ಆಕಾಶದಲ್ಲಿ ಕಂಡ ಚಲಿಸುವ ಬೆಳಕಿನ ಸರಮಾಲೆಗೆ ಅಚ್ಚರಿಯ ಕಾರಣ ಏನು ಗೊತ್ತಾ?

ಆಕಾಶದಲ್ಲಿ ಕಂಡ ಚಲಿಸುವ ಬೆಳಕಿನ ಸರಮಾಲೆಗೆ ಅಚ್ಚರಿಯ ಕಾರಣ ಏನು ಗೊತ್ತಾ?

ನೆನ್ನೆ ಸಂಜೆ 7 ರ ಸುಮಾರಿಗೆ ರಾಜ್ಯದ ಕೆಲವು ಪ್ರದೇಶಗಳಲ್ಲಿ ಆಗಸದಲ್ಲಿ ಅಚ್ಚರಿಯ ಮೂಡಿಸುವಂತಹ ಸನ್ನಿವೇಶ ಕಂಡು ಬಂದಿದೆ. ಆಕಾಶದಲ್ಲಿ ಸಾಗುತ್ತಿರುವ ಬೆಳಕಿನ ಸರಮಾಲೆ ಕಂಡು ಬಂದಿದ್ದು, ಇದನ್ನು ಕಂಡ ಜನರು ಆಶ್ಚರ್ಯಗೊಂಡಿದ್ದರು. ನೋಡಲು ಅವು ನಕ್ಷತ್ರಗಳಂತೆ ಕಂಡು ಬಂದಿದ್ದು, ರೈಲಿನಂತೆ ಚಲಿಸಿದ್ದು ಜನರಲ್ಲಿ ಅಚ್ಚರಿ ಮೂಡಿಸಿದ್ದವು.

ಆದರೆ ಅದರ ಅಸಲಿ ಕಾರಣ ಏನು ಎನ್ನುವುದು ಈಗ ಬಹಿರಂಗ ಆಗಿದೆ.

ಆಗಸದಲ್ಲಿ ಕಂಡ ಬೆಳಕಿನ ಸರಮಾಲೆಗೆ ಕಾರಣ ವಿಶ್ವದ ಶ್ರೀಮಂತ ಉದ್ಯಮಿ ಆಗಿ ಗುರುತಿಸಿಕೊಂಡಿರುವ ಎಲಾನ್ ಮಸ್ಕ್ (Elon Musk). ಹೌದು, ಸ್ಯಾಟ್‌ಲೈಟ್‌ಗಳ ಮೂಲಕ ವಿಶ್ವದ ಮೂಲೆ ಮೂಲೆಗೂ ಅಂತರ್ಜಾಲ / ಇಂಟರ್ನೆಟ್ ಸೇವೆಯನ್ನು ಒದಗಿಸುವ ಗುರಿಯನ್ನು ಹಾಕಿಕೊಂಡಿರುವ ಎಲಾನ್ ಮಸ್ಕ್ ಮಾಲೀಕತ್ವದ ಸ್ಪೇಸ್ ಎಕ್ಸ್ (SpaceX) ಸಂಸ್ಥೆಯು ಉಡಾವಣೆ ಮಾಡಿರುವ ಸರಣಿ ಉಪಗ್ರಹಗಳ ಸರಮಾಲೆಯೇ ಆಕಾಶದಲ್ಲಿ ಆ ರೀತಿ ಕಂಡು ಬಂದಿವೆ.

ಅಮೆರಿಕಾದ ಸ್ಪೇಸ್ ಎಕ್ಸ್ (SpaceX) ಕ್ಯಾಲಿಫೋರ್ನಿಯಾ ಸನಿಹದ ಉಡಾವಣೆ ಕೇಂದ್ರದಿಂದ 52 ಸ್ಟಾರ್‌ಲಿಂಕ್ (Starlink) ಸ್ಯಾಟ್‌ಲೈಟ್‌ಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸಂಸ್ಥೆಯು ಈಗಾಗಲೇ ಸುಮಾರು 1,800ಕ್ಕೂ ಅಧಿಕ ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಆ ಪೈಕಿ 1,732 ಉಪಗ್ರಹಗಳು ತಮ್ಮ ನಿಗದಿತ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿವೆ ಎನ್ನಲಾಗಿದೆ. ಸಂಸ್ಥೆಯು ತನ್ನ ಸ್ಟಾರ್‌ಲಿಂಕ್ ಯೋಜನೆಯಲ್ಲಿ ವಿವಿಧ ಹಂತಗಳಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ. ಆ ಪೈಕಿ ಒಂದು ಗುಂಪಿನ ಉಪಗ್ರಹಗಳು ಸಾಗುತ್ತಿರುವುದು ಆಕಾಶದಲ್ಲಿ ಗೋಚರಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡೈಲಿ 2GB ಡೇಟಾ ನೀಡುವ ಬೆಸ್ಟ್‌ ಪ್ರಿಪೇಯ್ಡ್‌ ಪ್ಲಾನ್‌ಗಳು!

Tue Dec 21 , 2021
ದೇಶದ ಟೆಲಿಕಾಂ ವಲಯದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿವೆ. ಇದೇ ಸಂದರ್ಭದಲ್ಲಿ ಪ್ರಮುಖ ಖಾಸಗಿ ಟೆಲಿಕಾಂಗಳಾದ ಜಿಯೋ, ಏರ್‌ಟೆಲ್‌, ವಿ ಟೆಲಿಕಾಂಗಳು ತಮ್ಮ ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆಯನ್ನು ಹೆಚ್ಚಳ ಮಾಡಿವೆ. ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆ ಬದಲಾವಣೆ ನಂತರ ಗ್ರಾಹಕರು ತಮ್ಮ ಪ್ಲಾನ್‌ಗಳ ಆಯ್ಕೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ಸದ್ಯ ದೈನಂದಿನ 2GB ಡೇಟಾ ಜೊತೆಗೆ ಅನಿಯಮಿತ ಕರೆ ಪ್ರಯೋಜನ ನೀಡುವ ಪ್ಲಾನ್‌ಗಳು ಬೇಡಿಕೆ ಪಡೆದುಕೊಂಡಿವೆ.ಹೌದು, ಟೆಲಿಕಾಂ […]

Advertisement

Wordpress Social Share Plugin powered by Ultimatelysocial