ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ

ವದೆಹಲಿ : ಸುಧೀರ್ಘ ಚರ್ಚೆಯ ಬಳಿಕ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ಒದಗಿಸುವ ನಾರಿ ಶಕ್ತಿ ಅಧಿನಿಯಮ ಮಸೂದೆಯನ್ನು ಸಂಸತ್ತಿನ ಕೆಳಮನೆಯಲ್ಲಿ ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕರಿಸಲಾಯಿತು. ಇದೀಗ ರಾಜ್ಯಸಭೆಯಲ್ಲಿ ಮಾತ್ರ ಮಸೂದೆ ಅಂಗೀಕಾರವಾಗುವುದು ಬಾಕಿ ಇದ್ದು, ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಮಸೂದೆಗೆ ಬೆಂಬಲ ಸೂಚಿಸಿರುವುದರಿಂದ ಯಾವುದೇ ಅಡೆತಡೆ ಇಲ್ಲದೆ, ಅಂಗೀಕಾರವಾಗಲಿದೆ.

 

ಸಂಸತ್ತಿನ ಉಭಯ ಸದನದಲ್ಲಿ ಅಂಗೀಕಾರವಾದ ನಂತರ ರಾಷ್ಟ್ರಪತಿಗಳ ಸಹಿ ಬಳಿಕ ಕಾಯ್ದೆಯಾಗಿ ಕಾನೂನಿನ ಮೂಲಕ ಜಾರಿಗೆ ಬರಲಿದೆ.ಲೋಕಸಭೆಯಲ್ಲಿ ಹಾಜರಿದ್ದ ಒಟ್ಟು 456 ಸದಸ್ಯರ ಪೈಕಿ ಮಸೂದೆ ಪರವಾಗಿ 454 ಸದಸ್ಯರು ಮತಹಾಕಿದರು.
ಇದಕ್ಕೂ ಮುನ್ನಬುಧವಾರ ಲೋಕಸಭೆಯಲ್ಲಿ ಸುಮಾರು ಎಂಟು ಗಂಟೆಗಳ ಕಾಲ ಮಸೂದೆಯ ಮೇಲೆ ಚರ್ಚೆ ನಡೆಯಿತು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-09-2023)

ಚರ್ಚೆ ನಂತರ ಸ್ಪೀಕರ್ ಓಂಬಿರ್ಲಾ ಮತದಾನ ಮಾಡುವಂತೆ ಸಂಸದರಲ್ಲಿ ಮನವಿ ಮಾಡಿದರು. ಆನಂತರ ಮತ ಪತ್ರಗಳ ಮೂಲಕ ಸಂಸದರು ಮತ ಚಲಾಯಿಸಿದರು.ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ 213 ಸದಸ್ಯರ ಬೆಂಬಲ ಅಗತ್ಯವಿತ್ತು.
ಮಹಿಳಾ ಮೀಸಲಾತಿ ಮಸೂದೆಯನ್ನು ತರಲು ಇದು ಐದನೇ ಪ್ರಯತ್ನವಾಗಿದೆ. ದೇವೇಗೌಡರಿಂದ ಹಿಡಿದು ಮನಮೋಹನ್‌ ಸಿಂಗ್‌ವರೆಗೆ ನಾಲ್ಕು ಬಾರಿ ಈ ಮಸೂದೆ ತರಲು ಪ್ರಯತ್ನಿಸಲಾಗಿತ್ತು.ಅಸಾದುದ್ದೀನ್ ಒವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಇ-ಇಥೇಹಾದುಲ್ ಮುಸಲ್ಮಿನ್ (ಂIಒIಒ) ಪಕ್ಷದ ಇಬ್ಬರು ಸಂಸದರು ವಿರೋಧ ವ್ಯಕ್ತಪಡಿಸಿದರು.ಮಸೂದೆಯಲ್ಲಿ ಪರಿಶಿಷ್ಟ ಜಾತಿ , ಪರಿಶಿಷ್ಟ ವರ್ಗ, ಹಿಂದುಳಿದವರು, ಆದಿವಾಸಿಗಳು ಹಾಗೂ ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ನೀಡುವಂತೆ
ಆಗ್ರಹಿಸಿದರು.

