ಮಹಾರಾಷ್ಟ್ರ ಸರ್ಕಾರಿ ಬಸ್‌ ಕಳವು ಮಾಡಿ ಕರ್ನಾಟಕದಲ್ಲಿ ನಿಲ್ಲಿಸಿ ಪರಾರಿ.

ಲಾತೂರ್‌, ಫೆ.03. ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್ಸೊಂದನ್ನು ಅನಾಮಿಕರು ಕಳವು ಮಾಡಿ ಕರ್ನಾಟಕದಲ್ಲಿ ನಿಲ್ಲಿಸಿ ಪರಾರಿ ಆಗಿರುವ ಘಟನೆ ವರದಿಯಾಗಿದೆ.

ಮಹಾರಾಷ್ಟ್ರದ ಲಾತೂರು ಬಳಿಕ ಔರಾದ ಶಹಾಜಾನಿ ನಿಲ್ದಾಣದಿಂದ ನಿಲ್ಲಿಸಲಾಗಿದ್ದ ಬಸ್ಸು ಇದ್ದಕ್ಕಿದ್ದಂತೆ ನಾಪತ್ತೆ ಆಗಿತ್ತು.

ಬಳಿಕ ಈ ಬಸ್ಸು 14 ಕಿ.ಮೀ. ದೂರದ ಕರ್ನಾಟಕದ ಕೇಸರ್‌ ಜವಳಗಾ ಗ್ರಾಮದ ಬಳಿ ಪತ್ತೆ ಆಗಿದೆ. ಯಾರೋ ಅಪರಿಚಿತ ವ್ಯಕ್ತಿ ಇದನ್ನು ಚಲಾಯಿಸಿಕೊಂಡು ಬಂದು, ಜವಳಗಾ ಗ್ರಾಮದಲ್ಲಿ ನಿಲ್ಲಿಸಿ ಹೋಗಿದ್ದಾನೆ. ಯಾರು ಇದನ್ನು ಮಾಡಿದ್ದು, ಏಕೆ ಮಾಡಿದ್ದು, ಎಂಬ ಬಗ್ಗೆ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡ್ರಗ್ಸ್ ಹೊತ್ತೊಯ್ಯುತ್ತಿದ್ದ ಪಾಕಿಸ್ತಾನದ ಡ್ರೋನ್‌ಅನ್ನು ಹೊಡೆದುರುಳಿಸಿದ ಬಿಎಸ್‌ಎಫ್

Fri Feb 3 , 2023
ಫೆ.03. ಮಾದಕ ದ್ರವ್ಯವನ್ನು ಹೊತ್ತೊಯ್ಯುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿಯಿಂದ ಭಾರತಕ್ಕೆ ಪ್ರವೇಶಿಸುತ್ತಿದ್ದ ವೇಳೆ ಗಡಿ ಭದ್ರತಾ ಪಡೆಗಳು (ಬಿಎಸ್‌ಎಫ್) ಹೊಡೆದುರುಳಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜ್ಯದ ಅಮೃತಸರ ಸೆಕ್ಟರ್‌ನ ಗಡಿ ಪೋಸ್ಟ್ ಹಿಂಭಾಗದ ಕಕ್ಕರ್ ಬಳಿ ಮಾನವ ರಹಿತ ವೈಮಾನಿಕ ವಾಹನವು ಕೆಳಗಿಳಿದಿದೆ. ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಗಡಿ ಬೇಲಿ ಮತ್ತು ಶೂನ್ಯ ರೇಖೆಯ ನಡುವೆ ಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಕ್ವಾಡ್‌ಕಾಪ್ಟರ್‌ನೊಂದಿಗೆ ಶಂಕಿತ ಹೆರಾಯಿನ್ ಹೊಂದಿರುವ […]

Advertisement

Wordpress Social Share Plugin powered by Ultimatelysocial