‘ಕಲ್ಯಾಣ ಕರ್ನಾಟಕ’ಕ್ಕಾಗಿ ಅಮಿತ್​ ಶಾ ‘ವಿಜಯ ಸಂಕಲ್ಪ’; ಹೇಗಿದೆ ಕೇಸರಿಪಡೆಯ ಟಾರ್ಗೆಟ್​..!?

ಬಿಜೆಪಿಗೆ ಕಲ್ಯಾಣ ಕರ್ನಾಟಕವೇ ಟಾರ್ಗೆಟ್. ಅತಿಹೆಚ್ಚು ಸೀಟ್ ಗೆದ್ದರೆ ರಾಜ್ಯದ ಚುಕ್ಕಾಣಿಗೆ ಅದೇ ಸಿಂಹಪಾಲು. ಇದೇ ತಂತ್ರಗಾರಿಕೆಯಿಂದ ಬಿಜೆಪಿ ಘಟಾನುಘಟಿಗಳು ದಾಂಗುಡಿ ಇಡುತ್ತಿದ್ದಾರೆ. ಇಂದು ಬೀದರ್​ಗೆ ಬಿಜೆಪಿ ಚಾಣಕ್ಯ ಎಂಟ್ರಿಯಾಗಲಿದ್ದಾರೆ. ಬಸವಕಲ್ಯಾಣದಲ್ಲಿ ಬೃಹತ್ ಶಕ್ತಿಪ್ರದರ್ಶನದ ಮೂಲಕ ಸುತ್ತಮುತ್ತಲಿನ ಜಿಲ್ಲೆಗಳ ಮತಗಳನ್ನೂ ಸೆಳೆಯುವ ತಂತ್ರ ಹೆಣೆದಿದ್ದಾರೆ.

2023ರ ಮತಯುದ್ಧ ಕಣದಲ್ಲಿ ಗೆಲುವೊಂದೇ ಗುರಿ. ಕರುನಾಡ ಚುಕ್ಕಾಣಿ ಹಿಡಿಯೋದಕ್ಕೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಬಾರಿ ಇನ್ನಿಲ್ಲದ ಕಸರತ್ತು ಮಾಡ್ತಿವೆ. ಅದ್ರಲ್ಲೂ ಈಗಾಗಲೇ ಅಧಿಕಾರದಲ್ಲಿರೋ ಬಿಜೆಪಿ ಕಮ್​ಬ್ಯಾಕ್ ಮಾಡೋದಕ್ಕೆ ಸಕಲ ತಯಾರಿ ಮಾಡಿಕೊಳ್ತಿದೆ. ಘಟಾನುಘಟಿ ನಾಯಕರ ಮೂಲಕ ರಾಜ್ಯದ ಮೂಲೆ ಮೂಲೆಯಲ್ಲೂ ಮತದಾರರನ್ನು ಸೆಳೆಯೋ ಕೆಲಸ ಮುಂದುವರಿದಿದೆ. ಇದ್ರ ಭಾಗವಾಗಿ ಇಂದು ಬೀದರ್​ಗೆ ಬಿಜೆಪಿ ಚಾಣಕ್ಯ ಬರುತ್ತಿದ್ದಾರೆ.

ಕಲ್ಯಾಣ ಕರ್ನಾಟಕದಲ್ಲಿ ಕೇಸರಿ ಪಡೆಯಿಂದ ಮತ್ತೆ ಶಕ್ತಿಪ್ರದರ್ಶನ
ಅಮಿತ್ ಶಾ ಕೇಸರಿ ಪಡೆಯ ಚಾಣಕ್ಯ. ಯಾವುದೇ ಚುನಾವಣೆಯನ್ನ ಸಲೀಸಾಗಿ ಗೆದ್ದು ಅಧಿಕಾರಕ್ಕೇರುವ ತಂತ್ರ ಹೆಣೆಯುವ ಚತುರ. ಇದೇ ತಂತ್ರಗಾರ ಇಂದು ಬೀದರ್​​ಗೆ ಆಗಮಿಸಲಿದ್ದಾರೆ. ಈಗಾಗಲೇ ಕಲ್ಯಾಣ ಕರ್ನಾಟಕದಲ್ಲಿ ಮತಬೇಟೆ ಮಾಡಿರೋ ಕೇಸರಿ ನಾಯಕರು ಮತ್ತೆ ಮತ್ತೆ ಅದೇ ಪ್ರದೇಶವನ್ನು ಟಾರ್ಗೆಟ್ ಮಾಡೋ ಮೂಲಕ 2023ರ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಕೈ ವಶಕ್ಕೆ ರಣತಂತ್ರ ಹೆಣೆದಿದ್ದಾರೆ. ಇದ್ರ ಭಾಗವಾಗಿ ಇಂದು ಬೀದರ್​ಗೆ ಆಗಮಿಸಲಿರೋ ಅಮಿತ್ ಶಾ ನಾಳೆ ಬಸವಕಲ್ಯಾಣದಲ್ಲಿ ಭರ್ಜರಿ ಶಕ್ತಿಪ್ರದರ್ಶನ ಮಾಡಲಿದ್ದಾರೆ.