ಮಸೂದೆ ಮೇಲಿನ ಚರ್ಚೆಯಲ್ಲಿ 60 ಸಂಸದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಚರ್ಚೆಯಲ್ಲಿ ಭಾಗವಹಿಸಿದ ಗೃಹ ಸಚಿವ ಅಮಿತ್ ಶಾ, ಮುಂದಿನ ಸರ್ಕಾರವು ಚುನಾವಣೆ ಮುಗಿದ ತಕ್ಷಣ ಜನಗಣತಿ ಮತ್ತು ಡಿಲಿಮಿಟೇಶನ್ ( ಕ್ಷೇತ್ರ ಪುರ್ನವಿಂಗಡಣೆ) ಕಾರ್ಯವನ್ನು ನಡೆಸಲಿದೆ ಎಂದು ಸದನಕ್ಕೆ ಭರವಸೆ ಕೊಟ್ಟರು.ಬೆಳಗ್ಗೆ ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಅವರು ಚರ್ಚೆಗೆ ನಾಂದಿ ಹಾಡಿದರು. ಇದು ರಾಜೀವ್‌ಗಾಂಧಿ ಕನಸು. ಈಗ ನನಸಾಗುತ್ತಿದೆ ಎನ್ನುವ ಮೂಲಕ ಕ್ರೆಡಿಟ್ ತೆಗೆದುಕೊಳ್ಳಲು ನೋಡಿದರು. ಈ ವಿಧೇಯಕದಲ್ಲಿ ಒಬಿಸಿ ಮಹಿಳೆಯರಿಗೂ ಒಳಮೀಸಲಾತಿ ನೀಡಬೇಕು. ಅಲ್ಲದೇ ಈ ಮೀಸಲಾತಿಯನ್ನು ಜಾರಿಗೆ ತರಲು ತಕ್ಷಣ ಜಾತಿಗಣತಿ ನಡೆಸಬೇಕು ಎಂದು ಆಗ್ರಹಿಸಿದರು.

ಇದು ರಾಜೀವ್ ಕನಸು ಎಂಬ ಸೋನಿಯಾಗಾಙಧಿ ಮಾತಿಗೆ ಅಮಿತ್ ಶಾ ಸೇರಿ ಬಿಜೆಪಿಗರು ಆಕ್ಷೇಪಿಸಿದರು. ಒಬಿಸಿ ಕೋಟಾಗೆ ರಾಹುಲ್ ಗಾಂಧಿ ಕೂಡ ಪಟ್ಟು ಹಿಡಿದರು. ಮಸೂದೆಗೆ ನಮ್ಮ ಬೆಂಬಲವಿದೆ. ಆದರೆ ಓಬಿಸಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸದಿದ್ದರೆ ಈ ಬಿಲ್ ಅಪೂರ್ಣ ಎಂದು ವ್ಯಾಖ್ಯಾನಿಸಿದರು. ಕೇಂದ್ರ ಸರ್ಕಾರದ 90 ಕಾರ್ಯದರ್ಶಿಗಳಲ್ಲಿ ಮೂವರು ಮಾತ್ರ ಒಬಿಸಿಗಳಿದ್ದಾರೆ ಎಂಬುದನ್ನು ರಾಹುಲ್ ನೆನಪಿಸಿದರು.

ಮಹಿಳಾ ಮೀಸಲಾತಿ ಜಾರಿಯನ್ನು ಡಿಲಿಮಿಟೇಷನ್ ಜೊತೆ ಏಕೆ ತಳಕು ಹಾಕ್ತಿದ್ದೀರಿ ಎಂದು ಡಿಎಂಕೆಯ ಕನಿಮೋಳಿ ಪ್ರಶ್ನಿಸಿದರು ಈ ವಿಧೇಯಕವನ್ನು ಜೆಡಿಯು ಬೆಂಬಲಿಸುತ್ತಲೇ, ಇದು ಸಾರ್ವತ್ರಿಕ ಚುನಾವಣೆ ಸಲುವಾಗಿ ಕೇಂದ್ರ ಮಾಡ್ತಿರುವ ಗಿಮಿಕ್ ಎಂದು ಟೀಕಿಸಿತು.
ಮಹಿಳಾ ಮೀಸಲಾತಿಯಲ್ಲಿ ಒಬಿಸಿಗಳಿಗೆ ಕೋಟಾ ಇರಬೇಕು ಎಂದು ಎನ್‌ಸಿಪಿಯ ಸುಪ್ರಿಯಾ ಸುಳೆ ಒತ್ತಾಯಿಸಿದರು. ರಾಜ್ಯಸಭೆಗೂ ಈ ಮೀಸಲಾತಿ ಅನ್ವಯಿಸಬೇಕು ಎಂಬ ಬೇಡಿಕೆಯನ್ನು ಸಮಾಜವಾದಿ ಪಕ್ಷದ ಡಿಂಪಲ್ ಯಾದವ್ ಇಟ್ಟರು.

