೧೮ನೇ ದಿನವೂ ಹೆಚ್ಚಿದ ಪೆಟ್ರೋಲ್

ಕೋವಿಡ್‌-19 ದಿನದಿಂದ ದಿನಕ್ಕೆಹಚ್ಚಾಗುತ್ತಿದ್ದು. ಹಣದುಬ್ಬರ ಪ್ರಮಾಣವು ಏರಿಕೆಯಾಗುತ್ತಿದೆ. ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಕೇಂದ್ರ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಸತತ 18ನೇ ದಿನವೂ ಹೆಚ್ಚಿಸಿದೆ. ಈ ಕುರಿತಂತೆ ದರ ನಿರಂತರವಾಗಿ ಏರಿಕೆಯಾಗುತ್ತಿರುವುದನ್ನು ವಿರೋಧಿಸಿ ಪಕ್ಷದ ಕಾರ್ಯಕರ್ತರೊಂದಿಗೆ ಇಂದು ಸೈಕಲ್‌ ಜಾಥಾದಲ್ಲಿ ಭಾಗವಹಿಸಿದ್ದ ದಿಗ್ವಿಜಯ್‌ ಸಿಂಗ್‌, ದರ ಏರಿಕೆಯು ಪ್ರಧಾನಿ ನರೇಂದ್ರಮೋದಿ ಅವರಿಗೆ ವಿಪತ್ತಿನ ಕಾಲದ ಅವಕಾಶವಾಗಿದೆ ಎಂದು ಟೀಕಿಸಿದ್ದರು. ಜಾಥಾ ನಡೆಸಿದ ಆರೋಪದ ಮೇಲೆ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಹಾಗೂ ಪಕ್ಷದ 150 ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಹಾಗೂ ಇಂಧನ ದರ ಏರಿಕೆಯನ್ನು ವಿರೋಧಿಸಿ  ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 341, 188, 143, 269 ಮತ್ತು 270ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

 

.

 

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾದಿಂದ ನಮ್ಮ ಕುಟುಂಬ ಸೇಫ್

Thu Jun 25 , 2020
ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಾಗಡಿ ಮಾಜಿ ಶಾಸಕ ಹೆಚ್ ಸಿ ಬಾಲಕೃಷ್ಣ ಅವರ ಮಗಳು ರಚನಾಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ಬಾಲಕೃಷ್ಣ ಅವರ ಕುಟುಂಬ ಸದಸ್ಯರಿಗೂ ಸೋಂಕು ತಗುಲಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಇದೀಗ, ಬಾಲಕೃಷ್ಣ ಹಾಗೂ ಅವರ ಕುಟುಂಬ ಸದಸ್ಯರ ಕೊರೊನಾ ವರದಿ ಹೊರಬಿದ್ದಿದ್ದು, ಎಲ್ಲರಿಗೂ ನೆಗಿಟಿವ್ ಬಂದಿದೆ. ಈ ವಿಷಯ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಎಚ್ ಸಿ ಬಾಲಕೃಷ್ಣ ಎಲ್ಲರಿಗೂ […]

Advertisement

Wordpress Social Share Plugin powered by Ultimatelysocial