ವೀಕೆಂಡ್ ಕರ್ಫ್ಯೂ ಜಾರಿ ಬಗ್ಗೆ ಸಿಎಂ ಮಹತ್ವದ ಸಭೆ, ಮಧ್ಯಾಹ್ನದ ವೇಳೆ ಹೊಸ ರೂಲ್ಸ್ ಸಾಧ್ಯತೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಮಧ್ಯಾಹ್ನ 1 ಗಂಟೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಚಿವರು, ಅಧಿಕಾರಿಗಳು, ತಜ್ಞರೊಂದಿಗೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಲಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಹೊಸ ಮಾರ್ಗಸೂಚಿ ಜಾರಿಯಾಗುವ ಸಾಧ್ಯತೆಯಿದೆ.

ವೀಕೆಂಡ್ ಕರ್ಫ್ಯೂ ಕೈಬಿಡಬೇಕೆಂಬ ಒತ್ತಾಯ ತೀವ್ರವಾಗಿರುವ ಹಿನ್ನೆಲೆಯಲ್ಲಿ ಇಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಜನಸಾಮಾನ್ಯರು ಭಯಪಡುವ ಅವಶ್ಯಕತೆ ಇಲ್ಲವೆಂದು ಗೃಹಸಚಿವರು ಹೇಳಿದ್ದಾರೆ. ಇಂದಿನಿಂದ ವೀಕೆಂಡ್ ಕರ್ಫ್ಯೂ ಇರುವುದಿಲ್ಲವೆಂದು ಹೇಳಲಾಗಿದ್ದು, ಸಿಎಂ ನಡೆಸುವ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

RBI:ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬಿ.ಕಾಮ್ ಪದವೀಧರರಿಗೆ ಉದ್ಯೋಗ ಖಾಲಿ;

Fri Jan 21 , 2022
ಆರ್‌ಬಿಐ ಜೊತೆಗಿನ ಜೀವನ ಮತ್ತೊಂದು ವೃತ್ತಿಯಲ್ಲ. ಅದೊಂದು ಬದ್ಧತೆ. ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಬದ್ಧತೆ, ಅಲ್ಲಿ ನಿಮ್ಮ ನಿರ್ಧಾರಗಳು ದೇಶದ ಆರ್ಥಿಕತೆ ಮತ್ತು ಆರ್ಥಿಕ ವಲಯದ ವಿಕಸನದ ಮೇಲೆ ಪ್ರಭಾವ ಬೀರುತ್ತವೆ. ನಿರಂತರ ಕಲಿಕೆ, ಸಮಾನ ಅವಕಾಶದ ಕೆಲಸದ ವಾತಾವರಣ, ಬೆಂಬಲಿತ ಮಾನವ ಸಂಪನ್ಮೂಲ ವಾತಾವರಣ ಮತ್ತು ಆಕರ್ಷಕ ಪರಿಹಾರ ರಚನೆಯನ್ನು ಪ್ರೋತ್ಸಾಹಿಸುವ ಪರಿಸರ ವ್ಯವಸ್ಥೆಯನ್ನು ನೀವು ಹುಡುಕುತ್ತಿದ್ದರೆ RBI ಗೆ ಬನ್ನಿ. ಹುದ್ದೆಗಳಿಗೆ ತಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ಅಭ್ಯರ್ಥಿಗಳು: […]

Advertisement

Wordpress Social Share Plugin powered by Ultimatelysocial