2024ರ ಚುನಾವಣೆಯಲ್ಲೇ ಮೀಸಲಾತಿ ಜಾರಿ ಮಾಡಿ ಮೋದಿ ತಾಕತ್ ತೋರಿಸಬೇಕು ಎಂದು ಟಿಎಂಸಿ ಮಹುವಾ ಮೋಯಿತ್ರಾ ಸವಾಲ್ ಹಾಕಿದರು. ಅಕಾಲಿದಳ ಇದನ್ನು ಜುಮ್ಲಾ ಎಂದು ಕರೆಯಿತು. ಇದು ಮುಸ್ಲಿಮ್ ಮಹಿಳಾ ವಿರೋಧಿ ಮಸೂದೆ ಎಂದು ಓವೈಸಿ ವ್ಯಾಖ್ಯಾನಿಸಿದರು. 2029ಕ್ಕೆ ಮಹಿಳಾ ಮೀಸಲಾತಿ ಜಾರಿ ಆಗುವುದಾದರೆ, ಇದಕ್ಕೆ ಇಷ್ಟು ತರಾತುರಿಯಲ್ಲಿ ವಿಶೇಷ ಅಧಿವೇಶನ ಏಕೆ ಕರೆಯಬೇಕಿತ್ತು ಎಂದು ಕೇಂದ್ರವನ್ನು ಆರ್‌ಎಸ್‌ಪಿಯ ಪ್ರೇಮಚಂದ್ರನ್ ತರಾಟೆಗೆ ತಗೊಂಡರು.ಒಬಿಸಿ ಮೀಸಲಾತಿ ಇಲ್ಲದೆ ಈ ಮಸೂದೆ ಅಪೂರ್ಣ ಎಂದು ರಾಹುಲ್ ಗಾಂಧಿ ಹೇಳಿದರು.

ಇದಕ್ಕೆ ತಿರುಗೇಟು ನೀಡಿದ ಗೃಹ ಸಚಿವ ಅಮಿತ್‌ ಶಾ, ಈ ಮೀಸಲಾತಿ ಸಾಮಾನ್ಯ, ಎಸ್‌ಸಿ ಮತ್ತು ಎಸ್‌ಟಿಗೆ ಸಮಾನವಾಗಿ ಅನ್ವಯಿಸುತ್ತದೆ. ಚುನಾವಣೆ ಮುಗಿದ ಕೂಡಲೇ ಜನಗಣತಿ ಮತ್ತು ಡಿಲಿಮಿಟೇಶನ್ ನಡೆಯಲಿದ್ದು, ಸದನದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಶೀಘ್ರದಲ್ಲಿ ಹೆಚ್ಚಾಗಲಿದೆ. ಪ್ರತಿಭಟನೆಯಿಂದ ಮೀಸಲಾತಿ ಶೀಘ್ರ ಬರುವುದಿಲ್ಲ ಎಂದು ಈ ವೇಳೆ ತಿಳಿಸಿದರು.

