ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಕೆಲಸ: ಎರಡು ದಿನ ರಜೆ ಆಯೋಗಕ್ಕೆ ಮನವಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಮಾತ್ರ ಸರ್ಕಾರಿ ಕೆಲಸ, ವಾರಾಂತ್ಯ ಎರಡು ದಿನ ರಜೆ ನೀಡುವಂತೆ ಕೋರಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮತ್ತು ಪದಾಧಿಕಾರಿಗಳ ನಿಯೋಗದ ವತಿಯಿಂದ 7ನೇ ವೇತನ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ.

ವಾರಕ್ಕೆ ಐದು ದಿನ ಕೆಲಸ ಪದ್ಧತಿ ಕೆಲಸದ ಅವಧಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5:30 ಬದಲಿಗೆ ಬೆಳಗ್ಗೆ 9:30 ರಿಂದ ಸಂಜೆ 6 ಗಂಟೆಯವರೆಗೆ ಬದಲಿಸಬೇಕು ಎಂದು ಬೇಡಿಕೆಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಲಾಗಿದೆ.

ದೈನಂದಿನ ಕರ್ತವ್ಯದ ಅವಧಿ ಹೆಚ್ಚಳ ಮಾಡಿ ವಾರದಲ್ಲಿ ಐದು ದಿನ ಕೆಲಸ, ಎರಡು ದಿನ ರಜೆ ನೀಡುವ ಪದ್ಧತಿ, ಜಾರಿಗೆ ಕೋರಲಾಗಿದೆ. ನೌಕರರಲ್ಲಿ ದಕ್ಷತೆ, ನೈಪುಣ್ಯತೆ, ಕ್ರಿಯಾಶೀಲತೆ ಹೆಚ್ಚಳಕ್ಕೆ ತರಬೇತಿ ನೀಡಬೇಕು. ಮೂಲವೇತನಕ್ಕೆ ಹಾಲಿ ಇರುವ ಶೇಕಡ 31 ರಷ್ಟು ತುಟ್ಟಿಭತ್ಯೆ ವಿಲೀನಗೊಳಿಸಿ ಶೇಕಡ 40ರಷ್ಟು ಫಿಟ್ಮೆಂಟ್ ಸೌಲಭ್ಯ 2022ರ ಜುಲೈ 1 ರಿಂದ ಜಾರಿಗೆ ತರಬೇಕು.

ಕೇಂದ್ರ ಸರ್ಕಾರದ ಮಾದರಿಯಲ್ಲಿ 4 ವರ್ಷಕ್ಕೊಮ್ಮೆ ಎಲ್.ಟಿ.ಸಿ. ಸೌಲಭ್ಯ, ದಿನದ ಬಗ್ಗೆ ನೀಡಬೇಕು. ಆರೋಗ್ಯ ಸಂಜೀವಿನಿ ಯೋಜನೆ ವ್ಯಾಪ್ತಿಗೆ ವಿವಾಹಿತ ಮಹಿಳಾ ನೌಕರರ ತಂದೆ, ತಾಯಿ ಸೇರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತುಲಾ ರಾಶಿ ಭವಿಷ್ಯ.

Sat Feb 11 , 2023
ಕೆಲವು ಮಾನಸಿಕ ಒತ್ತಡಗಳ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ಆರ್ಥಿಕ ಜೀವನದ ಸ್ಥಿತಿ ಇಂದು ಉತ್ತಮವಾಗಿದೆ ಎಂದು ಹೇಳಲಾಗುವುದಿಲ್ಲ, ಇಂದು ನಿಮ್ಮನ್ನು ಉಳಿಸಲು ನಿಮಗೆ ಕಷ್ಟವಾಗಬಹುದು. ನಿಮ್ಮ ಅತಿಯಾದ ಜೀವನಶೈಲಿ ಮನೆಯಲ್ಲಿ ಆತಂಕ ಸೃಷ್ಟಿಸಬಹುದು ಆದ್ದರಿಂದ ತಡರಾತ್ರಿಯನ್ನು ಹಾಗೂ ಇತರರ ಮೇಲೆ ಬಹಳ ಖರ್ಚು ಮಾಡುವುದನ್ನು ತಪ್ಪಿಸಿ. ಒಂದು ಸ್ಥಳದಲ್ಲಿ ನಿಂತಾಗ ಪ್ರೀತಿ ನಿಮ್ಮನ್ನು ಒಂದು ಹೊಸ ಜಗತ್ತಿಗೆ ತೆಗೆದುಕೊಂಡು ಹೋಗಬಹುದು. ಇದು ನೀವು ಪ್ರಣಯಭರಿತ ಪ್ರವಾಸಕ್ಕೆ ಹೋಗುವ ದಿನ. ಇತರರನ್ನು […]

Related posts

Advertisement

Wordpress Social Share Plugin powered by Ultimatelysocial