ಶಿವರಾತ್ರಿಯಂದು ಉಪವಾಸ ಕೈಗೊಳ್ಳುವವರು ಯಾವ ಉಪಹಾರ ತೆಗೆದುಕೊಳ್ಳಬೇಕು..?

ಹಾಶಿವರಾತ್ರಿ. ಶಿವಭಕ್ತರು ಕಾಯುತ್ತಿದ್ದ ಶಿವರಾತ್ರಿ ಬಂದೇ ಬಿಟ್ಟಿದೆ. ಶಿವರಾತ್ರಿ ಎಂದರೆ ಉಪವಾಸ, ಜಾಗರಣೆ, ಅಭಿಷೇಕ, ಜಪ – ತಪ ಎಲ್ಲವೂ ಇರುತ್ತದೆ. ಇವುಗಳನ್ನ ಮಾಡಿದ್ರೆ ಶಿವ ಇಷ್ಟಾರ್ಥ ಸಿದ್ಧಿಸಿ ಸಕಲ ಪಾಪವನ್ನು ಪರಿಹಾರ ಮಾಡುತ್ತಾನೆ ಅನ್ನೋ ನಂಬಿಕೆ ಇದೆ.ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಉಪವಾಸ, ಜಾಗರಣೆಯನ್ನು ಮಾಡಲು ಕೆಲವರಿಗೆ ಸಾಧ್ಯವಿಲ್ಲ. ಅಂದರೆ ವಯಸ್ಸಾದವರಿಗೆ ಮತ್ತು ಮಕ್ಕಳಿಗೆ ಉಪವಾಸ ಮಾಡುವುದು ಕಷ್ಟ. ಅಂತವರು ಉಪಹಾರವನ್ನು ಸ್ವೀಕರಿಸಿ ಈ ವ್ರತವನ್ನು ಆಚರಿಸಬಹುದು.

ಲಘು ಉಪಹಾರಗಳಾದ ಹಣ್ಣು, ಹಾಲನ್ನು ತೆಗೆದುಕೊಳ್ಳಬಹುದು. ಮೇಲಿಂದ ಮೇಲೆ ನಿಂಬೆ ಹಣ್ಣಿನ ರಸವನ್ನು ತೆಗೆದುಕೊಳ್ಳಬಹುದು. ಇನ್ನು ಉಪವಾಸ ಮಾಡಲು ಸಾಧ್ಯವಾಗದೇ ಇರುವವರು ಸಬ್ಬಕ್ಕಿ ಕಿಚಡಿಯನ್ನು ಸೇವಿಸಬಹುದು. ಈ ರೀತಿಯ ಅಲ್ಪ ಆಹಾರವನ್ನು ಸೇವಿಸಿ ಉಪವಾಸವನ್ನು ಮಾಡಬಹುದು.

ಇನ್ನು ಜಾಗರಣೆ ಮಾಡ ಬಯಸುವವರು ದೇವಸ್ಥಾನಕ್ಕೆ ಹೋಗಿ ಜಪ ಮಾಡಬಹುದು. ಸಾಧ್ಯವಾಗದೇ ಇರುವವರು ಮನೆಯಲ್ಲಿಯೇ ಪೂಜೆ, ಜಪ ಮಾಡಬಹುದು. ಹೀಗೆ ಶಿವರಾತ್ರಿ ಹಬ್ಬದಂದು ಉಪವಾಸ, ಜಾಗರಣೆ ಮಾಡಿ ಶಿವನನ್ನು ಪ್ರಾರ್ಥಿಸಬಹುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೆಡಿಎಸ್​ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ!

Tue Feb 28 , 2023
ರಾಜ್ಯ ಬಿಜೆಪಿ ನಾಯಕರಿಗೆ ಗಂಡಸ್ಥನವಿಲ್ಲ ಹಾಗಾಗಿ ಪದೇ ಪದೇ ಕೇಂದ್ರ ನಾಯಕರು ಬರುತ್ತಿದ್ದಾರೆಂಬ ಸಿಎಂ ಇಬ್ರಾಹಿಂ ಹೇಳಿಕೆ ವಿರುದ್ದ ಮಂಡ್ಯದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಕಿಡಿಕಾರಿದ್ದಾರೆ.ಮಂಡ್ಯ: ರಾಜ್ಯ ಬಿಜೆಪಿ ನಾಯಕರಿಗೆ ಗಂಡಸ್ಥನವಿಲ್ಲ ಹಾಗಾಗಿ ಪದೇ ಪದೇ ಕೇಂದ್ರ ನಾಯಕರು ಬರುತ್ತಿದ್ದಾರೆಂಬ ಜೆಡಿಎಸ್​ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ವಿರುದ್ದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ  ಕಿಡಿಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಕಂಡರೆ […]

Advertisement

Wordpress Social Share Plugin powered by Ultimatelysocial