ಹಂತಕ ವಕೀಲನ ವಿರುದ್ಧ ಸಾಕ್ಷಿ ಲಭ್ಯ.

ರಾಮನಗರ, ಜನವರಿ 27: ಜಗತ್ತು ಪ್ರತಿ ದಿನ ಹೊಸ ಹೊಸ ಆವಿಷ್ಕಾರಗಳಿಗೆ ತೆರೆದುಕೊಳ್ಳತ್ತಿದ್ದೆ. ಹಾಗೆ ಅಪರಾಧ ಜಗತ್ತಿನಲ್ಲೂ ಅಪರಾಧಿಗಳು ಬಹಳ ಜಾಲಾಕಿನಿಂದ ಅಪರಾಧ ಕೃತ್ಯ ಮಾಡುವ ಮೂಲಕ ಪೊಲೀಸರ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನ ಮಾಡುತ್ತಾರೆ. ಹೀಗಾಗಿ ಪೊಲೀಸರು ಕೂಡ ತಂತ್ರಜ್ಞಾನ ಬಳಸಿಕೊಂಡು ಅಂತಹ ಅಪರಾಧಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ಸು ಕಂಡಿದ್ದಾರೆ.

ಕಳೆದ 8 ತಿಂಗಳಿಂದ ಪತ್ತೆಯಾಗದೆ ಪೊಲೀಸ್‌ ಇಲಾಖೆಗೆ ತಲೆ ನೋವಾಗಿದ್ದ ಪ್ರಕರಣವನ್ನು ‌ರಾಜ್ಯದಲ್ಲೇ ಪ್ರಥಮ ಬಾರಿಗೆ ನೂತನ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ತಂತ್ರಜ್ಞಾನ ಬಳಸಿ ಪತ್ತೆ ಹಚ್ಚುವ ಕೆಲಸವನ್ನು ರಾಮನಗರ ಜಿಲ್ಲೆಯ ಕನಕಪುರ ಟೌನ್ ಪೊಲೀಸರು ಮಾಡಿದ್ದಾರೆ.

ಕಳೆದ ವರ್ಷ ಮೇ ತಿಂಗಳಿನಲ್ಲಿ ಕನಕಪುರ ಟೌನ್ ಪೊಲೀಸ್‌ ಠಾಣೆಯಲ್ಲಿ‌ ನಾಗೇಂದ್ರ ಪ್ರಸಾದ್ ಅಲಿಯಾಸ್ ಶ್ರೇಯಸ್ಸು ಎಂಬ ಬಾಲಕನ ಕಾಣೆಯಾಗಿದ್ದನೆ ಎಂದು ಆತನ ತಾಯಿ ಆಶಾ ದಾಖಲು ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ವಕೀಲ ಶಂಕರೇಗೌಡನನ್ನು ಪತ್ತೆ ಹಚ್ಚಿದರೂ, ಆರೋಪಿ ಕ್ರಿಮಿನಲ್ ವಕೀಲನಾದ ಹಿನ್ನಲೆಯಲ್ಲಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದ. ನಾಪತ್ತೆಯಾದ ಬಾಲಕನನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ ಹಾಗಾಗಿ ಪೊಲೀಸರು ತಂತ್ರಜ್ಞಾನದ ಮೊರೆ ಹೋಗಿದ್ದರು.

ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಮೂಲಕ ಪತ್ತೆ ಹಚ್ಚಿದ ಪ್ರಥಮ ಪ್ರಕರಣಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ವಿಧಿ ವಿಜ್ಞಾನ ವಿಭಾಗದಲ್ಲಿ ನೂತನವಾಗಿ‌ ಅಪರಾಧಿಗಳ ಬ್ರೈನ್ ಮ್ಯಾಪಿಂಗ್ ತಂತ್ರಜ್ಞಾನ ಪ್ರಾರಂಭವಾಗಿರುವುದನ್ನು ತಿಳಿದು ನ್ಯಾಯಲಯದ ಅನುಮತಿ ಪಡೆದ ಪೊಲೀಸರು ಶ್ರೇಯಸ್ಸ್ ನಾಪತ್ತೆ ಪ್ರಕರಣದ ಆರೋಪಿ ವಕೀಲ ಶಂಕರೇಗೌಡನನ್ನು ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಒಳಪಡಿಸಿದ್ದಾರೆ. ಪರೀಕ್ಷೆಯಲ್ಲಿ ಆರೋಪಿ ಬಾಲಕ ಶ್ರೇಯಸ್‌ನನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡು ಹತ್ಯೆ ಮಾಡಿರುವುದು ದೃಢಪಟ್ಟಿದೆ. ರಾಜ್ಯದಲೇ ನೂತನ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಮೂಲಕ ಪತ್ತೆ ಹಚ್ಚಿದ ಪ್ರಥಮ ಪ್ರಕರಣ ಇದಾಗಿದೆ.

ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಬಗ್ಗೆ ಎಸ್‌ಪಿ ಹೇಳಿದ್ದೇನು..?

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂತೋಷ ಬಾಬು, “ಕಳೆದ ವರ್ಷ ಶ್ರೇಯಸ್ಸ್ ನಾಪತ್ತೆ ಪ್ರಕರಣ ತನಿಖೆ ವೇಳೆ ಆರೋಪಿ ವಕೀಲ‌ ಶಂಕರೇಗೌಡ, ಅರುಣ್ ಮತ್ತು ಶ್ರೇಯಸ್ಸ್ ಇಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡು, ಶ್ರೇಯಸ್ಸ್‌ನನ್ನು ಕೊಲೆ ಮಾಡಿರುವುದು ದೃಢಪಟ್ಟಿತ್ತು ಹಾಗೂ ಸಾಕ್ಷಿಗಳು ದೊರೆತ ಹಿನ್ನಲೆಯಲ್ಲಿ ಆರೋಪಿ ವಕೀಲ ಶಂಕರೇಗೌಡ ಮತ್ತು ಅರುಣ್ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದೇವು. ನಂತರ ಆರೋಪಿಗಳನ್ನು ಪೊಲೀಸ್‌ ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆರೋಪಿ ವಕೀಲ ಶಂಕರೇಗೌಡ ಪೋಲಿಸರಿಗೆ ಮಾಹಿತಿ ನೀಡದೆ ಸತಾಯಿಸುತ್ತಿದ್ದ. ಅಲ್ಲದೇ ಶ್ರೇಯಸ್ಸ್ ಮೃತದೇಹ ಪತ್ತೆ ಮಾಡಲು ಸಾಧ್ಯವಾಗಿರಲ್ಲಿಲ್ಲ. ಈ ನಡುವೆ ನವೆಂಬರ್ ತಿಂಗಳಿನಲ್ಲಿ‌ ಪಾರೆನ್ಸಿಕ್ ವಿಭಾಗದಲ್ಲಿ ‘ಬ್ರೈನ್ ಎಲೆಕ್ಟ್ರಿಕಲ್ ಅಸಿಲೇಷನ್ ಪ್ರೂಪೈಲಿಂಗ್’ ತಂತ್ರಜ್ಞಾನ ಪರಿಚಯಿಸಿರುವುದು ಗೊತ್ತಾಯಿತ್ತು. ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಈ ಪ್ರಕರಣ ಸೂಕ್ತವಾಗಿತ್ತು ಎಂದಿದ್ದಾರೆ.

ಕೋರ್ಟ್‌ಗೆ ಸಾಕ್ಷಿ ಹಾಜರು ಪಡಿಸಿದ ಪೊಲೀಸರು

ಶ್ರೇಯಸ್ಸ್ ಕೊಲೆ ಆರೋಪಿ ವಕೀಲ ಶಂಕರೇಗೌಡನನ್ನು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲು ಕೋರ್ಟ್ ಅನುಮತಿ ಪಡೆದು. ಆರೋಪಿಗೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡಸಲಾಯಿತ್ತು. ಪರೀಕ್ಷೆಯಲ್ಲಿ ಬಾಲಕನನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡು ಕೊಂದು ಕೆರೆಗೆ ಹಾಕಿರುವುದಾಗಿ ಆರೋಪಿ ಶಂಕರೇಗೌಡ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯ ಬ್ರೈನ್ ಮ್ಯಾಪಿಂಗ್ ರಿಪೋರ್ಟ್‌ಅನ್ನು ಕೋರ್ಟ್‌ಗೆ ಸಲ್ಲಿಸಿದ್ದೇವೆ. ಇತರೆ ರಾಜ್ಯಗಳಲ್ಲಿ ಬ್ರೈನ್ ಮ್ಯಾಪಿಂಗ್ ವರದಿಯನ್ನು ಸಾಕ್ಷಿಯಾಗಿ ನ್ಯಾಯಾಲಯ ಪರಿಗಣಿಸಿರುವ ಹಿನ್ನಲೆಯಲ್ಲಿ ನಮ್ಮ ರಾಜ್ಯದಲ್ಲೂ ನ್ಯಾಯಾಲಯ ಸಾಕ್ಷಿಯಾಗಿ ಪರಿಗಣಿಸಬಹುದು ಎಂಬ ವಿಶ್ವಾಸವನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂತೋಷ ಬಾಬು ವ್ಯಕ್ತಪಡಿಸಿದರು.

