ವಲಸಿಗರ ದೋಣಿಯೊಂದು ಸಮುದ್ರದಲ್ಲಿ ಸಂಭವಿಸಿದ ದುರಂತದಲ್ಲಿ ಕನಿಷ್ಠ 60 ಮಂದಿ ಮೃತಪಟ್ಟಿದ್ದಾರೆ.

 

ಟೆಲಿ: ವಲಸಿಗರ ದೋಣಿಯೊಂದು ಸಮುದ್ರದಲ್ಲಿ ಸಂಭವಿಸಿದ ದುರಂತದಲ್ಲಿ ಕನಿಷ್ಠ 60 ಮಂದಿ ಮೃತಪಟ್ಟಿದ್ದಾರೆ. ಇಟೆಲಿಯ ದಕ್ಷಿಣ ತೀರದಲ್ಲಿ ಈ ದುರಂತ ಸಂಭವಿಸಿದೆ

ಕಲಬ್ರಿಯಾದ ಕರಾವಳಿ ಪಟ್ಟಣ ಕ್ರೊಟೋನ್‌ನ ಬಂದರು ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ಆರ್‌ಎಐ ರೇಡಿಯೊ, ಈ ದೋಣಿಯಲ್ಲಿ 100ಕ್ಕೂ ಹೆಚ್ಚು ವಲಸಿಗರು ಪ್ರಯಾಣಿಸುತ್ತಿದ್ದರು ಎಂದು ಹೇಳಿದೆ.

ಸಮುದ್ರದಲ್ಲಿ ಮುಂಜಾನೆ ವೇಳೆ ದೋಣಿ ತೊಂದರೆಗೆ ಸಿಲುಕಿಕೊಂಡಿದೆ.

“ಸದ್ಯಕ್ಕೆ ಹಲವು ಮಂದಿ ಸಂತ್ರಸ್ತರು ಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ದುರಂತದಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎನ್ನುವುದನ್ನು ಅವರು ಬಹಿರಂಗಪಡಿಸಿಲ್ಲ.

ಕರಾವಳಿ ಕಾವಲು ಪಡೆ, ಗಡಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ನಾವೆಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ. ದುರಂತದಲ್ಲಿ ಮಡಿದವರು ಯಾವ ದೇಶದ ವಲಸಿಗರು ಎನ್ನುವುದು ತಿಳಿದು ಬಂದಿಲ್ಲ. ಆದರೆ ಟರ್ಕಿ ಹಾಗೂ ಈಜಿಪ್ಟ್ ಕರಾವಳಿಯಿಂದ ಕಲಬ್ರಿಯಾ ಪಟ್ಟಣಕ್ಕೆ ವಲಸೆ ನಾವೆಗಳು ಬರುತ್ತಿವೆ ಎಂದು ಮೂಲಗಳು ಹೇಳಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಲ್ಲಿ ಘೋರ ಘಟನೆ :

Mon Feb 27 , 2023
ಬೆಂಗಳೂರು : 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಖಾಸಗಿ ಅಪಾರ್ಟ್ ಮೆಂಟ್ 10ನೇ ಮಹಡಿ ಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈಗೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮೃತಳನ್ನು ಸಂಜಯನಗರದ ಸಾಫ್ಟ್ವೇರ್ ಎಂಜಿನಿಯ ಅರವಿಂದ್ ಹಾಗೂ ತೇಜು ಕೌಶಿಕ್ ದಂಪತಿಯ ಪುತ್ರಿ ಪ್ರಕೃತಿ (18) ಎಂದು ಗುರುತಿಸಲಾಗಿದೆ.ಭಾನುವಾರ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದೆ.ಪ್ರಕೃತಿ ಚಾಲುಕ್ಯ ಸರ್ಕಲ್ ಸಮೀಪದ ಸೋಫಿಯಾ ಕಾಲೇಜಿನಲ್ಲಿ 12ನೇ ತರಗತಿ ಓದುತ್ತಿದ್ದಳು. ಭಾನುವಾರ ಮಧ್ಯಾಹ್ನ ಹೊರಗೆ ಸುತ್ತಾಡಿಕೊ೦ಡು […]

Advertisement

Wordpress Social Share Plugin powered by Ultimatelysocial