ಅಮಿತ್​ ಶಾರಿಂದ ವಿಜಯ ಸಂಕಲ್ಪ

  • ಇಂದು ರಾತ್ರಿ 10ಕ್ಕೆ ದೆಹಲಿಯಿಂದ ಅಮಿತ್ ಶಾ ಆಗಮನ
  • ಬೀದರ್ ಏರ್​​ಬೇಸ್​ಗೆ ಬಂದಿಳಿಯಲಿರೋ ಗೃಹ ಸಚಿವ
  • ರಾತ್ರಿ ಏರ್​​ಫೋರ್ಸ್‌ನ ಗೆಸ್ಟ್ ಹೌಸ್‌ನಲ್ಲಿ ಶಾ ವಾಸ್ತವ್ಯ
  • ನಾಳೆ ಬೆಳಗ್ಗೆ 11.40ಕ್ಕೆ ಬಸವಕಲ್ಯಾಣಕ್ಕೆ ತೆರಳಲಿದ್ದಾರೆ
  • ಮಧ್ಯಾಹ್ನ 12.10ಕ್ಕೆ ಕ್ರಿಕೆಟ್ ಸ್ಟೇಡಿಯಂ ತಲುಪಲಿದ್ದಾರೆ
  • ಮಧ್ಯಾಹ್ನ 12.20ಕ್ಕೆ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ
  • ಅನುಭವ ಮಂಟಪ-ಥೇರ್ ಮೈದಾನದವರೆಗೆ ರೋಡ್ ಶೋ
  • ಸುಮಾರು 1.5 ಕಿ.ಮೀ. ರೋಡ್ ಶೋ ನಡೆಸಲಿರೋ ಅಮಿತ್​ ಶಾ
  • ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಸೇರಿ ಇತರೆ ನಾಯಕರು ಸಾಥ್
  • ಮಧ್ಯಾಹ್ನ 12.45ಕ್ಕೆ ಥೇರ್ ಮೈದಾನದ ಕಾರ್ಯಕ್ರಮಕ್ಕೆ ಆಗಮನ
  • ಮಧ್ಯಾಹ್ನ 12.45 ರಿಂದ 1.15 ರವರೆಗೆ ನಾಯಕರೊಂದಿಗೆ ಭೋಜನ

ಬ್ಯಾಕ್ ಟು ಬ್ಯಾಕ್ ಱಲಿಗಳ ಮೂಲಕ ಕಲ್ಯಾಣ ಕರ್ನಾಟಕ ಗೆಲ್ಲಲು ಕೇಸರಿ ಪಡೆ ಸರ್ವಸನ್ನದ್ಧವಾಗಿದೆ. ವಿಜಯ ಸಂಕಲ್ಪ ಯಾತ್ರೆ ಮೂಲಕ ಮತ್ತೆ ಅಧಿಕಾರಕ್ಕೇರುವುದೇ ಬಿಜೆಪಿ ನಾಯಕರ ಸಂಕಲ್ಪವಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ.

Thu Mar 2 , 2023
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ವಿಜಯ ಸಂಕಲ್ಪ ಯಾತ್ರೆಗೆ ವಿ. ಸೋಮಣ್ಣ ಗೈರು ವಿಚಾರ ಸೋಮಣ್ಣ ಅವರ ಆರೋಗ್ಯ ಸರಿಯಿಲ್ಲ ಗೋವಿಂದರಾಜನಗರ ಕ್ಷೇತ್ರದ ಸಮಾರಂಭಗಳಲ್ಲಿ ಭಾಗವಹಿಸಿರಬಹುದು ರಾಜ್ಯ ಪ್ರವಾಸ ಮಾಡೋದಕ್ಕೂ ಅಲ್ಲೇ ಹೊಗೋಕು ವ್ಯತ್ಯಾಸ ಇದೆ ಎಷ್ಟೋ ಸಲ ಯಡಿಯೂರಪ್ಪ ಅವರ ಕಾರ್ಯಕ್ರಮಗಳಿಗೆ ನಾನು ಹೋಗಿಲ್ಲ ಯಾವ ಗೊಂದಲ ನಮ್ಮಲ್ಲಿ ಇಲ್ಲ ನಮ್ಮ ರಾಜ್ಯಾಧ್ಯಕ್ಷರು, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಈ ಬಾರಿ ಅಧಿಕಾರ ಹಿಡಿಯುತ್ತೇವೆ ಚಾಮರಾಜನಗರದಲ್ಲಿ ಮಾಜಿ […]

Advertisement

Wordpress Social Share Plugin powered by Ultimatelysocial