ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಪ್ಯಾಕು ಪ್ಯಾಕು’ ಹಿತೇಶ್ ಕಾಪಿನಡ್ಕ

‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ಭಾಗವಹಿಸಿ ವೀಕ್ಷಕರ ಮನಗೆದ್ದಿದ್ದವರು ಹಿತೇಶ್ ಕುಮಾರ್ ಕಾಪಿನಡ್ಕ  ‘ಪ್ಯಾಕು.. ಪ್ಯಾಕು..’ ಎನ್ನುತ್ತಾ ವೀಕ್ಷಕರನ್ನ ನಗೆಗಡಲಲ್ಲಿ ತೇಲಿಸಿದವರು ಹಿತೇಶ್ ಕುಮಾರ್ ಕಾಪಿನಡ್ಕ. ಕರಾವಳಿಯ ಪ್ರತಿಭೆ ಹಿತೇಶ್ ಕುಮಾರ್ ಕಾಪಿನಡ್ಕ ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಪ್ರೀತಿಸಿದ ಹುಡುಗಿಯ ಜೊತೆ ಹಿತೇಶ್ ಕುಮಾರ್ ಕಾಪಿನಡ್ಕ ಹಸೆಮಣೆ ಏರಿದ್ದಾರೆ.ಹಿತೇಶ್ ಕುಮಾರ್ ಕಾಪಿನಡ್ಕ ಹಾಗೂ ಸ್ವಾತಿ ಅವರ ವಿವಾಹ ಮಹೋತ್ಸವ ಜರುಗಿದೆ. ಅದ್ಧೂರಿಯಾಗಿ, ಅಷ್ಟೇ ಸಾಂಪ್ರದಾಯಿಕವಾಗಿ ಹಿತೇಶ್ ಕುಮಾರ್ ಕಾಪಿನಡ್ಕ ಹಾಗೂ ಸ್ವಾತಿ ಅವರ ಮದುವೆ ನೆರವೇರಿದೆ. ಹಿತೇಶ್ ಕುಮಾರ್ ಕಾಪಿನಡ್ಕ ಹಾಗೂ ಸ್ವಾತಿ ಕಲ್ಯಾಣಕ್ಕೆ ಕುಟುಂಬಸ್ಥರು, ಆಪ್ತರು ಹಾಗೂ ‘ಕಾಮಿಡಿ ಕಿಲಾಡಿಗಳು’ ಸಾಕ್ಷಿಯಾಗಿದ್ದರು.ಹಿತೇಶ್ ಕುಮಾರ್ ಕಾಪಿನಡ್ಕ ಹಾಗೂ ಸ್ವಾತಿ ಕಳೆದ ಒಂದು ದಶಕದಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಹಿತೇಶ್ ಕುಮಾರ್ ಕಾಪಿನಡ್ಕ ಮತ್ತು ಸ್ವಾತಿ ಒಂದೇ ಗ್ರಾಮಕ್ಕೆ ಸೇರಿದವರು. ದೇವಸ್ಥಾನವೊಂದರಲ್ಲಿ ಸ್ವಾತಿ ಅವರನ್ನ ಹಿತೇಶ್ ಮೊದಲ ಬಾರಿಗೆ ನೋಡಿದ್ದರು. ಆನಂತರ ಪರಿಚಯವಾದ ಇವರಿಬ್ಬರು ಸ್ನೇಹಿತರಾದರು. ಸ್ನೇಹ ಪ್ರೀತಿಗೆ ತಿರುಗಿತು. ಸುಮಾರು ಒಂದು ದಶಕದಿಂದ ಪ್ರೀತಿಸುತ್ತಿದ್ದ ಸ್ವಾತಿ ಹಾಗೂ ಹಿತೇಶ್ ಮದುವೆಗೆ ಕುಟುಂಬಸ್ಥರೂ ಸಮ್ಮತಿ ಸೂಚಿಸಿದರು. ಪರಿಣಾಮ, ಇಬ್ಬರ ಪ್ರೀತಿಗೆ ಇದೀಗ ಅಧಿಕೃತ ಮುದ್ರೆ ಬಿದ್ದಂತಾಗಿದೆ.ಡಿಸೆಂಬರ್ 19, 2021 ರಂದು ಹಿತೇಶ್ ಕುಮಾರ್ ಕಾಪಿನಡ್ಕ ಹಾಗೂ ಸ್ವಾತಿ ಅವರ ನಿಶ್ಚಿತಾರ್ಥ ನಡೆದಿತ್ತು. ಒಂದು ವರ್ಷದ ಬಳಿಕ ಹಿತೇಶ್ ಹಾಗೂ ಸ್ವಾತಿ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹರಿದ ನೋಟನ್ನು ಬದಲಾಯಿಸಬೇಕೇ, ಆರ್‌ಬಿಐ ನಿಯಮ ತಿಳಿಯಿರಿ.

Fri Jan 6 , 2023
ನಮ್ಮಲ್ಲಿ ಎಷ್ಟೋ ಮಂದಿಯಲ್ಲಿ ಹರಿದ ನೋಟುಗಳು ಇರಬಹುದು, 500, 2000, 200 ರೂಪಾಯಿಯ ಹರಿದ ನೋಟು ಕೂಡಾ ಇರಬಹುದು. ಆ ನೋಟನ್ನು ಯಾವ ರೀತಿ ಬದಲಾವಣೆ ಮಾಡಿಕೊಳ್ಳುವುದು ಎಂದು ಈಗಲೂ ಅದೆಷ್ಟೋ ಮಂದಿಗೆ ತಿಳಿದಿಲ್ಲ. ಇತ್ತೀಚೆಗೆ ಆರ್‌ಬಿಐ ಹರಿದ ಅಥವಾ ಹಳೆಯದಾದ ನೋಟುಗಳ ಸಮಸ್ಯೆಯನ್ನು ಬಗೆಹರಿಸುವಂತಹ ನೀತಿಯನ್ನು ಜಾರಿಗೆ ತಂದಿದೆ.ಹೌದು, ನಿಮ್ಮಲ್ಲಿ ಹರಿದ ಅಥವಾ ಏನಾದರು ಬರೆದಿರುವ ನೋಟುಗಳು ಇದ್ದರೆ, ಅದಕ್ಕೆ ಮೌಲ್ಯವೇ ಇಲ್ಲ ಎಂದು ಆತಂಕ ಪಡಬೇಕಾಗಿಲ್ಲ. ರಿಸರ್ವ್ […]

Advertisement

Wordpress Social Share Plugin powered by Ultimatelysocial