ಮುಂಬೈ ಮತ್ತು ದೆಹಲಿಯಂತಹ ಪ್ರಮುಖ ನಗರಗಳಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ಭಾರ್ತಿ ಏರ್‌ಟೆಲ್‌ನ ಬ್ರಾಡ್‌ಬ್ಯಾಂಡ್

ನವದೆಹಲಿ, ಫೆಬ್ರವರಿ 11: ಬೆಂಗಳೂರು, ಮುಂಬೈ ಮತ್ತು ದೆಹಲಿಯಂತಹ ಪ್ರಮುಖ ನಗರಗಳಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ಭಾರ್ತಿ ಏರ್‌ಟೆಲ್‌ನ ಬ್ರಾಡ್‌ಬ್ಯಾಂಡ್ ಸೇವೆಯು ದೊಡ್ಡ ಪ್ರಮಾಣದಲ್ಲಿ ಸ್ಥಗಿತಗೊಂಡಿರುವ ಬಗ್ಗೆ ಟ್ವಿಟ್ಟರ್ ಸೇರಿದಂತೆ ಬಹುತೇಕ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ನಲ್ಲಿ ದೂರುಗಳು ಕೇಳಿ ಬಂದಿವೆ.ಇಂಟರ್ನೆಟ್ ಸ್ಥಗಿತ ಟ್ರ್ಯಾಕರ್, ಡೌನ್‌ಡೆಕ್ಟರ್ ಪ್ರಕಾರ, ಶುಕ್ರವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಏರ್‌ಟೆಲ್‌ನ ಬ್ರಾಡ್‌ಬ್ಯಾಂಡ್ ಸೇವೆ ಸ್ಥಗಿತಗೊಂಡಿದ್ದು, ಬೆಳಗ್ಗೆ 11:26ರ ವೇಳೆಗೆ ಸುಮಾರು 7,457 ದೂರುಗಳು ದಾಖಲಾಗಿವೆ.”ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕೆಲವು ತಾಂತ್ರಿಕ ದೋಷದಿಂದ ನಮ್ಮ ಇಂಟರ್ ನೆಟ್ ಸೇವೆಗಳು ಸ್ಥಗಿತಗೊಂಡಿದ್ದವು. ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಮರುಸ್ಥಾಪಿಸಲಾಗಿದ್ದು, ಗ್ರಾಹಕರಿಗೆ ಆಗಿರುವ ಅಡಚಣೆಗಾಗಿ ವಿಷಾದಿಸುತ್ತೇವೆ,” ಎಂದು ಏರ್‌ಟೆಲ್‌ನ ಕಂಪನಿ ವಕ್ತಾರರು ತಿಳಿಸಿದ್ದಾರೆ.ಮೊಬೈಲ್ ಸೇವೆ ಸೇರಿದಂತೆ ಬ್ರಾಡ್‌ಬ್ಯಾಂಡ್ ಸೇವೆಗಳ ಮೇಲೂ ತಾಂತ್ರಿಕ ದೋಷದಿಂದ ಪರಿಣಾಮ ಬೀರಿದೆ. ಕೆಲವು ಗ್ರಾಹಕರು ಏರ್‌ಟೆಲ್‌ ಮೊಬೈಲ್ ಆಪ್ ಬಳಸುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಿದ್ದಾರೆ.ಭಾರತಿ ಏರ್‌ಟೆಲ್‌ನ ಬ್ರಾಡ್‌ಬ್ಯಾಂಡ್ ಸೇವೆ ಸ್ಥಗಿತಗೊಂಡಿರುವ ಬಗ್ಗೆ ಸುದ್ದಿ ಹೆಚ್ಚಾಗಿ ಹರಡುತ್ತಿದ್ದಂತೆ ಶುಕ್ರವಾರ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರು ಮೌಲ್ಯ ಶೇ.2ರಷ್ಟು ಕುಸಿತ ಕಂಡು ಬಂದಿತು. ಆದರೆ ತದನಂತರ ಬ್ರಾಡ್‌ಬ್ಯಾಂಡ್ ಸೇವೆ ಮರುಸ್ಥಾಪಿಸಲಾಗಿದೆ ಎಂದು ಕಂಪನಿ ಸ್ಪಷ್ಟಪಡಿಸುತ್ತಿದ್ದಂತೆ ಷೇರು ಮೌಲ್ಯದಲ್ಲಿ ಕೊಂಚ ಏರಿಕೆಯಾಗಿದೆ.ಮುುಂಬೈ ವ್ಯಾಪ್ತಿಯಲ್ಲಿ ಕಳೆದ ಫೆಬ್ರವರಿ 5ರಂದು ಇದೇ ರೀತಿ ರಿಲಾಯನ್ಸ್ ಜಿಯೋ ಸೇವೆಯು ಸುದೀರ್ಘ 8 ಗಂಟೆಗಳ ಅವಧಿವರೆಗೂ ಸ್ಥಗಿತಗೊಂಡಿತ್ತು. ಜಿಯೋ ಸಿಮ್ ಕಾರ್ಡ್ ಅನ್ನು ಹೊಂದಿರುವ ಗ್ರಾಹಕರು ಇಂಟರ್ ನೆಟ್ ಸೇವೆ ಮತ್ತು ಫೋನ್ ಕಾಲ್ ಮಾಡುವುದಕ್ಕೂ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಮುಂಬೈ ಉಪನಗರ, ಥಾಣೆ, ಕಲ್ಯಾಣ್ ಮತ್ತು ದೊಂಬಿವ್ಲಿ ಪ್ರದೇಶದಲ್ಲಿ ಗ್ರಾಹಕರು ಇದರಿಂದ ತೀವ್ರ ತೊಂದರೆ ಎದುರಿಸಿದರು. ರಿಲಾಯನ್ಸ್ ಜಿಯೋ ಗ್ರಾಹಕರು ಸೇವೆ ಸ್ಥಗಿತದ ಕುರಿತು ದೂರುಗಳನ್ನೂ ದಾಖಲಿಸಿದ್ದರು.ರಿಲಾಯನ್ಸ್ ಜಿಯೋ ಬಳಕೆ ಗ್ರಾಹಕರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಜಿಯೋ ಬಳಕೆದಾರರಲ್ಲದ ಗ್ರಾಹಕರೂ ಕೂಡ ದೂರುಗಳನ್ನು ನೀಡಿದ್ದರು. ಮುಂಬೈನಲ್ಲಿ ರಾತ್ರಿ 8 ಗಂಟೆ ವೇಳೆಗೆ ಅಂತಿಮವಾಗಿ ರಿಲಾಯನ್ಸ್ ಜಿಯೋ ಸೇವೆಗಳನ್ನು ಮರು ಸ್ಥಾಪಿಸಲಾಗಿತ್ತು. ಮುಂಬೈ ವ್ಯಾಪ್ತಿಯಲ್ಲೇ ರಿಲಾಯನ್ಸ್ ಜಿಯೋ ಬಳಕೆದಾರರ ಸಂಖ್ಯೆ 1.30 ಕೋಟಿಗೂ ಹೆಚ್ಚಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BMW:₹1.43 ಕೋಟಿಯಲ್ಲಿ BMW ಎಂ4 ಸ್ಪರ್ಧೆ ಆರಂಭ!

