ರೋಹಿಣಿ ಸಿಂಧೂರಿ ವಿರುದ್ಧ ಐಜಿಪಿ ಡಿ.ರೂಪ ಗರಂ- ಹಲವು ಆರೋಪ, ಸರ್ಕಾರಕ್ಕೆ ದೂರು.

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಶಾಸಕ ಸಾ.ರಾ.ಮಹೇಶ್‌ ಜತೆ ರಾಜೀಸಂಧಾನಕ್ಕೆ ಮುಂದಾಗಿರುವುದಕ್ಕೆ ಐಜಿಪಿ ಡಿ. ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಗರಂ ಆಗಿದ್ದಾರೆ. ಮಾತ್ರವಲ್ಲದೇ, ಭಾರತದ ಇತಿಹಾದಲ್ಲಿಯೇ ಈ ರೀತಿ ರಾಜೀಯಾಗಿರುವುದು ಇದೇ ಮೊದಲು ಎಂದು ಕಿಡಿಕಾರಿದ್ದಾರೆ.ಮುಂದುವರೆದು, ರೋಹಿಣಿ ಸಿಂಧೂರಿ ವಿರುದ್ದ ಹತ್ತೊಂಬತ್ತು ಆರೋಪಗಳ ಪಟ್ಟಿ ಮಾಡಿರೋ ರೂಪಾ ತನ್ನ ಬಳಿ ರೋಹಿಣಿ ಮಾಡಿರೊ ಅಕ್ರಮ ಕಾರ್ಯಗಳಿಗೆ ಪೋಟೊ ಸೇರಿದಂತೆ ಹಲವು ಸಾಕ್ಷ್ಯಗಳು ಇವೆ ಎಂದು ಹೇಳಿದ್ದಾರೆ. ಈ ಮೂಲಕ ಐಎಎಸ್ – ಐಪಿಎಸ್ ನಡುವಿನ ಜಗಳ ತಾರಕಕ್ಕೇರಿದಂತಾಗಿದೆ.ಈ ಕುರಿತು ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಐಜಿಪಿ ಡಿ. ರೂಪಾ, “ಯಾವ ಸರ್ಕಾರಿ ನಿಯಮದಲ್ಲಿ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಗಳ ಜತೆ ರಾಜಕಾರಣಿಗಳ ಸಂದಾನಕ್ಕೆ ಅವಕಾಶವಿದೆ. ಪ್ರಕಣಗಳು ಸರ್ಕಾರದ ಮಟ್ಟದಲ್ಲಿ ಇದ್ದಾಗ ಯಾಕೆ ಸಂಧಾನಕ್ಕೆ ಹೋಗಿದ್ದರು. ಏನಾದರು ತಪ್ಪು ಮಾಡಿದ್ದರಾ?” ಎಂದು ಪ್ರಶ್ನೆ ಮಾಡಿದ್ದಾರೆ. “ಭಾರತ ಇತಿಹಾಸದಲ್ಲಿ ಮೊದಲ‌ ಬಾರಿ ಐಎಎಸ್‌ ಮತ್ತು ರಾಜಕಾರಣಿಗಳ ಸಂಧಾನ ಎಂಬ ಬಗ್ಗೆ ಕೇಳುತ್ತಿದ್ದೇನೆ. ಬಹಳ ಬೇಸರ ಆಗ್ತಾ ಇದೆ” ಎಂದರು.ರೋಹಿಣಿ ಸಿಂಧೂರಿಯವರು ಕೆಲಸಕ್ಕೆ ಸೇರಿದಾಗಿನಿಂದಲೂ ಒಂದಲ್ಲ ಒಂದು ತಪ್ಪಗಳನ್ನು ಮಾಡುತ್ತಾ ಬಂದಿದ್ದಾರೆ. ಮಾತ್ರವಲ್ಲದೇ, ವ್ಯವಸ್ಥೆಯ ಬೆಂಬಲ ಪಡೆದು ಆ ತಪ್ಪುಗಳಿಂದ ಬಚಾವ್‌ ಆಗುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ, ಮೈಸೂರು ಡಿಸಿಯಾಗಿದ್ದಾಗ ಮನೆಯಲ್ಲಿ ಸ್ವಿಮ್ಮಂಗ್‌ ಫೂಲ್‌ ಕಟ್ಟಿಸಲು ಮುಂದಾಗಿದ್ದು, ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣ, ಶಾಲಾ ಬ್ಯಾಗ್‌ ಅನುದಾನ ಬಳಕೆ ಸೇರಿದಂತೆ ಹಲವು ಕಣ್ಮುಂದೆಯೇ ಇವೆ. ಆ ಎಲ್ಲಾ ಬಾರಿಯೂ ತಪ್ಪಿನಿಂದ ಬಚಾವ್‌ ಆಗಿದ್ದರು. ಸದ್ಯ ನನ್ನ ತಾಳ್ಮೆಯ ಮೀರಿದ್ದು, ನನ್ನ ಬಳಿ ರೋಹಿಣಿ ಸಿಂಧೂರಿ ವಿರುದ್ಧ ಇರುವ ಸಾಕ್ಷ್ಯಗಳನ್ನು ಸರ್ಕಾರಕ್ಕೆ ನೀಡಿದ್ದೇನೆ ಎಂದು ತಿಳಿಸಿದರು.”ಐಎಎಸ್, ಐಪಿಎಸ್‌ ಅಧಿಕಾರಿಗಳು ಸೇರಿದಂತೆ ಹಲವರಿಗೆ ರೋಹಿಣಿ ಸಿಂಧೂರಿ ಕಳಿಸಬಾರದಂತಹ ಪೋಟೊಗಳನ್ನು ಕಳುಹಿಸಿದ್ದಾರೆ. ಅವುಗಳು ನನಗೆ ಸಿಕ್ಕಿವೆ. ಅವೆಲ್ಲವನ್ನು ಸರ್ಕಾರಕ್ಕೆ ನೀಡಿದ್ದೇನೆ. ಒಂದಿಷ್ಟು ಸ್ಯಾಂಪಲ್‌ ಪೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದೇನೆ. ಇಂತಹ ಪೋಟೊಗಳನ್ನು ಯಾಕೆ ಪುರುಷರಿಗೆ ಕಳಿಸಿದ್ದಾರೆ. ಈ ಬಗ್ಗೆಸೂಕ್ತ ತನಿಖೆಯಾಗಬೇಕು” ಎಂದು ಐಜಿಪಿ ಡಿ.ರೂಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆಲವು ರಾಜಕಾರಣಿಗಳಿಗೆ ಬ್ರಾಹ್ಮಣರ ಕುರಿತು ದೃಷ್ಟಿದೋಷವಿದೆ, ತಪಾಸಣೆ ಮಾಡಿಸಿಕೊಳ್ಳಲಿ- ಸುರೇಶ್‌ ಕುಮಾರ್‌.

