ವ್ಯಾಯಾಮ, ಜಿಮ್ ಮಧ್ಯದಲ್ಲೇ ಬಿಟ್ಟರೆ ಯಾಕೆ ದಪ್ಪಗಾಗುತ್ತಾರೆ.?

 

ಕೆಲವಷ್ಟು ಮಂದಿ ಜಿಮ್ ಗೆ ಹೋಗಿ ಮಧ್ಯದಲ್ಲೇ ಬಿಟ್ಟು ಬಿಡುತ್ತಾರೆ. ಇವರ ದೇಹಾಕೃತಿ ಸ್ವಲ್ಪ ದಿನಗಳಲ್ಲೇ ವಿಪರೀತ ಊದಿಕೊಂಡಿರುವುದನ್ನು ನೀವು ನೋಡಿರಬಹುದು. ಇದಕ್ಕೆ ಕಾರಣವೇನು ಗೊತ್ತೇ?

ನಿತ್ಯ ಜಿಮ್‌, ವ್ಯಾಯಾಮ ಮಾಡುವವರು ಕೆಲವು ದಿನಗಳ ಮಟ್ಟಿಗೆ ವಿಶ್ರಾಂತಿ ಪಡೆದುಕೊಂಡರೆ ಅಥವಾ ಅದನ್ನು ನಿಲ್ಲಿಸಿದರೆ ಅವರು ವಿಪರೀತ ದಪ್ಪವಾಗುವುದನ್ನು ನೀವು ಕಂಡಿರಬಹುದು.

ಇದಕ್ಕೆ ಮುಖ್ಯ ಕಾರಣ ಅವರಿಗೆ ಹಸಿವಾಗುವುದು. ನಿಯಮಿತವಾಗಿ ನಡೆಯುತ್ತಿದ್ದ ದೇಹದ ವ್ಯಾಯಾಮ ನಿಂತ ಕಾರಣ ಹೊಟ್ಟೆ ವಿಪರೀತ ಹಸಿದುಕೊಳ್ಳುತ್ತದೆ. ಪರಿಣಾಮ ಅವರು ಹೆಚ್ಚು ತಿಂದು ಕೊಬ್ಬು ಬೆಳೆಯುತ್ತದೆ. ವ್ಯಾಯಾಮ ಮಾಡುವುದರಿಂದ ದೇಹದ ಹಸಿವಿನ ಹಾರ್ಮೋನ್ ಕಡಿಮೆ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ.

ವ್ಯಾಯಾಮ ಮಾಡಿದಾಗ ಹೆಚ್ಚು ಬೆವರುವುದರಿಂದ ಹೆಚ್ಚಿನ ನೀರು ಕುಡಿಯಬೇಕಾಗುತ್ತದೆ. ಇದರಿಂದ ಹಸಿವು ಸಹಜವಾಗಿಯೇ ಕಡಿಮೆಯಾಗುತ್ತದೆ. ವ್ಯಾಯಾಮ ಇಲ್ಲದಾಗ ಹಸಿವು ಹೆಚ್ಚಲು ಇದೂ ಒಂದು ಕಾರಣ.

ವ್ಯಾಯಾಮ ಮಾಡದಿರುವಾಗ ದೇಹ ಅನಾರೋಗ್ಯಕರ ಆಹಾರವನ್ನು ಸೇವನೆ ಮಾಡುವಂತೆ ಉತ್ತೇಜಿಸುತ್ತದೆ ಎನ್ನುತ್ತದೆ ಇತ್ತೀಚಿನ ಸಂಶೋಧನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೋಹಿಣಿ ಸಿಂಧೂರಿ ವಿರುದ್ಧ ಐಜಿಪಿ ಡಿ.ರೂಪ ಗರಂ- ಹಲವು ಆರೋಪ, ಸರ್ಕಾರಕ್ಕೆ ದೂರು.

Mon Feb 20 , 2023
ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಶಾಸಕ ಸಾ.ರಾ.ಮಹೇಶ್‌ ಜತೆ ರಾಜೀಸಂಧಾನಕ್ಕೆ ಮುಂದಾಗಿರುವುದಕ್ಕೆ ಐಜಿಪಿ ಡಿ. ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಗರಂ ಆಗಿದ್ದಾರೆ. ಮಾತ್ರವಲ್ಲದೇ, ಭಾರತದ ಇತಿಹಾದಲ್ಲಿಯೇ ಈ ರೀತಿ ರಾಜೀಯಾಗಿರುವುದು ಇದೇ ಮೊದಲು ಎಂದು ಕಿಡಿಕಾರಿದ್ದಾರೆ.ಮುಂದುವರೆದು, ರೋಹಿಣಿ ಸಿಂಧೂರಿ ವಿರುದ್ದ ಹತ್ತೊಂಬತ್ತು ಆರೋಪಗಳ ಪಟ್ಟಿ ಮಾಡಿರೋ ರೂಪಾ ತನ್ನ ಬಳಿ ರೋಹಿಣಿ ಮಾಡಿರೊ ಅಕ್ರಮ ಕಾರ್ಯಗಳಿಗೆ ಪೋಟೊ ಸೇರಿದಂತೆ ಹಲವು ಸಾಕ್ಷ್ಯಗಳು ಇವೆ ಎಂದು ಹೇಳಿದ್ದಾರೆ. […]

Advertisement

Wordpress Social Share Plugin powered by Ultimatelysocial