ಅಧಿಕ ಬಡ್ಡಿ ಅಮಿಷ:

ರಾಮನಗರ, ಜನವರಿ, 27: ಪಂಚವಟಿ ಮಲ್ಟಿ ಸ್ಟೇಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನ ಸಿಬ್ಬಂದಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಹೆಚ್ವಿನ ಬಡ್ಡಿ ನೀಡುವುದಾಗಿ ಜನರನ್ನು ನಂಬಿಸಿ ಕೋಟ್ಯಂತರ ರೂಪಾಯಿ ಲಪಟಾಯಿಸುರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

ಸ್ಟೇಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಹಾಗೂ ಅದರ ಅಧ್ಯಕ್ಷರು ಕೋಟಿಗಟ್ಟಲೆ ಠೇವಣಿ ಸಂಗ್ರಹಿಸಿ ರಾತ್ರೋರಾತ್ರಿ ಬ್ಯಾಂಕ್ ಬಾಗಿಲು ಬಂದ್ ಮಾಡಿದ್ದಾರೆ ಎಂದು ಠೇವಣಿದಾರರು ಆರೋಪಿಸಿದ್ದಾರೆ. ಹಾಗೆಯೇ ಪಂಚವಟಿ ಮಲ್ಟಿ ಸ್ಟೇಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಹಾಗೂ ಅದರ ಅಧ್ಯಕ್ಷರು, ಕಾರ್ಯದರ್ಶಿ ಸೇರಿದಂತೆ ಸಿಬ್ಬಂದಿಗಳ ಮೇಲೆ ಪ್ರಕರಣ ದಾಖಲಾಗಿದೆ. ನೂರಾರು ಜನರಿಂದ ಠೇವಣಿ ಕಟ್ಟಿಸಿಕೊಂಡು ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ‌ ಎಂದು ಪಂಚವಟಿ ಮಲ್ಟಿ ಸ್ಟೇಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಸಿಬ್ಬಂದಿ ವಿರುದ್ಧ ರಾಮನಗರದಲ್ಲಿ ಷೇರುದಾರರು ದೂರು ನೀಡಿದ್ದರು. ಷೇರುದಾರರು ನೀಡಿದ ದೂರಿನ ಮೇರೆಗೆ ನಗರದ ಐಜೂರು ಬಡಾವಣೆಯಲ್ಲಿರು ಬ್ಯಾಂಕ್ ಕಛೇರಿಯ 8 ಸಿಬ್ಬಂದಿಯ ವಿರುದ್ಧ ನಗರದ ಸೈಬರ್ ಕ್ರೈ ಪೊಲೀಸ್ ಠಾಣೆಯಲ್ಲಿ ಎಫಐಆರ್ ದಾಖಲಾಗಿದೆ.

ಠೇವಣಿ ಹಣಕ್ಕೆ ಇತರೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತಲೂ ಹೆಚ್ಚಿನ ಬಡ್ಡಿ ದರ ನೀಡುವುದಾಗಿ ಜನರಿಂದ ಠೇವಣಿ ಸಂಗ್ರಹಿಸಿದ್ದಾರೆ. ಸುಮಾರು 35 ಲಕ್ಷಕ್ಕೂ ಹೆಚ್ವಿನ ಹಣವನ್ನು ಷೇರುದಾರರಿಗೆ ಹಿಂತಿರುಗಿಸದೆ ವಂಚನೆ ಮಾಡಿದ್ದಾರೆ ಎಂದು 11 ಮಂದಿ ಬ್ಯಾಂಕ್ ಷೇರುದಾರರು ದೂರು ನೀಡಿದ್ದರು. ಇವರ ದೂರಿನ ಮೇರೆಗೆ ಬ್ಯಾಂಕ್‌ನ ಅಧ್ಯಕ್ಷ ರಾಜು, ಕಾರ್ಯದರ್ಶಿ ಭೈರಲಿಂಗಯ್ಯ ನಿರ್ದೇಶಕ‌ ಹರೀಶ್ , ಲಿಂಗರಾಜು, ಸುರೇಶ್, ಬಸವಚಾರ್, ಚಂದ್ರಶೇಖರ್ ಸೇರಿದಂತೆ 8 ಮಂದಿ ಮೇಲೆ ಎಫ್‌ಐಆರ್ ದಾಖಲಾಗಿದೆ.

ನಂತರ ದೂರು ದಾಖಲಿಸಿಕೊಂಡ ನಗರದ ಸೈಬರ್ ಕ್ರೈಮ್ ಪೋಲಿಸರು, ಐಜೂರು ಬಡಾವಣೆಯಲ್ಲಿರುವ ಪಂಚವಟಿ ಮಲ್ಟಿ ಸ್ಟೈಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನ ಕಛೇರಿ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೆಲವೊಂದು ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ದೂರುದಾರರು ನೀಡಿರುವ ದೂರಿನಲ್ಲಿ ಪಂಚವಟಿ ಮಲ್ಟಿ ಸ್ಟೇಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ ಬಹು ಕೋಟಿ ವಂಚನೆ ಪ್ರಕರಣವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಮಾಗಡಿ, ಕುದೂರುಗಳಲ್ಲೂ ಇದ್ದ ಬ್ಯಾಂಕ್ ಕಛೇರಿಗಳು ಬಾಗಿಲು ಬಂದ್ ಮಾಡಿದೆ. ಅಲ್ಲದೇ ಹೊರ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಗೋವಾದಲ್ಲೂ ತಮ್ಮ ಜಾಲವನ್ನು ಬೀಸಿದ್ದಾರೆ ಎನ್ನಲಾಗಿದೆ.

