅಂತಲೇ ಸಖತ್ ಫೇಮಸ್ ಆಗಿದ್ದಾನೆ. ಮಧ್ಯ ಪ್ರದೇಶದ ಛತ್ತರ್​ಪುರ್​ನಲ್ಲಿರುವ ಬಾಗೇಶ್ವರ್ ಧಾಮ್​ ಆಶ್ರಮದ ಪೀಠಾಧಿಪತಿಯೇ ಈ ಬಾಬಾ. ಬಾಗೇಶ್ವರ್​ ಧಾಮ್​ ಸರ್ಕಾರ್​ ಜುಲೈ, 04, 1996ರಂದು ಜನಿಸಿದ್ದು, ಈತನ ರಿಯಲ್ ನಾಮಧ್ಯೇಯ ಧೀರೇಂದ್ರ ಕೃಷ್ಣ ಗರ್ಗ್​ ಎನ್ನುವುದಾಗಿದೆ. ಬಾಗೇಶ್ವರ್ ಬಾಬಾ ತಾತಾ ಭಗವಾನ್ ದಾಸ್​ ಸಿಧ್​ ಸಂತರಾಗಿದ್ದರು. ಬಳಿಕ ತಾತನಂತೆಯೇ ಸಂತನಾಗಲು ಹೊರಟು ಪ್ರಸಿದ್ಧಿಯಾದ ಬಾಬಾ, ಪವಾಡಗಳ ಮೂಲಕ ಕಷ್ಟ ಹೇಳಿಕೊಂಡು ಬರುವ ಭಕ್ತರಿಗೆ ಪರಿಹಾರ ನೀಡ್ತಿನಿ ಅಂತಲೇ ಫೇಮಸ್ ಆಗಿದ್ದರು.

ಮ್ಮ ಮೇಲೆ ಕೇಳಿ ಬಂದಿರೋ ಆರೋಪದ ಬಗ್ಗೆ ಬಾಗೇಶ್ವರ್ ಬಾಬಾ ಮಾತನಾಡಿದ್ದಾರೆ. ನಾನೇನು ಸಂತನಲ್ಲ. ಯಾವುದೇ ಸಮಸ್ಯೆಯನ್ನ ಬಗೆಹರಿಸ್ತೀನಿ ಅಂತಾ ನಾನು ಹೇಳಿಕೊಂಡಿಲ್ಲ. ನಾನು ದೇವರು ಅಂತಲೂ ಹೇಳಿಲ್ಲ ಅಂತಾ ಆರೋಪಗಳು ಬೆನ್ನುಬಿದ್ಮೇಲೆ ಉಲ್ಟಾ ಹೊಡೆದಿದ್ದಾರೆ. ಅಲ್ಲದೇ ಹನುಮಂತನನ್ನು ಪೂಜಿಸುವುದು ಅಪರಾಧವೆಂದ್ರೆ, ಎಲ್ಲಾ ಹನುಮಂತ ಭಕ್ತರ ಮೇಲೆ ಎಫ್‌ಐಆರ್ ದಾಖಲಿಸಿ ಎಂದಿದ್ದಾರೆ.

ಈ ಬಾಬಾನ ಲೀಲೆಗಳು ಒಂದಾ ಎರಡಾ? ವಿಪರ್ಯಾಸ ಅಂದ್ರೆ ಇಂತಹ ಸ್ವಯಂ ಘೋಷಿತ ದೇವ ಮಾನವರ ತಂತ್ರಕ್ಕೆ ರಾಜಕಾರಣಿಗಳು ಕೂಡ ಬಲಿಯಾಗ್ತಿದ್ದಾರೆ. ಹೀಗಾಗಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಬೇಕು, ಇಂತಹ ಬಾಬಾಗಳು ತಲೆ ಎತ್ತದಂತೆ ಮಾಡಬೇಕು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಘಾಟಿಯಲ್ಲಿ ದನಗಳ ಜಾತ್ರೆ ಸೇರಿದ್ದ ಜಾನುವಾರಗಳ ತೆರವು.

Fri Jan 20 , 2023
ಜಿಲ್ಲಾಡಳಿತದಿಂದ ಧನಗಳ ಜಾತ್ರೆ ತೆರವು ಕಾರ್ಯಚಾರಣೆ ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ದ ಘಾಟಿ ಸುಬ್ರಮಣ್ಯ ದನಗಳ ಜಾತ್ರೆಗೆ ಸೇರಿದ್ದ ರೈತರು ಜನವರಿ 30 ರ ವರೆಗೆ ಜಾತ್ರೆ‌ ಮಾಡದಂತೆ ಆದೇಶ ಮಾಡಿದ್ದ ಜಿಲ್ಲಾಡಳಿತ ಚರ್ಮ ಗಂಟು ರೋಗದ ಹಿನ್ನಲೆ ಜಿಲ್ಲೆಯಾದ್ಯಂತ ಧನಗಳ ಜಾತ್ರೆಗೆ ನಿಷೇಧ ಏರಲಾಗಿತ್ತು ಕಳೆದ ತಿಂಗಳಲ್ಲೆ ಘಾಟಿಯಲ್ಲಿ ದನಗಳ ಜಾತ್ರೆ ಮಾಡಬೇಕಿತ್ತು ನಿಷೇಧದ ಹಿನ್ನಲೆ ಹಾಗೂ ಘಾಟಿ ರಥೋತ್ಸವದ ಹಿನ್ನಲೆ ರೈತರಿಗೆ‌ ಜಾತ್ರೆಗೆ ಅವಕಾಶ ನೀಡಿರಲಿಲ್ಲ ಇದೀಗ ಸ್ವಯಂಪ್ರೇರಿತ […]

Advertisement

Wordpress Social Share Plugin powered by Ultimatelysocial