ಕಚೇರಿ ಸ್ಥಳಾಂತರಿಸುವ ನೆಪದಲ್ಲಿ ಯುವಕನ ಕೊಲೆ

ರಾಮನಗರ ಜಿಲ್ಲೆಯ ಕನಕಪುರ ನಗರದ ಎಂಜಿ ರಸ್ತೆಯಲ್ಲಿ ವಾಸವಾಗಿರುವ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುವ ಆಶಾ ಎನ್ನುವ ಮಹಿಳೆಯ 17 ವರ್ಷದ ಅಪ್ರಾಪ್ತ ಮಗ ನಾಗೇಂದ್ರ ಪ್ರಸಾದ್ ಅಲಿಯಾಸ್ ಶ್ರೇಯಸ್ ಎಂಬಾತ ಕಳೆದ ವರ್ಷ ಮೇ 19ರ ರಾತ್ರಿ 10 ಗಂಟೆ ಸುಮಾರಿಗೆ ತನಗೆ ಪರಿಚಿತರಾದ ವಕೀಲ ಶಂಕರೇಗೌಡ ಅವರು ತಮ್ಮ ಕಚೇರಿ ಸ್ಥಳಾಂತರ ಮಾಡಲು ಕರೆದಿದ್ದಾರೆ. ಹೋಗಿ ಬರುತ್ತೇನೆ ಎಂದು ತಾಯಿ ಆಶಾ ಬಳಿ ಹೇಳಿ ಹೊರ ಹೋಗಿದ್ದ. ಆದರೆ ನಾಗೇಂದ್ರ ಪ್ರಸಾದ್ ಮತ್ತೆ ವಾಪಾಸ್ ಮನೆಗೆ ಬಂದಿರಲಿಲ್ಲ.

ಮಗ ಶ್ರೇಯಸ್ ನಾಪತ್ತೆಯಾದ ಹಿನ್ನೆಲೆಯಲ್ಲಿ ಕಳೆದ ವರ್ಷ ಮೇ.24 ರಂದು ಆಶಾ ಕನಕಪುರ ಟೌನ್ ಪಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಕನಕಪುರ ಟೌನ್ ಪೊಲೀಸರು ವಕೀಲ ಶಂಕರೇಗೌಡ ಹಾಗೂ ಮೈಸೂರು ಮೂಲದ ಅರುಣ್ ಎಂಬಾತನನ್ನು ಬಂಧಿಸಿ ಸಾಕಷ್ಟು ವಿಚಾರಣೆ ನಡೆಸಿದ್ದರು. ವಕೀಲ ಶಂಕರೇಗೌಡ ಬಾಯಿ ಬಿಡದ ಹಿನ್ನಲೆಯಲ್ಲಿ ಪ್ರಕರಣ ಭೇದಿಸಲು ಪೊಲೀಸರು ವಿಶೇಷ ತಂಡವನ್ನು ಕೂಡ ರಚನೆ ಮಾಡಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಚಾರ್ ಧಾಮ್ ಯಾತ್ರೆ'ಗೆ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ ;

Fri Jan 27 , 2023
ನವದೆಹಲಿ : ಗರ್ವಾಲ್ ಹಿಮಾಲಯದಲ್ಲಿ ವಾರ್ಷಿಕ ನಡೆಯುವ ಅತ್ಯಂತ ಜನಪ್ರಿಯ ತೀರ್ಥಯಾತ್ರೆಗಳಲ್ಲಿ ಒಂದಾದ ಚಾರ್ ಧಾಮ್ ಯಾತ್ರೆ ಈ ವರ್ಷ ದಾಖಲೆ ಸಂಖ್ಯೆಯ ಭಕ್ತರನ್ನು ಸೆಳೆಯಲಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್ ಐಯೊಂದಿಗೆ ಮಾತನಾಡಿದ ಧಾಮಿ, ಉತ್ತರಾಖಂಡ ಸರ್ಕಾರವು ಅದ್ಧೂರಿಯಾಗಿ ಮಾಡಬೇಕಾದ ಯಾತ್ರೆಯ ಸಿದ್ಧತೆಗಳತ್ತ ಗಮನ ಹರಿಸಲಿದೆ. ಕಳೆದ ವರ್ಷ ನಡೆದ ಚಾರ್ ಧಾಮ್ ಯಾತ್ರೆಯಲ್ಲಿ ಬಹಳಷ್ಟು ಭಕ್ತರು ಭಾಗವಹಿಸಿದ್ದಾರೆ. ಯಾತ್ರಾರ್ಥಿಗಳಿಗೆ […]

Advertisement

Wordpress Social Share Plugin powered by Ultimatelysocial