ಹೆಚ್.ಡಿ ರೇವಣ್ಣಗೆ ಕೊರೊನಾ ಭೀತಿ

ಹಾಸನದಲ್ಲಿ ಕಳೆದ ಒಂದು ವಾರದಿಂದ ಕೊರೋನಾ ಸೋಂಕಿನ ಪ್ರಮಾಣ ಏರುತ್ತಲೇ ಇದೆ. ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಬೆಂಗಾವಲು ವಾಹನದಲ್ಲಿ ಇರುವ ನಾಲ್ವರು ಪೊಲೀಸರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ರೇವಣ್ಣ ಅವರ ಇಬ್ಬರು ಆಪ್ತ ಸಹಾಯಕರು ಸೇರಿ ಒಟ್ಟು ಒಂಬತ್ತು ಜನರ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಲಾಗಿತ್ತು. ಎಸ್ಕಾರ್ಟ್ ವಾಹನದಲ್ಲಿ ಕಾರ್ಯನಿರ್ವಹಿಸುವ ನಾಲ್ವರು ಸಿಬ್ಬಂದಿಗಳ ಪೈಕಿ ಬೆಂಗಳೂರಿನ ಮೂವರು ಹಾಗೂ ಹಾಸನದ ಒಬ್ಬ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಸದ್ಯ ಬೆಂಗಳೂರಿನಲ್ಲಿರುವ ರೇವಣ್ಣರಿಗೂ ಸೋಂಕು ಭೀತಿ ತಟ್ಟಿದೆ. ರೇವಣ್ಣ ಅವರಿಗೂ ಸೋಂಕು ಪರೀಕ್ಷೆ ಮಾಡಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯದ್ಯಂತ ಮಾರಕ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಸೋಂಕು ನಿಯಂತ್ರಣ ಸವಾಲಾಗಿ ಪರಿಣಮಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಯುವ ಘಟಕದ ವತಿಯಿಂದ ಪ್ರತಿಭಟನೆ

Tue Jun 30 , 2020
ಸರ್ಜಾಪುರ ಹೋಬಳಿ ಚಿಕ್ಕ ದುನ್ನಸಂದ್ರ ಗ್ರಾಮದಲ್ಲಿ ಕಾರ್ಖನೆ ನಡೆಸುತ್ತಿರುವ ಸಬಿಕ್ ರಿಸರ್ಚ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯಲ್ಲಿ ಸ್ಥಳೀಯ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹೊರರಾಜ್ಯದ ನೌಕರರನ್ನು ನೇಮಕಾತಿ ಮಾಡುತ್ತಿರುವ ಸಲುವಾಗಿ ಕರ್ನಾಟಕ ರಕ್ಷ ವೇದಿಕೆಯ ಆನೇಕಲ್ ತಾಲೂಕ್ ಯುವ ಘಟಕದ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಸಜಾಪುರ ನೆಲ-ಜಲ ಹಾಗೂ ಕರ್ನಾಟಕದ ಸವಲತ್ತುಗಳನ್ನು ಬಲ ಬಳಸಿಕೊಂಡರು ಸ್ಥಳೀಯ ಉದ್ಯೋಗಿಗಳನ್ನು ಕೆಲಸದಿಂದ ತಗೋದು ಹೊರರಾಜ್ಯದ ನೌಕರರನ್ನು ನೇಮಕಾತಿ ಮಾಡುತ್ತಿದ್ದು, ಇದರಿಂದ ಸ್ಥಳೀಯ […]

Advertisement

Wordpress Social Share Plugin powered by Ultimatelysocial