ವಿಷ್ಣುವರ್ಧನ್​ ಒಡನಾಡಿ, ನಿರ್ದೇಶಕ ವಿಆರ್​ ಭಾಸ್ಕರ್​ ಅನಾರೋಗ್ಯದಿಂದ ನಿಧನ

ವಿ.ಆರ್​. ಭಾಸ್ಕರ್ ಅವರು ಮೂಲತಃ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನವರು. ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಬಗ್ಗೆ ಅವರು ಆಸಕ್ತಿ ಹೊಂದಿದ್ದರು. ವಿಷ್ಣುವರ್ಧನ್​ ನಟನೆಯ ಅನೇಕ ಸಿನಿಮಾಗಳಿಗೆ ಭಾಸ್ಕರ್​ ಕೆಲಸ ಮಾಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು (ಸೆಪ್ಟೆಂಬರ್​ 14) ಮುಂಜಾನೆ ನಿಧನರಾದರು.
ಮೈಸೂರಿನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.ಕನ್ನಡ ಚಿತ್ರರಂಗದಲ್ಲಿ (Sandalwood) ಗುರುತಿಸಿಕೊಂಡಿದ್ದ ನಿರ್ದೇಶಕ, ಸಂಭಾಷಣಕಾರ, ಗೀತ ಸಾಹಿತಿ ವಿ.ಆರ್​. ಭಾಸ್ಕರ್​ (V R Bhaskar) ಅವರು ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಅವರು ಮೈಸೂರಿನಲ್ಲಿ ಗುರುವಾರ (ಸೆ.14) ವಿಧಿವಶರಾಗಿದ್ದಾರೆ. ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದ ಭಾಸ್ಕರ್​ ಅವರು ಡಾ.ವಿಷ್ಣುವರ್ಧನ್​ (Dr Vishnuvardhan) ಅವರ ಜೊತೆ ಒಡನಾಟ ಹೊಂದಿದ್ದರು. ನಟನಾಗಿಯೂ ಅವರು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ವಿ.ಆರ್​. ಭಾಸ್ಕರ್​ ಅವರ ಜೀವನದಲ್ಲಿ ಕಷ್ಟ ಆವರಿಸಿತ್ತು. ಕೆಲವೇ ದಿನಗಳ ಹಿಂದೆ ಪತ್ನಿ ಮತ್ತು ಮಗನನ್ನು ಕೂಡ ಅವರು ಅನಾರೋಗ್ಯದಿಂದ ಕಳೆದುಕೊಂಡಿದ್ದರು. ಮೈಸೂರಿನಲ್ಲೇ ವಿ.ಆರ್​. ಭಾಸ್ಕರ್​ ಅಂತ್ಯಕ್ರಿಯೆ ನಡೆಯಲಿದೆ.

ವಿ.ಆರ್​. ಭಾಸ್ಕರ್ ಅವರು ಮೂಲತಃ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನವರು. ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಬಗ್ಗೆ ಅವರು ಆಸಕ್ತಿ ಹೊಂದಿದ್ದರು. ಮೈಸೂರಿಗೆ ಬಂದ ಬಳಿಕ ಸಿನಿಮಾದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ನಿರ್ಧರಿಸಿದರು. ಆದರೆ ಆರಂಭದ ದಿನಗಳಲ್ಲಿ ಕುಟುಂಬದಿಂದ ಭಾಸ್ಕರ್​ ಅವರಿಗೆ ಉತ್ತೇಜನ ಸಿಗಲಿಲ್ಲ. ನಂತರ ಹಠ ಹಿಡಿದು ಫಿಲ್ಮ್​ ಇನ್ಸ್​ಟಿಟ್ಯೂಟ್​ಗೆ ಸೇರಿಕೊಂಡು ಸಿನಿಮಾದ ಪಾಠಗಳನ್ನು ಕಲಿತರು.

ಭಾರತಿ ವಿಷ್ಣುವರ್ಧನ್​ ಜೀವನದ ಕುರಿತ ಸಾಕ್ಷ್ಯಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಅನಿರುದ್ಧ್​ ಜತ್ಕರ್​

‘ರುದ್ರನಾಗ’ ಸಿನಿಮಾಗೆ ಸಹ ನಿರ್ದೇಶಕರಾಗಿ ವಿ.ಆರ್​. ಭಾಸ್ಕರ್​ ಅವರು ಕೆಲಸ ಮಾಡಿದ್ದರು. ಅವರ ಕೆಲಸವನ್ನು ಮೆಚ್ಚಿದ ವಿಷ್ಣುವರ್ಧನ್​ ಅವರು ಅನೇಕ ಅವಕಾಶಗಳನ್ನು ನೀಡಿದರು. ವಿಷ್ಣುವರ್ಧನ್​ ಅವರು ಸ್ವಂತ ಬ್ಯಾನರ್​ನಲ್ಲಿ ‘ಆರಾಧನೆ’ ಸಿನಿಮಾ ಮಾಡಿದ್ದರು. ಆ ಚಿತ್ರದಲ್ಲಿಯೂ ಅವರಿಗೆ ಅವಕಾಶ ಸಿಕ್ಕಿತು.

Please follow and like us:

tmadmin

Leave a Reply

Your email address will not be published. Required fields are marked *

Next Post

ಬಿಬಿಎಂಪಿ ಚುನಾವಣೆಗೂ ಮುನ್ನ ಬಿಜೆಪಿ ಮಾಜಿ ಕಾರ್ಪೋರೇಟರ್‌ಗಳಿಗೆ ಡಿಕೆಶಿ ಗಾಳ?

Thu Sep 14 , 2023
ಬೆಂಗಳೂರು, ಸೆಪ್ಟೆಂಬರ್‌ 14: ಪದ್ಮನಾಭನಗರ ಕ್ಷೇತ್ರದಲ್ಲಿ ಎಂಟು ಮಾಜಿ ಬಿಜೆಪಿ ಕಾರ್ಪೊರೇಟರ್‌ಗಳನ್ನು ಕಾಂಗ್ರೆಸ್‌ಗೆ ಸೇರಲು ಯಶಸ್ವಿಯಾಗಿ ಮನವೊಲಿಸಿದ ನಂತರ, ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈಗ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ವಿರೋಧ ಪಕ್ಷದ ನಾಯಕರ ಮೇಲೆ ದೃಷ್ಟಿ ನೆಟ್ಟಿದ್ದಾರೆ ಎಂದು ತಿಳಿದು ಬಂದಿದೆ.   ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿರುವ ಶಿವಕುಮಾರ್ ಅವರು ಈ ವರ್ಷಾಂತ್ಯಕ್ಕೆ ಘೋಷಣೆಯಾಗುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಮುಂಚಿತವಾಗಿ ಬಿಜೆಪಿಯ ಮಾಜಿ […]

Advertisement

Wordpress Social Share Plugin powered by Ultimatelysocial