ಮಾಡೆಲ್ ಹೋಟಲ್ ನ 6 ನೇ ಮಹಡಿಯಿಂದ ಹಾರಿದ ರೂಪದರ್ಶಿ

 

ರಾಜಸ್ಥಾನದ ಜೋಧಪುರದಲ್ಲಿ 19 ವರ್ಷದ ಮಾಡೆಲ್​ ಹೋಟೆಲ್​ ಟೆರೇಸ್​ನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆಯು ವರದಿಯಾಗಿದೆ.ಶನಿವಾರ ರಾತ್ರಿಯ ವೇಳೆಗೆ ಈ ಘಟನೆ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗುನ್​ಗುನ್​ ಉಪಾಧ್ಯಾಯ ಎಂಬ ರೂಪದರ್ಶಿಯು ಶನಿವಾರದಂದು ಉದಯಪುರದಿಂದ ಜೋಧಪುರಕ್ಕೆ ಮರಳಿದ್ದರು ಎನ್ನಲಾಗಿದೆ.ಜೋಧಪುರ ಹೋಟೆಲ್​​ ಲಾರ್ಡ್ಸ್​​ ಇನ್​​ನಲ್ಲಿ ಗುನ್​​ಗುನ್​​ ಉಪಾಧ್ಯಾಯ ಇದ್ದರು ಎನ್ನಲಾಗಿದೆ. ಈ ಕಠಿಣ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಗುನ್​​ಗುನ್​ ತನ್ನ ತಂದೆಗೆ ಫೋನ್​ ಮಾಡಿ ತನ್ನ ಮುಖವನ್ನು ನೋಡುವಂತೆ ಹೇಳಿದ್ದರು ಎನ್ನಲಾಗಿದೆ.ಇದರಿಂದ ಆತಂಕಗೊಂಡ ತಂದೆಯು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದರು. ಕೂಡಲೇ ಪೊಲೀಸರು ಜೋಧಪುರ ಹೋಟೆಲ್​​ಗೆ ತೆರಳಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಾಡೆಲ್​​ ಗುನ್​​ಗುನ್​ ಹೋಟೆಲ್​ನ ಆರನೇ ಮಹಡಿಯಿಂದ ಹಾರಿದ್ದರು.ಗುನ್​ಗುನ್​ ಉಪಧ್ಯಾಯರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ಸೂಕ್ತವಾದ ತನಿಖೆ ಮುಂದುವರಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಏಕೆ ಈ ಮನೆಮದ್ದು ನಿಮ್ಮ ಸೌಂದರ್ಯ ಸಮಸ್ಯೆಗಳಿಗೆ ಉತ್ತರ ಹಾಗಿರಬಾರದು?

Mon Jan 31 , 2022
ಕಾಂತಿಯುತವಾದ ಚರ್ಮ ಮತ್ತು ಸುವಾಸನೆಯ ಕೂದಲನ್ನು ಪಡೆಯಲು ಮನೆಮದ್ದುಗಳು ಅತ್ಯುತ್ತಮ ಮತ್ತು ಅತ್ಯಂತ ಒಳ್ಳೆ ಮಾರ್ಗವಾಗಿದೆ. ಇದು ಅರಿಶಿನದ ಫೇಸ್ ಪ್ಯಾಕ್ ಅಥವಾ ತೆಂಗಿನ ಎಣ್ಣೆ ಮಸಾಜ್ ಆಗಿರಲಿ, ಅಡುಗೆಮನೆಯಲ್ಲಿ ನೀವು ಉತ್ತಮ ಫಲಿತಾಂಶವನ್ನು ಪಡೆಯಲು ಬಳಸಬಹುದಾದ ಹಲವಾರು ಪದಾರ್ಥಗಳು ಲಭ್ಯವಿವೆ. ಅರಿಶಿನ ಮತ್ತು ತೆಂಗಿನಕಾಯಿಯನ್ನು ಹೊರತುಪಡಿಸಿ, ಅಕ್ಕಿ ನೀರು ಜನಪ್ರಿಯತೆಯನ್ನು ಗಳಿಸಿದೆ. ಅಕ್ಕಿ ಮತ್ತು ಅಕ್ಕಿ ನೀರು ಇನ್ನೂ ಕೆಲವು ಜನಪ್ರಿಯ ಸೌಂದರ್ಯ ಪದಾರ್ಥಗಳು ಚರ್ಮವನ್ನು ಬಿಳುಪುಗೊಳಿಸುವ, ಹೊಳಪು […]

Advertisement

Wordpress Social Share Plugin powered by Ultimatelysocial