ಸಿಎಂ ಇಬ್ರಾಹಿಂ- ಸಿದ್ದರಾಮಯ್ಯ ಮಾತಿನ ಚಕಮಕಿ

ಸಿಎಂ ಇಬ್ರಾಹಿಂ- ಸಿದ್ದರಾಮಯ್ಯ ಮಾತಿನ ಚಕಮಕಿ ಕುರಿತ ಬಿಜೆಪಿ ವಿಡಿಯೋ ವೈರಲ್!

ಬೆಳಗಾವಿ: ಬುಧವಾರ ಸಂಜೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಸಿಎಂ ಇಬ್ರಾಹಿಂ ನಡುವಿನ ಮಾತಿನ ಚಕಮಕಿ ವಿಡಿಯೋ ಕ್ಲಿಪ್’ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ರಾಜ್ಯ ಬಿಜೆಪಿ ಘಟಕ ಕೂಡ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದೆ. ವಿಡಿಯೋದಲ್ಲಿ ಇಬ್ಬರು ನಾಯಕರು ಅವಾಚ್ಯ ಶಬ್ಧಗಳಿಂದ ಒಬ್ಬರನ್ನೊಬ್ಬರು ನಿಂದಿಸಿರುವುದು ಕಂಡು ಬಂದಿದೆ.

ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ‌ ಹಾಗೂ ಸಿ.ಎಂ. ಇಬ್ರಾಹಿಂ ಅವರ ಅದ್ಭುತ ವಾಗ್ಝರಿ. ಇದೇ ಸಿದ್ದರಾಮಯ್ಯ ಅವರು ಅವರು ಬೇರೆಯವರಿಗೆ ಸಂಸದೀಯ ವ್ಯವಸ್ಥೆಯ ಬಗ್ಗೆ ಪಾಠ ಮಾಡುತ್ತಾರೆ, ಎಂತಹ ವಿಪರ್ಯಾಸ ಎಂದು ಹೇಳಿಕೊಂಡಿದೆ.

Please follow and like us:

Leave a Reply

Your email address will not be published. Required fields are marked *

Next Post

'ಸರ್ಕಾರಿ ಜಮೀನು ಅತಿಕ್ರಮಿಸಿದ'ವರಿಗೆ ಬಿಗ್ ಶಾಕ್

Thu Dec 16 , 2021
ಬೆಳಗಾವಿ: ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಸರಕಾರ ಜಮೀನನ್ನು ಖಾಸಗಿಯವರು ಅತಿಕ್ರಮಿಸಿಕೊಂಡಿರುವುದನ್ನು ಎಚ್ಚೆತ್ತಿರುವ ರಾಜ್ಯ ಸರಕಾರ, ತನ್ನ ಜಮೀನನ್ನು ವಶಪಡಿಸಿಕೊಳ್ಳಲು ವಿಶೇಷ ಕ್ರಮಗಳನ್ನು ಕೈಗೊಂಡಿದೆ ಮತ್ತು ಭೂಕಬಳಿ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯವನ್ನು ಸಹ ಸ್ಥಾಪನೆ ಮಾಡಿದೆ. ವಿಧಾನಪರಿಷತ್‍ನಲ್ಲಿ ಕಂದಾಯ ಸಚಿವ ಆರ್.ಅಶೋಕ ಅವರು ಡಾ.ವೈ.ಎ.ನಾರಾಯಣಸ್ವಾಮಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಸವಿವರವಾಗಿ ಉತ್ತರಿಸಿದ ಅವರು, ಬೆಂಗಳೂರು ನಗರ ಜಿಲ್ಲೆಯಲ್ಲಿ 14660 ಪ್ರಕರಣಗಳಲ್ಲಿ 38,888 ಎಕರೆ […]

Advertisement

Wordpress Social Share Plugin powered by Ultimatelysocial