ದೇಶವನ್ನು ನಡೆಸುತ್ತಿರುವ 90 ಕಾರ್ಯದರ್ಶಿಗಳಲ್ಲಿ ಕೇವಲ 3 ಮಂದಿ ಮಾತ್ರ ಒಬಿಸಿ. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್‌ ಶಾ, ರಾಹುಲ್ ಹೆಸರನ್ನು ತೆಗೆದುಕೊಳ್ಳದೆ, ದೇಶವನ್ನು ಸರ್ಕಾರ ನಡೆಸುತ್ತಿದೆಯೇ ಹೊರತು ಕಾರ್ಯದರ್ಶಿಗಳಲ್ಲ ಎಂದು ಹೇಳಿದರು. ಒಟ್ಟು ಬಿಜೆಪಿ ಸಂಸದರ ಪೈಕಿ 85 ಮಂದಿ ಒಬಿಸಿಯವರು. ಒಟ್ಟು ಬಿಜೆಪಿ ಶಾಸಕರ ಪೈಕಿ ಶೇ.27ರಷ್ಟು ಮಂದಿ ಒಬಿಸಿಗೆ ಸೇರಿದವರಾಗಿದ್ದಾರೆ. ಒಟ್ಟು ಬಿಜೆಪಿ ಎಂಎಲ್ ಸಿಗಳಲ್ಲಿ ಶೇ.40ರಷ್ಟು ಎಂಎಲ್‌ಸಿಗಳು ಓಬಿಸಿಯವರಾಗಿದ್ದಾರೆ.. ರಾಜಕೀಯಕ್ಕೆ ಬರುವ ಮುನ್ನ ನಾನು ಐಎಎಸ್ ಆಗಿದ್ದೆ ಎಂದು ಕಾನೂನು ಸಚಿವ ಅರ್ಜುನ್‌ರಾಮ್ ಮೇಘವಾಲ್ ಹೇಳಿದ್ದಾರೆ. 1992ರ ಬ್ಯಾಚ್‌ನ ಅಧಿಕಾರಿ ಕಾರ್ಯದರ್ಶಿಯಾಗಲಿದ್ದಾರೆ. ಆ ಸಮಯದಲ್ಲಿ ಯಾರ ಸರ್ಕಾರ ಇತ್ತು? ಅವರು (ರಾಹುಲ್ ಗಾಂಧಿ) ತಮ್ಮದೇ ಸರ್ಕಾರವನ್ನು ಶಪಿಸುತ್ತಿದ್ದಾರೆ.

ನಾನು ಇಲ್ಲಿ 128 ನೇ ತಿದ್ದುಪಡಿ ಸಂವಿಧಾನದ ತಿದ್ದುಪಡಿಯ ಬಗ್ಗೆ ಮಾತನಾಡಲು ನಿಂತಿದ್ದೇನೆ. ಅವರು ಈ ಮಾತು ಹೇಳುತ್ತಿದ್ದಂತೆಯೇ ಪ್ರತಿಪಕ್ಷಗಳು ಗದ್ದಲ ಎಬ್ಬಿಸತೊಡಗಿದವು. ಇದಕ್ಕೆ ಮುಗುಳ್ನಗುತ್ತಲೇ ರಾಹುಲ್‌ ಗಾಂಧಿ ಅವರಂತೆಯೇ ಭಯಪಡಬೇಡಿ ಎಂದು ಅಮಿತ್‌ ಶಾ ಹೇಳಿದರು. ಮಹಿಳಾ ಮೀಸಲಾತಿ ಮಸೂದೆ ಯುಗ ಪರಿವರ್ತನೆಯ ಮಸೂದೆಯಾಗಿದೆ. ನಾಳೆ ಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ. ಮೊನ್ನೆಯಷ್ಟೇ ನೂತನ ಸದನಕಕೆ ಕಾಲಿಟ್ಟಿದ್ದೇವೆ. ನಿನ್ನೆ ಗಣೇಶ ಚತುರ್ಥಿ ಹಾಗೂ ಮೊದಲ ಬಾರಿಗೆ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಬಿಲ್ ಪಾಸಾಗಿದೆ. ದೇಶದಲ್ಲಿ ಎಸ್‌ಸಿ-ಎಸ್‌ಟಿಗೆ ಮೀಸಲಾದ ಸ್ಥಾನಗಳ ಪೈಕಿ ಶೇ.33 ರಷ್ಟು ಮಹಿಳೆಯರಿಗೆ ಮೀಸಲಿಡಲಾಗುವುದು ಎಂದರು.