Mon Feb 20 , 2023
 ಬ್ರಾಹ್ಮಣ ಮುಖ್ಯಮಂತ್ರಿ, ಬ್ರಾಹ್ಮಣ ಕುರಿತ ವಿವಾದಾತ್ಮ ಹೇಳಿಕೆ ವಿರುದ್ಧ ಮಾಜಿ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಕಿಡಿಕಾರಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.ರಾಜಾಜಿನಗರ ವಿಧಾನಸಭಾ ಕ್ಷೇತ್ರ, ಶ್ರೀ ರಾಮಮಂದಿರ ವಾರ್ಡನಲ್ಲಿ ಶ್ರೀ ಶಂಕರ ಸೇವಾ ಸಮಿತಿ ಮತ್ತು ರಾಜಾಜಿನಗರ ಬ್ರಾಹ್ಮಣ ಸಭಾ ವತಿಯಿಂದ ಸಾರ್ವಜನಿಕರಿಗೆ ನಾರಾಯಣ ನೇತ್ರಾಲಯ ವತಿಯಿಂದ ಉಚಿತ ನೇತ್ರಾ ತಪಸಣಾ ಶಿಬಿರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಿಕ್ಷಣ […]

Advertisement

Wordpress Social Share Plugin powered by Ultimatelysocial