ವಂದೇ ಭಾರತ್ ಮಿಶನ್ ಜುಲೈ ೧೨-೨೬ರ ವರೆಗೆ

ವಂದೇ ಭಾರತ್ ಮಿಶನ್ ಯೋಜನೆಯಡಿ ಅನಿವಾಸಿ ಭಾರತೀಯರಿಗೆ ಜು.೧೨ ರಿಂದ ಜು.೨೬ರ ಅವಧಿಯಲ್ಲಿ ವಿದೇಶಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಮರಳಿ ಉದ್ಯೋಗ, ಉದ್ಯಮ ಕ್ಷೇತ್ರದ ದೇಶಕ್ಕೆ ಹೋಗಲು ಅನುವು ಮಾಡಿಕೊಡುವಂತೆ ಅನಿವಾಸಿ ಭಾರತೀಯರು ಮನವಿ ಮಾಡಿದ್ದರು. ಈ ಸಂಬAಧ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ವಿಮಾನಯಾನ ಸಚಿವರನ್ನು ಸಂಪರ್ಕಿಸಿ ವಿದೇಶಕ್ಕೆ ಹೋಗುವವರಿಗೆ ಪ್ರಯಾಣಕ್ಕೆ ಅನುಮತಿ ನೀಡುವಂತೆ ವಿನಂತಿಸಿದ್ದರು. ಭಾರತೀಯ ವಿಮಾನ ಯಾನ ಸಂಸ್ಥೆಯು ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದೆ. ಪ್ರಯಾಣಿಕರು ಭಾರತೀಯ ರಾಯಭಾರ ಅಥವಾ ಅಬುಧಾಬಿಯ ರಾಯಭಾರ ಕಚೇರಿಯ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ನೋಂದಣಿ ಪ್ರಕ್ರಿಯೆ ಪೂರ್ಣವಾದ ಬಳಿಕ ಟಿಕೆಟ್ ಮಾಡಬಹುದು ಎಂದು ತಿಳಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ವಿವಿಧೆಡೆ ಪ್ರಗತಿಯಲ್ಲಿರುವ ತ್ಯಾಜ್ಯ ಪ್ಲಾಸ್ಟಿಕ್ ಮಿಶ್ರಿತ ರಸ್ತೆ ಕಾಮಗಾರಿ

Sat Jul 11 , 2020
ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ವೇಳೆ, ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತಿದೆ. ಈವರೆಗೆ ೧ ಲಕ್ಷ ಕಿ.ಮೀ.ವರೆಗಿನ ರಸ್ತೆ ನಿರ್ಮಾಣದಲ್ಲಿ ಇಂಥ ಪ್ಲಾಸ್ಟಿಕ್ ಅನ್ನೇ ಬಳಸಲಾಗಿದೆ. ಈ ವರ್ಷ ೨ ಲಕ್ಷ ಕಿ.ಮೀ. ವರೆಗಿನ ರಸ್ತೆಯನ್ನು ಇಂಥ ಪ್ಲಾಸ್ಟಿಕ್‌ನಿಂದಲೇ ನಿರ್ಮಿಸುವ ಇರಾದೆಯನ್ನು ವಿವಿಧ ರಾಜ್ಯ ಸರ್ಕಾರÀಗಳು ಹೊಂದಿದೆ. ಇಂಥ ರಸ್ತೆಗಳ ಪ್ರತಿ ಒಂದು ಕಿ.ಮೀ. ನಿರ್ಮಾಣಕ್ಕೆ ೯ ಟನ್‌ನಷ್ಟು ಡಾಂಬರ್ ಹಾಗೂ ೧ ಟನ್‌ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಬೇಕಾಗುತ್ತದೆ. ಹೀಗಾಗಿ, […]

Advertisement

Wordpress Social Share Plugin powered by Ultimatelysocial