ಕೆಲವರಿಗೆ ಮಹಿಳಾ ಸಬಲೀಕರಣ ಚುನಾವಣೆ ಗೆಲ್ಲುವ ಸಮಸ್ಯೆಯಾಗಿರಬಹುದು, ಆದರೆ ನನ್ನ ಪಕ್ಷ ಮತ್ತು ನನ್ನ ನಾಯಕ ಮೋದಿಯವರಿಗೆ ಇದು ರಾಜಕೀಯದ ಸಮಸ್ಯೆಯೇ ಅಲ್ಲ. ಇದೊಂದು ಮನ್ನಣೆಯ ವಿಚಾರ ಎಂದರು. ಬಿಜೆಪಿ ಪಕ್ಷದ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸಿದವರು ಮೋದಿ ಎಂದು ತಿಳಿಸಿದರು.ಸಿಎಂ ಆಗಿ ಹಲವು ವರ್ಷಗಳ ಕಾಲ ಸೇವೆ ಮಾಡಿದ ಬಳಿಕ ಮೋದಿ ಅವರನ್ನು ಪ್ರಧಾನಿ ಮಾಡಿದ್ದು ಈ ಜನ. ಅಂದಾಜು 30 ವರ್ಷಗಳ ಬಳಿಕ ಪೂರ್ಣ ಬಹುಮತದೊಂದಿಗೆ ಕೇಂದ್ರದಲ್ಲಿ ಸರ್ಕಾರ ಬಂದಿದೆ. ಈ ವೇಳೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೋದಿ ತಮ್ಮ ಖಾತೆಯಲ್ಲಿದ್ದ ಹಣವನ್ನು ಕ್ಲಾಸ್‌ 3 ನೌಕರರು ಮತ್ತು ಪುತ್ರಿಯರ ಖಾತೆಗಳಿಗೆ ಹಾಕಿದ್ದರು ಎಂದು ತಿಳಿಸಿದರು.

ಈ ಸಾಂವಿಧಾನಿಕ ತಿದ್ದುಪಡಿಯು ಮೊದಲ ಬಾರಿಗೆ ಬಂದಿಲ್ಲ. ದೇವೇಗೌಡರಿಂದ ಹಿಡಿದು ಮನಮೋಹನ್ ವರೆಗೆ ನಾಲ್ಕು ಪ್ರಯತ್ನಗಳು ನಡೆದಿವೆ. ಆದರೆ, ಸಫಲವಾಗಿರಲಿಲ್ಲ. ಮೊದಲನೆಯದಾಗಿ 1996ರ ಸೆಪ್ಟೆಂಬರ್ 12ರಂದು ಪ್ರಧಾನಿ ಎಚ್.ಡಿ.ದೇವೇಗೌಡರ ಕಾಲದಲ್ಲಿ ಈ ಕುರಿತ ಸಂವಿಧಾನ ತಿದ್ದುಪಡಿ ಬಂದಿತ್ತು. ಈ ವೇಳೆ ಕಾಂಗ್ರೆಸ್ ವಿರೋಧ ಪಕ್ಷವಾಗಿತ್ತು. ಮಸೂದೆಯನ್ನು ಸದನದಲ್ಲಿ ಇರಿಸಿದ ನಂತರ ಅದನ್ನು ಗೀತಾ ಮುಖರ್ಜಿ ನೇತೃತ್ವದ ಸಮಿತಿಗೆ ನೀಡಲಾಯಿತು, ಆದರೆ ಮಸೂದೆ ಸದನವನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರಸ್ತುತ ಸಾಮಾನ್ಯ, SC, ST 3 ವರ್ಗಗಳಲ್ಲಿ ಚುನಾಯಿತರಾಗಿರುವ ಸಂಸದರು, ಪ್ರತಿಯೊಂದರಲ್ಲೂ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಟ್ಟಿದ್ದೇವೆ. ಸಮಸ್ಯೆಯೆಂದರೆ ಅವರ ಬೇರುಗಳು ಭಾರತದಲ್ಲಿಲ್ಲ, ಅವರು ಎಲ್ಲಿದ್ದಾರೆ ಎಂದು ನಾನು ಹೇಳಲು ಬಯಸುವುದಿಲ್: ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ವಿರೋಧ ಪಕ್ಷದ ವಿರುದ್ಧ ಕಿಡಿಕಾರಿದರು.