Fri Feb 11 , 2022
BMW M ಕಾರುಗಳು ಕ್ರೇಜಿ ಮ್ಯಾಡ್ನೆಸ್ ಟಾರ್ಕ್ ಮತ್ತು ವೇಗಕ್ಕಾಗಿ ಅಧಿಕೃತವಾಗಿ ತಯಾರಿಸಲ್ಪಟ್ಟಿವೆ ಎಂಬ ಅಂಶವು ನಮಗೆಲ್ಲರಿಗೂ ತಿಳಿದಿದೆ. ಈಗ, BMW ಇಂಡಿಯಾ ಭಾರತದಲ್ಲಿ M ಶ್ರೇಣಿಗೆ ಸೇರ್ಪಡೆಯಾಗಿದೆ! BMW ಭಾರತದಲ್ಲಿ M4 ಸ್ಪರ್ಧೆಯ ಕೂಪೆಯನ್ನು ₹1,43,90,000 (ಎಕ್ಸ್ ಶೋ ರೂಂ) ನಲ್ಲಿ ಬಿಡುಗಡೆ ಮಾಡಿದೆ. M4 ಸ್ಪರ್ಧೆಯು CBU ಮಾರ್ಗದ ಮೂಲಕ ಭಾರತಕ್ಕೆ ಬರುತ್ತದೆ. ಆದಾಗ್ಯೂ, ಹೆಚ್ಚು ಪ್ರಾಯೋಗಿಕ M3 ಸೆಡಾನ್ ಅನ್ನು ಬಾರ್ವೇರಿಯನ್ ಕಾರು ತಯಾರಕರಿಂದ ಮಿಸ್ […]

Advertisement

Wordpress Social Share Plugin powered by Ultimatelysocial