ವೃದ್ದೆ ತಾಯಿಗೆ ಮಗ ,ಮೊಮ್ಮಗ ಸೇರಿ ಥಳಿತ

ವೃದ್ಧೆ ತಾಯಿಗೆ ಮಗ ಹಾಗೂ ಮೊಮ್ಮಗ ಸೇರಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿಯ ಸವಣಾಲು ಎಂಬಲ್ಲಿ ನಡೆದಿದೆ. ವೃದ್ಧೆ ಅಪ್ಪಿ ಶೆಟ್ಟಿ ಸವಣಾಲು ಹಲಸಿನಕಟ್ಟೆ ನಿವಾಸಿ ಎಂದು ತಿಲಿದು ಬಂದಿದೆ. ಅವರ ಮಗ ಶ್ರೀನಿವಾಸ ಶೆಟ್ಟಿ ಹಾಗೂ ಮೊಮ್ಮಗ ಪ್ರದೀಪ್ ಶೆಟ್ಟಿ ಕಂಠಪರ‍್ತಿ ಕುಡಿದು ಬಂದು ಅಪ್ಪಿ ಶೆಟ್ಟಿಯವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಎತ್ತಿ ಬಿಸಾಡಿದ್ದಾರೆ. ಈ ದೃಶ್ಯವನ್ನು ಅಲ್ಲೇ ಇದ್ದ ಇನ್ನರ‍್ವ ಮೊಮ್ಮಗ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.ಅನಾರೋಗ್ಯದಿಂದ ಇರುವ ಅಪ್ಪಿಶೆಟ್ಟಿ ಕಳೆದ ಕೆಲ ರ‍್ಷದಿಂದ ಮಲಗಿದಲ್ಲೇ ಇದ್ದಾರೆ.ಹೀಗಾಗಿ ಪ್ರತಿದಿನ ಈ ಇಬ್ಬರು ಇದೇ ರೀತಿ ಕುಡಿದು ಬಂದು ಹಲ್ಲೆ ನಡೆಸುತ್ತಿದ್ದು,ಇದರಿಂದ ನೊಂದ ಅಸಹಾಯಕ ಮೊಮ್ಮಗ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.ಹಲ್ಲೆ ನಡೆಸಿದ ಈ ಇಬ್ಬರ ಮೇಲೂ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ಸೂಕ್ತ ಕ್ರಮಕೈಗೊಳ್ಳಬೇಕಿದೆ.

Please follow and like us:

Leave a Reply

Your email address will not be published. Required fields are marked *

Next Post

ಲೇಹ್‌ಗೆ ಬಂದಿಳಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

Fri Jul 17 , 2020
ದಿನಗಳು ಕಳೆದರು ಭಾರತ ಮತ್ತು ಚೀನಾ ಗಡಿ ವಿವಾದ ಮಾಸದೇ ಹೆಚ್ಚುತ್ತಲೇ ಇದೆ ಇದರ ಬೆನ್ನಲ್ಲೇ ಇತ್ತೀಚೆಗೆ ಪ್ರಧಾನಿ ಮೋದಿ ಅವರು ಲೇಹ್‌ಗೆ ಬೇಟಿ ನಿಡಿದ್ದರು ಇದಾದ ಸ್ವಲ್ಪ ದಿನಗಳ ನಂತರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಡಾಕ್ ಮತ್ತು ಜಮ್ಮು-ಕಾಶ್ಮೀರಕ್ಕೆ ಎರಡು ದಿನಗಳ ಭೇಟಿಯನ್ನ ನೀಡಿದ್ದಾರೆ. ಭಾರತ ಮತ್ತು ಚೀನಾ ಗಡಿ ಮಧ್ಯೆ ಪೂರ್ವ ಲಡಾಕ್ ನಲ್ಲಿ ಮುಂದುವರಿದಿರುವ ಸಮಸ್ಯೆ ಮಧ್ಯೆ ಸವಿಸ್ತಾರವಾಗಿ ಅಲ್ಲಿನ ಭದ್ರತೆ, […]

Advertisement

Wordpress Social Share Plugin powered by Ultimatelysocial