ಖರ್ಜೂರದ ಉಪಯೋಗಗಳು.

ಖರ್ಜೂರ ಒಂದು ರುಚಿಕರ ಹಾಗೂ ಶಕ್ತಿವರ್ಧಕ ಆಹಾರ. ಇದರಲ್ಲಿ ಕಬ್ಬಿಣದ ಅಂಶ ಜಾಸ್ತಿ ಇರುತ್ತದೆ. ಇದು ರುಚಿಯಲ್ಲಿ ಸಿಹಿಯಾಗಿದ್ದು ಹಾಗೂ ಪುಷ್ಠಿಕರವಾದದ್ದು, ರಕ್ತಪಿತ್ತವನ್ನು ನಿವಾರಿಸುತ್ತದೆ. ಆಮಶಂಕೆ, ಅತಿಸಾರ, ನರಗಳ ದೌರ್ಬಲ್ಯ ನಿವಾರಣೆ, ರಕ್ತವೃದ್ಧಿಗೆ, ಮಕ್ಕಳಿಗೆ ಎಲ್ಲರಿಗೂ ಒಳ್ಳೆಯದು.
 ನರಗಳ ದೌರ್ಬಲ್ಯಕ್ಕಾಗಿ, ಖರ್ಜೂರದ ಬೀಜ ತೆಗೆದು ರಾತ್ರಿ ಹಾಲಿನಲ್ಲಿ ನೆನೆಹಾಕಿ. ಬೆಳಿಗ್ಗೆ ಅದೇ ಹಾಲಿನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿ ಹಾಗೂ ಸ್ವಲ್ಪ ಜೇನುತುಪ್ಪ ಸೇರಿಸಿ ಇದನ್ನು ಬೆಳಿಗ್ಗೆ ಹಾಗೂ ಸಂಜೆ ಊಟದ ನಂತರ ಒಂದು ಚಮಚದಷ್ಟ ಸೇವಿಸುತ್ತಾ ಬಂದರೆ, ನರಗಳ ದೌರ್ಬಲ್ಯ ನಿವಾರಣೆಯಾಗುವುದು. ಗರ್ಭಿಣಿಯರು ಇದನ್ನು ಸೇವಿಸುವುದರಿಂದ ಟಾನಿಕ್ ರೀತಿಯಲ್ಲಿ ಕೆಲಸ ಮಾಡುತ್ತದೆ. ರಕ್ತ ಕಡಿಮೆಯಾಗಿರುವವರಿಗೆ ರಕ್ತವೃದ್ಧಿಯಾಗಲು ಸಹಾಯವಾಗುತ್ತದೆ. ಕಡಿಮೆ ಬೆಳವಣಿಗೆ ಇರುವ ಮಕ್ಕಳಿಗೆ ಇದು ಉತ್ತಮವಾದ ಆಹಾರ.
 ಮಧುಮೇಹಿಗಳು ಸಿಹಿಪದಾರ್ಥವನ್ನು ತ್ಯಜಿಸಬೇಕು. ಅವರು ಸಿಹಿಪದಾರ್ಥವನ್ನು ತಿನ್ನಬೇಕೆನಿಸಿದಾಗ ಖರ್ಜೂರವನ್ನು ಸೇವಿಸಬಹುದು. ಬಹುಮೂತ್ರ ವಿಸರ್ಜನೆಯಾಗುವವರೂ ಕೂಡ ಖರ್ಜೂರ ಸೇವಿಸಬಹುದು ಅಥವಾ ಖರ್ಜೂರದ ಬೀಜವನ್ನು ತೆಗೆದು ಶುದ್ಧವಾದ ನೀರಿನಿಂದ ತೊಳೆದು, ಜಜ್ಜಿಕೊಳ್ಳಿ. ಇದಕ್ಕೆ ಎರಡರಷ್ಟು ನೀರನ್ನು ಸೇರಿಸಿ, ಚೆನ್ನಾಗಿ ಕುದಿಸಿ ಬೇಯಿಸಿಕೊಂಡು, ಅರ್ಧದಷ್ಟು ನೀರು ಇಂಗಿದ ಮೇಲೆ ಆರಲು ಬಿಡಿ. ನಂತರ ಚೆನ್ನಾಗಿ ಕಿವುಚಿ ಶೋಧಿಸಿಕೊಂಡು, ಒಲೆಯ ಮೇಲಿಟ್ಟು ಚೆನ್ನಾಗಿ ಕಾಯಿಸಬೇಕು. ಆರಿದ ಮೇಲೆ ಗಾಜಿನ ಶೀಷೆಗೆ ಹಾಕಿಟ್ಟುಕೊಂಡು ಪ್ರತಿದಿನ ಎರಡು ಚಮಚದಷ್ಟ ಸೇವಿಸಬೇಕು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ರಿಕೆಟಿಗ ಶುಭಮನ್ ಜೊತೆ ಡೇಟಿಂಗ್ ಮಾಡುತ್ತಿಲ್ಲ ಎಂದ ನಟಿ ಸೋನಮ್ ಬಾಜ್ವಾ.

Sun Jan 22 , 2023
  ಟೀಮ್ ಇಂಡಿಯಾ ಕ್ರಿಕೆಟಿಗ ಶುಭಮನ್ ಗಿಲ್ ಆಟಕ್ಕಿಂತ ಡೇಟಿಂಗ್ ವಿಚಾರವೇ ಭಾರತದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಗಿಲ್ ಜೊತೆ ದಿನಕ್ಕೊಂದು ಹುಡುಗಿಯ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಶುಭಮನ್ ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದಾನೋ ಗೊತ್ತಿಲ್ಲ. ಆದರೆ, ಹೊಸ ಹೊಸ ಹುಡುಗಿಯರ ಹೆಸರು ಮಾತ್ರ ಕೇಳಿ ಬರುತ್ತಲೇ ಇರುತ್ತದೆ. ಮೊನ್ನೆಯಷ್ಟೇ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಜೊತೆ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೆ […]

Advertisement

Wordpress Social Share Plugin powered by Ultimatelysocial