ಬರೀ 49ರೂ.ಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಚಂದಾದಾರಿಕೆ!..

ಬರೀ 49ರೂ.ಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಚಂದಾದಾರಿಕೆ!..ಇಲ್ಲಿದೆ ಪೂರ್ಣ ಮಾಹಿತಿ!

ಜನಪ್ರಿಯ ಓಟಿಟಿ ಪ್ಲಾಟ್‌ಫ್ಲಾರ್ಮ್‌ಗಳ ಪೈಕಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಸಹ ಒಂದಾಗಿದೆ. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿ ಚಂದಾದಾರಿಕೆಯ ಯೋಜನೆಗಳ ಆಯ್ಕೆ ಹೊಂದಿದೆ. ಡಿಸ್ನಿ+ ಹಾಟ್‌ಸ್ಟಾರ್ ಈಗ ನೂತನವಾಗಿ ಆಯ್ದ ಆಂಡ್ರಾಯ್ಡ್ ಬಳಕೆದಾರರಿಗಾಗಿ ಹೊಸ ಮಾಸಿಕ ಮೊಬೈಲ್ ಯೋಜನೆಯನ್ನು ಪರೀಕ್ಷಿಸುತ್ತಿದೆ.

ಆಯ್ದ ಪಾವತಿ ವಿಧಾನಗಳಲ್ಲಿ ತಿಂಗಳಿಗೆ 49 ರೂ.ಗಳಿಗೆ ಮೊಬೈಲ್ ಪ್ಲಾನ್ ಬಳಕೆದಾರರಿಗೆ ಲಭ್ಯವಿದೆ.

ಡಿಸ್ನಿ+ ಹಾಟ್‌ಸ್ಟಾರ್ ತಿಳಿಸಿರುವ ಹೊಸ ಯೋಜನೆಯು ಜಾಹೀರಾತು ಬೆಂಬಲಿತವಾಗಿದೆ. ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಸಂಪೂರ್ಣ ಡಿಸ್ನಿ+ ಹಾಟ್‌ಸ್ಟಾರ್ ಕ್ಯಾಟಲಾಗ್‌ಗೆ ಚಂದಾದಾರರಿಗೆ ಪ್ರವೇಶವನ್ನು ನೀಡುತ್ತದೆ. ಆದಾಗ್ಯೂ, ಬಳಕೆದಾರರು ಒಂದು ಸಮಯದಲ್ಲಿ ಒಂದು ಸಾಧನವನ್ನು ಮಾತ್ರ ಲಾಗ್ ಇನ್ ಮಾಡಲು ಸಾಧ್ಯವಾಗುತ್ತದೆ. ಈ ಯೋಜನೆಯಲ್ಲಿ ಬಳಕೆದಾರರು 720p ಹೆಚ್‌ಡಿ ವೀಡಿಯೊ ರೆಸಲ್ಯೂಶನ್ ಮತ್ತು ಸ್ಟಿರಿಯೊ ಆಡಿಯೊ ಗುಣಮಟ್ಟಕ್ಕೆ ಪ್ರವೇಶ ಸಿಗುತ್ತದೆ.

ಹಾಗೆಯೇ ಡಿಸ್ನಿ+ ಹಾಟ್‌ಸ್ಟಾರ್ ತನ್ನ ಮೊಬೈಲ್ ಪ್ಲಾನ್‌ನಲ್ಲಿ 100ರೂ. ರಿಯಾಯಿತಿಯನ್ನು ನೀಡುತ್ತಿದ್ದು, ಇದು 6 ತಿಂಗಳ ಚಂದಾದಾರಿಕೆಗೆ ಲಭ್ಯವಿದೆ. ತಿಂಗಳಿಗೆ 299 ರೂಪಾಯಿಗಳ ಮೊಬೈಲ್ ಪ್ಲಾನ್ ಆರು ತಿಂಗಳವರೆಗೆ ಚಂದಾದಾರರಾಗಿದ್ದರೆ ತಿಂಗಳಿಗೆ 199ರೂ. ಗಳಿಗೆ ಲಭ್ಯ ಆಗಲಿದೆ. ಸೆಪ್ಟೆಂಬರ್‌ನಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಹೊಸ ಚಂದಾದಾರಿಕೆ ಪ್ಯಾಕ್‌ಗಳನ್ನು ಘೋಷಿಸಿತು. ಅವುಗಳು ಸೆಪ್ಟೆಂಬರ್ 1 ರಂದು ಚಾಲ್ತಿ ಆಗಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಕಾಶದಲ್ಲಿ ಕಂಡ ಚಲಿಸುವ ಬೆಳಕಿನ ಸರಮಾಲೆಗೆ ಅಚ್ಚರಿಯ ಕಾರಣ ಏನು ಗೊತ್ತಾ?

Tue Dec 21 , 2021
ನೆನ್ನೆ ಸಂಜೆ 7 ರ ಸುಮಾರಿಗೆ ರಾಜ್ಯದ ಕೆಲವು ಪ್ರದೇಶಗಳಲ್ಲಿ ಆಗಸದಲ್ಲಿ ಅಚ್ಚರಿಯ ಮೂಡಿಸುವಂತಹ ಸನ್ನಿವೇಶ ಕಂಡು ಬಂದಿದೆ. ಆಕಾಶದಲ್ಲಿ ಸಾಗುತ್ತಿರುವ ಬೆಳಕಿನ ಸರಮಾಲೆ ಕಂಡು ಬಂದಿದ್ದು, ಇದನ್ನು ಕಂಡ ಜನರು ಆಶ್ಚರ್ಯಗೊಂಡಿದ್ದರು. ನೋಡಲು ಅವು ನಕ್ಷತ್ರಗಳಂತೆ ಕಂಡು ಬಂದಿದ್ದು, ರೈಲಿನಂತೆ ಚಲಿಸಿದ್ದು ಜನರಲ್ಲಿ ಅಚ್ಚರಿ ಮೂಡಿಸಿದ್ದವು. ಆದರೆ ಅದರ ಅಸಲಿ ಕಾರಣ ಏನು ಎನ್ನುವುದು ಈಗ ಬಹಿರಂಗ ಆಗಿದೆ. ಆಗಸದಲ್ಲಿ ಕಂಡ ಬೆಳಕಿನ ಸರಮಾಲೆಗೆ ಕಾರಣ ವಿಶ್ವದ ಶ್ರೀಮಂತ […]

Advertisement

Wordpress Social Share Plugin powered by Ultimatelysocial