ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್!

 

ನವದೆಹಲಿ : ಅಮೆರಿಕ ಅಧ್ಯಕ್ಷ ಜೋ ಬಿಡೆನ್ , ಯುಕೆ ಪ್ರಧಾನಿ ಬೋರಿಸ್ ಜಾನ್ಸನ್  ಮತ್ತು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್  ಅವರಂತಹ ಜಾಗತಿಕ ನಾಯಕರನ್ನ ಸೋಲಿಸಿ ಪ್ರಧಾನಿ ನರೇಂದ್ರ ಮೋದಿ  ಮತ್ತೊಮ್ಮೆ ‘ಜಾಗತಿಕ ನಾಯಕರ ಅನುಮೋದನೆ ರೇಟಿಂಗ್ ಪಟ್ಟಿಯಲ್ಲಿ ಶೇ.72ರಷ್ಟು ಗರಿಷ್ಠ ರೇಟಿಂಗ್ಪ ಡೆದು ಅಗ್ರಸ್ಥಾನದಲ್ಲಿದ್ದಾರೆ.ಅಮೆರಿಕದ ಸಂಶೋಧನಾ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್  ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಪ್ರಧಾನಿ ಮೋದಿ ಅವರು 13 ವಿಶ್ವ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಮತ್ತು ಮೆಕ್ಸಿಕೊ ಅಧ್ಯಕ್ಷ ಲೋಪೆಜ್ ಒಬ್ರಡಾರ್ ಶೇ.64, ಇಟಲಿ ಪ್ರಧಾನಿ ಮಾರಿಯೋ ದ್ರಾಘಿ ಶೇ.57, ಫುಮಿಯೊ ಕಿಶಿಡಾ ಶೇ.47, ಜರ್ಮನ್ ಚಾನ್ಸಲರ್ ಓಲಾಫ್ ಶೋಲ್ಜ್ ಶೇ.42. ಅಮೆರಿಕ ಅಧ್ಯಕ್ಷ ಜೋ ಬಿಡೆನ್, ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ಎಲ್ಲರೂ ಶೇ.41ರಷ್ಟು ರೇಟಿಂಗ್ ಗಳಿಸಿದ್ದಾರೆ.ಇನ್ನು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಶೇ.37, ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೋನಾರೊ ಮತ್ತು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಶೇ.35 ರೇಟಿಂಗ್ ಪಡೆದಿದ್ದಾರೆ.ಅದ್ರಂತೆ, ಪ್ರಧಾನಿ ಮೋದಿ ಪರವಾಗಿ ಶೇಕಡಾ 71ರಷ್ಟು ಜನರು ಅನುಮೋದನೆಯಲ್ಲಿ ಮತ ಚಲಾಯಿಸಿದರೆ, ಶೇಕಡಾ 21ರಷ್ಟು ಜನರು ಅಸಮ್ಮತಿಯಿಂದ ಮತ ಚಲಾಯಿಸಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಸತತ ಮೂರನೇ ವರ್ಷವೂ ವಿಶ್ವ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತುಪ್ಪ ಹಾಕಿ ಅಡುಗೆ ಮಾಡುವುದು ಹೇಗೆ ಎಂಬುದು ನಿಮಗೆಲ್ಲಾ ತಿಳಿದಿದೆ. ಆದರೆ ಅದನ್ನು ಅಂದ ಹೆಚ್ಚಿಸುವ ವಸ್ತುವಾಗಿಯೂ ಬಳಸಬಹುದು.

Tue Feb 8 , 2022
  ತುಪ್ಪ ಹಾಕಿ ಅಡುಗೆ ಮಾಡುವುದು ಹೇಗೆ ಎಂಬುದು ನಿಮಗೆಲ್ಲಾ ತಿಳಿದಿದೆ. ಆದರೆ ಅದನ್ನು ಅಂದ ಹೆಚ್ಚಿಸುವ ವಸ್ತುವಾಗಿಯೂ ಬಳಸಬಹುದು.ತುಪ್ಪ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಲಿಪ್ ಬಾಮ್ ಅಥವಾ ಜೆಲ್ ಗಳಿಗಿಂತ ಉತ್ತಮವಾದುದು. ತುಟಿ ಒಡೆದಾಗ, ಸಿಪ್ಪೆ ಎದ್ದು ಬಂದಾಗ, ಕಳಾಹೀನವಾಗಿದೆ ಎನಿಸಿದಾಗ ಎರಡು ಹನಿ ತುಪ್ಪ ಸವರಿಕೊಳ್ಳಿ, ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡರೆ ಮತ್ತೂ ಒಳ್ಳೆಯದು.ವಾರದೊಳಗೆ ಅದರ ಪರಿಣಾಮವನ್ನು ನೀವು ಕಾಣಬಹುದು.ಇದು ತುಟಿಗೆ ಮೃದುತ್ವ ಕೊಡುತ್ತದೆ ಮಾತ್ರವಲ್ಲ ನಿಮ್ಮ […]

Advertisement

Wordpress Social Share Plugin powered by Ultimatelysocial