‘ಚಾರ್ ಧಾಮ್ ಯಾತ್ರೆ’ಗೆ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ ;

ವದೆಹಲಿ : ಗರ್ವಾಲ್ ಹಿಮಾಲಯದಲ್ಲಿ ವಾರ್ಷಿಕ ನಡೆಯುವ ಅತ್ಯಂತ ಜನಪ್ರಿಯ ತೀರ್ಥಯಾತ್ರೆಗಳಲ್ಲಿ ಒಂದಾದ ಚಾರ್ ಧಾಮ್ ಯಾತ್ರೆ ಈ ವರ್ಷ ದಾಖಲೆ ಸಂಖ್ಯೆಯ ಭಕ್ತರನ್ನು ಸೆಳೆಯಲಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.

ಸುದ್ದಿ ಸಂಸ್ಥೆ ಎಎನ್ ಐಯೊಂದಿಗೆ ಮಾತನಾಡಿದ ಧಾಮಿ, ಉತ್ತರಾಖಂಡ ಸರ್ಕಾರವು ಅದ್ಧೂರಿಯಾಗಿ ಮಾಡಬೇಕಾದ ಯಾತ್ರೆಯ ಸಿದ್ಧತೆಗಳತ್ತ ಗಮನ ಹರಿಸಲಿದೆ. ಕಳೆದ ವರ್ಷ ನಡೆದ ಚಾರ್ ಧಾಮ್ ಯಾತ್ರೆಯಲ್ಲಿ ಬಹಳಷ್ಟು ಭಕ್ತರು ಭಾಗವಹಿಸಿದ್ದಾರೆ. ಯಾತ್ರಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ ಎಂದಿದ್ದಾರೆ.

ಈ ವರ್ಷ, ನಾವು ನಮ್ಮ ಸಿದ್ಧತೆಗಳನ್ನು ಮೊದಲೇ ಮಾಡುತ್ತಿದ್ದೇವೆ. ಭಕ್ತಾದಿಗಳಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿ ಯಾತ್ರೆಯನ್ನು ಸುರಕ್ಷಿತ, ಸುಲಭ ಮತ್ತು ಆರಾಮದಾಯಕವಾಗಿಸಬೇಕು. ಬಾಬಾ ಬದ್ರಿ ವಿಶಾಲ್ ಅವರ ಆಶೀರ್ವಾದದೊಂದಿಗೆ ನಾವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಧಾಮಿ ಹೇಳಿದ್ದಾರೆ.

ಚಾರ್ ಧಾಮ್ ಯಾತ್ರೆ ಆರಂಭವಾಗಲು ಇನ್ನು 100 ದಿನಗಳು ಮಾತ್ರ ಬಾಕಿ ಉಳಿದಿವೆ. ನಮ್ಮ ಯಾತ್ರೆಯು ಈ ವರ್ಷ ದಾಖಲೆ ಮುರಿಯಲಿದೆ. ಅದಕ್ಕಾಗಿ ನಾವು ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಬದರಿನಾಥ ದೇವಾಲಯದ ಪವಿತ್ರ ದ್ವಾರಗಳು ಏ. 27 ರಂದು ತೆರೆಯಲಾಗುವುದು ಎಂದು ಅಧಿಕಾರಿಗಳು ಘೋಷಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧಾರ್ಮಿಕ ಸ್ಥಳಗಳನ್ನು ಧಾರ್ಮಿಕ ಜನರಿಗೇಕೆ ಬಿಟ್ಟುಬಿಡಬಾರದು?

Fri Jan 27 , 2023
ಹೊಸದಿಲ್ಲಿ: ಅಹೋಬಿಲಂ ಮಠಕ್ಕೆ ಸೇರಿದ್ದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತವನ್ನು ಸರಕಾರದ ಸುಪರ್ದಿಗೆ ತರುವ ತನ್ನ ಯೋಜನೆಗೆ ಹೈಕೋರ್ಟಿನಿಂದ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದ ಆಂಧ್ರ ಪ್ರದೇಶ ಸರ್ಕಾರದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರಾಕರಿಸಿದ ನ್ಯಾಯಾಲಯ “ಧಾರ್ಮಿಕ ಸ್ಥಳಗಳನ್ನು ಧಾರ್ಮಿಕ ಜನರಿಗೇ ಬಿಟ್ಟುಬಿಡಬಾರದೇಕೆ?” ಎಂದು ಪ್ರಶ್ನಿಸಿದೆ. ಆಂದ್ರ ಪ್ರದೇಶ ಹೈಕೋರ್ಟಿನ ಅಕ್ಟೋಬರ್‌ 13, 2022 ಆದೇಶವನ್ನು ಪ್ರಶ್ನಿಸಿ ಆಂಧ್ರ ಪ್ರದೇಶ ಸರ್ಕಾರ ಸಲ್ಲಿಸಿದ್ದ […]

Advertisement

Wordpress Social Share Plugin powered by Ultimatelysocial