ಮಹಿಳಾ ಮೀಸಲಾತಿ ಮಸೂದೆ ಗೌರವದ ಸಂಕೇತ ಮತ್ತು ಹೊಸ ಯುಗದ ಆರಂಭ. ಮಹಿಳಾ ಮೀಸಲಾತಿ ಮಸೂದೆಯು ದೇಶದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಮತ್ತು ನೀತಿ ನಿರೂಪಣೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತದೆ. ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಹಿಳಾ ಭದ್ರತೆ, ಗೌರವ, ಸಮಾನ ಭಾಗವಹಿಸುವಿಕೆ ಸರ್ಕಾರದ ಜೀವ ಶಕ್ತಿಯಾಗಿದೆ. ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರವು ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ, ಉ20 ನಲ್ಲಿ ಮಹಿಳಾ ನೇತೃತ್ವದ ಪ್ರಗತಿಯ ದೃಷ್ಟಿಕೋನವನ್ನು ಪ್ರಧಾನಿ ಮೋದಿ ಪ್ರಸ್ತುತಪಡಿಸಿದ್ದರು ಎಂದರು. ಕೆಲವು ಪಕ್ಷಗಳಿಗೆ, ಮಹಿಳಾ ಸಬಲೀಕರಣವು ರಾಜಕೀಯ ಅಜೆಂಡಾ ಮತ್ತು ಚುನಾವಣೆ ಗೆಲ್ಲಲು ರಾಜಕೀಯ ಸಾಧನವಾಗಬಹುದು, ಆದರೆ ಬಿಜೆಪಿ ಮತ್ತು ನರೇಂದ್ರ ಮೋದಿಗೆ ಇದು ರಾಜಕೀಯ ವಿಷಯವಲ್ಲ. ಮಹಿಳಾ ಸಬಲೀಕರಣವು ಪ್ರತಿಪಕ್ಷಗಳ ರಾಜಕೀಯ ಸಾಧನವಲ್ಲದೆ ಬೇರೇನೂ ಅಲ್ಲ ಎಂದು ಅಮಿತ್ ಶಾ ಹೇಳಿದರು.

Please follow and like us:

tmadmin

Leave a Reply

Your email address will not be published. Required fields are marked *

Next Post

ಮುಂದಿನ ವರ್ಷ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್: ಅ.10ರಿಂದ ಹಣಕಾಸು ಸಚಿವಾಲಯದಿಂದ ಬಜೆಟ್ ಪೂರ್ವ ಸಭೆ

Thu Sep 21 , 2023
ಮುಂದಿನ ವರ್ಷ ಏಪ್ರಿಲ್ -ಮೇ ತಿಂಗಳಲ್ಲಿ ದೇಶದ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಬರುವ ವರ್ಷ ಫೆಬ್ರವರಿಯಲ್ಲಿ ಮಂಡಿಸುವ ಮಧ್ಯಂತರ ಕೇಂದ್ರ ಬಜೆಟ್ ಎನ್ ಡಿಎ ಸರ್ಕಾರಕ್ಕೆ ಮಹತ್ವದ್ದಾಗಿದೆ. ನವದೆಹಲಿ: ಮುಂದಿನ ವರ್ಷ ಏಪ್ರಿಲ್ -ಮೇ ತಿಂಗಳಲ್ಲಿ ದೇಶದ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಬರುವ ವರ್ಷ ಫೆಬ್ರವರಿಯಲ್ಲಿ ಮಂಡಿಸುವ ಮಧ್ಯಂತರ ಕೇಂದ್ರ ಬಜೆಟ್ ಎನ್ ಡಿಎ ಸರ್ಕಾರಕ್ಕೆ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಹಣಕಾಸು ಸಚಿವಾಲಯವು 2024-25ರ ವಾರ್ಷಿಕ ಬಜೆಟ್ನ ತಯಾರಿಗೆ ಬರುವ […]

Advertisement

Wordpress Social Share Plugin powered by Ultimatelysocial