ಸೇಬು ಸೇವಿಸುವ ಮೊದಲು ಅದರ ವಿಧಾನ ತಿಳಿಯಿರಿ.

ಪ್ರತಿದಿನ ಒಂದು ಸೇಬು ಹಣ್ಣನ್ನು ತಿಂದು, ಆಸ್ಪತ್ರೆಯಿಂದ ದೂರವಿರಿ ಎಂಬ ಮಾತನ್ನು ನೀವು ಕೇಳಿರ್ತೀರಿ. ಸೇಬು ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ನಿಯಮಿತ ಸೇವನೆಯಿಂದ ಸಾಕಷ್ಟು ಲಾಭವಿದೆ. ಸೇಬು ಹಣ್ಣಿನಲ್ಲಿ ಜೀವಸತ್ವಗಳು, ಆಂಟಿ-ಆಕ್ಸಿಡೆಂಟ್‌ಗಳು, ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ಮೆಗ್ನೀಸಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಕೆ ಅಥವಾ ವಿಟಮಿನ್ ಬಿ -6 ಸೇರಿದಂತೆ ಅನೇಕ ಪೋಷಕಾಂಶಗಳಿವೆ.ಸೇಬು ಸೇವನೆ ಜೊತೆ ಯಾವಾಗ ಸೇವನೆ ಮಾಡಬೇಕು ಎಂಬುದನ್ನು ತಿಳಿದಿರಬೇಕು.

ಸೇಬು ಸಿಪ್ಪೆಯಲ್ಲಿ ಫೈಬರ್ ಸಮೃದ್ಧವಾಗಿದೆ. ಹಾಗಾಗಿ ಯಾವಾಗಲೂ ಸೇಬು ಹಣ್ಣನ್ನು ಸಿಪ್ಪೆ ಸಮೇತ ಸೇವನೆ ಮಾಡಬೇಕು. ಇದು ಮಲಬದ್ಧತೆ ಸಮಸ್ಯೆಗೆ ಪರಿಹಾರ ನೀಡುತ್ತದೆ. ಸೇಬು ಹಣ್ಣೊಂದೇ ಅಲ್ಲ ಯಾವುದೇ ಹಣ್ಣನ್ನು ಸೇವಿಸುವ ಮೊದಲು ಅದನ್ನು ಚೆನ್ನಾಗಿ ತೊಳೆಯಬೇಕು. ಅರ್ಧ ಗಂಟೆಯವರೆಗೆ ಉಗುರು ಬೆಚ್ಚಗಿನ ನೀರಿನಲ್ಲಿ ಸೇಬು ಹಣ್ಣನ್ನು ನೆನೆಸಿಟ್ಟು, ನಂತ್ರ ತೊಳೆದು ಸೇವನೆ ಮಾಡುವುದು ಹೆಚ್ಚು ಪರಿಣಾಮಕಾರಿ.ರಾತ್ರಿ ಮಲಗುವ ಮೊದಲು ಸೇಬು ಹಣ್ಣನ್ನು ಸೇವನೆ ಮಾಡಬಾರದು. ಹಗಲಿನಲ್ಲಿ ಸೇಬು ತಿನ್ನುವುದು ಉತ್ತಮ. ಖಾಲಿ ಹೊಟ್ಟೆಯಲ್ಲಿ ಸೇಬು ಹಣ್ಣಿನ ಸೇವನೆ ಮಾಡಬಹುದು.ದಿನಕ್ಕೆ ಒಂದು ಸೇಬು ಸೇವಿಸಿದರೆ ಸಾಕು.ಇದರಲ್ಲಿ ಕೆಫೀನ್ ಕೂಡ ಕಂಡುಬರುತ್ತದೆ. ಹಾಗಾಗಿ ತೂಕವನ್ನು ನಿಯಂತ್ರಣದಲ್ಲಿಡಲು, ದಿನಕ್ಕೆ ಒಂದು ಅಥವಾ ಎರಡು ಸೇಬುಗಳನ್ನು ಮಾತ್ರ ಸೇವಿಸಿ. ಅದಕ್ಕಿಂತ ಹೆಚ್ಚು ಸೇಬು ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೇಮಕಾತಿ

Sat Jan 29 , 2022
ಬೆಂಗಳೂರು : ಮಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಲ್ಯಾಬ್, ಲೈಬ್ರರಿ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತರು ಫೆಬ್ರವರಿ 4ರಂದು ನಡೆ ಯುವ ನೇರ ಸಂದರ್ಶನದಲ್ಲಿ ಭಾಗವಹಿಸಲು ಕೋರಲಾಗಿದೆ. ಹುದ್ದೆಯ ಮಾಹಿತಿ : ಲ್ಯಾಬ್​ ಅಸಿಸ್ಟೆಂಟ್ ಲೈಬ್ರರಿ ಅಸಿಸ್ಟೆಂಟ್ ಎ/ಸಿ ಮೆಕ್ಯಾನಿಕ್ ಪ್ಲಂಬರ್ ಶೈಕ್ಷಣಿಕ ವಿದ್ಯಾರ್ಹತೆ : ಮಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ವಿದ್ಯಾರ್ಥಿಗಳು ಆಯಾಯ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ […]

Advertisement

Wordpress Social Share Plugin powered by Ultimatelysocial