ಪಂಚವಟಿ ಮಲ್ಟಿ ಸ್ಟೈಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ರಾಮನಗರ ಕಛೇರಿ ಒಂದರಲ್ಲೇ 11 ಮಂದಿ ಷೇರುದಾರಿಗೆ ಸುಮಾರು 35 ಲಕ್ಷ ರೂಪಾಯಿ ವಂಚನೆ ಎಸಗಿದೆ ಎನ್ನಲಾಗಿದೆ. ಇನ್ನೂ ರಾಜ್ಯದ ಇತರೆ ಹಾಗೂ ಹೊರ ರಾಜ್ಯದ ಶಾಖೆಗಳಲ್ಲಿ‌ ಎಷ್ಟು ಕೋಟಿಯ ವಂಚನೆ ನಡೆದಿದೆ ಎಂದು ಪೊಲೀಸರ ತನಿಖೆಯಿಂದ ಸತ್ಯ ಹೊರಬರಬೇಕಿದೆ. ‌‌ಪಂಚವಟಿ ಮಲ್ಟಿ ಸ್ಟೇಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ 2012ರಲ್ಲಿ ಪ್ರಾರಂಭವಾಗಿದ್ದು, ಇದರ ಮುಖ್ಯ ಕಚೇರಿ ಬೆಂಗಳೂರಿನ ರಾಜಾಜಿನಗರದ 18ನೇ ಸಿ ಮುಖ್ಯ ರಸ್ತೆಯಲ್ಲಿ ಇರುವುದಾಗಿ ಷೇರುದಾರರಿಗೆ ನಂಬಿಸಲಾಗಿತ್ತು. 2016 ರಲ್ಲಿ ರಾಮನಗರದಲ್ಲಿ ಬ್ಯಾಂಕ್ ಶಾಖೆ ಪ್ರಾರಂಭವಾಗಿರುತ್ತದೆ. ಕರ್ನಾಟಕದ ಬೆಳಗಾವಿ, ದಾವಣಗೆರೆ, ತುಮಕೂರು ಮತ್ತು ಕೆಲವೊಂದು ಭಾಗದಲ್ಲಿ ಶಾಖೆ ತೆರೆದು ನಂತರ ಬಾಗಲು ಬಂದ್ ಮಾಡಿದ್ದಾರೆ ಎನ್ನಲಾಗಿದೆ.
‌‌‌
ರಾಮನಗರ ಶಾಖೆಯಲ್ಲಿ ನಮ್ಮ ಮೆಚೂರಿಟಿ ಹಣ ವಾಪಸ್ಸು ನೀಡಲು ಸತಾಯಿಸುತ್ತಿರುವುದು ಕಂಡು ಬಂದಿತ್ತು.
ಬೆಂಗಳೂರಿನ ರಾಜಾಜಿನಗರಕ್ಕೆ ಹೋಗಿ ನೋಡಿದಾಗ ಅಲ್ಲಿ ಯಾವುದೇ ಸೊಸೈಟಿಯ ಮುಖ್ಯ ಕಚೇರಿ ಇರಲಿಲ್ಲ. ಅಕ್ಕಪಕ್ಕದವರನ್ನು ವಿಚಾರಿಸಿದಾಗ ಕೋವಿಡ್ ಮೊದಲು ಬ್ಯಾಂಕ್ ಮುಚ್ಚಿಕೊಂಡು ಹೊಗಿರುವ ವಿಚಾರ ತಿಳಿಯಿತು. ಬ್ಯಾಂಕ್ ವಂಚನೆಯ ಬಗ್ಗೆ ಕೂಲಂಕಷ ತನಿಖೆ ನಡೆದರೆ ಮತ್ತಷ್ಟು ಅಕ್ರಮಗಳ ಹೊರಬರುತ್ತವೆ ಎಂದು ಷೇರುದಾರರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯ ಸರ್ಕಾರ ಹಠಕ್ಕೆ ಅಂಗನವಾಡಿ ಕಾರ್ಯಕರ್ತರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ:

Fri Jan 27 , 2023
ಬೆಂಗಳೂರು, ಜನವರಿ. 27: ರಾಜ್ಯ ಸರ್ಕಾರ ಹಠಕ್ಕೆ ಬಿದ್ದು ಅಂಗನವಾಡಿ ಕಾರ್ಯಕರ್ತರ ಪ್ರಾಣದ ಜೊತೆ ಚೆಲ್ಲಾಟ ನಡೆಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜಧಾನಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಕೇಳದೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. “ಮುಷ್ಕರ ನಿರತ ರಾಜ್ಯ ಅಂಗನವಾಡಿ ಕಾರ್ಯಕರ್ತರನ್ನು ರಾಜ್ಯದ […]

Advertisement

Wordpress Social Share Plugin powered by Ultimatelysocial