“ಬಿಳಿ ಚುಕ್ಕಿ ಹಳ್ಳಿ ಹಕ್ಕಿ”ಯಲ್ಲಿ ಮಹಿರ ಖ್ಯಾತಿಯ ಮಹೇಶ್ ಗೌಡ !

 

ಈ ಹಿಂದೆ ಮಹಿರ ಎಂಬ ಸಿನಿಮಾ ಬಂದಿತಲ್ಲ. ರಾಜ್ ಬಿ ಶೆಟ್ಟಿ, ಚೈತ್ರಾ ಆಚಾರ್ ಸೇರಿದಂತೆ ಒಂದಷ್ಟು ಪ್ರತಿಭಾನ್ವಿತರು ನಟಿಸಿದ್ದ..ತಾಯಿ ಮಗಳ ಹೋರಾಟದ ಕಥೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದ ನಿರ್ದೇಶಕ ಮಹೇಶ್ ಗೌಡ ಈ ಬಾರಿ ಯಾರು ಮಾಡಿರದ.. ಹೊಸ ಪ್ರಯತ್ನದ ಸಿನಿಮಾವೊಂದಕ್ಕೆ ಕೈ ಹಾಕಿದ್ದಾರೆ.

ಅದರ ಮೊದಲ ಭಾಗವೆಂಬಂತೆ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ನ್ನು ಯುಗಾದಿ ಹಬ್ಬದ ಸ್ಪೆಷಲ್ ಆಗಿ ರಿಲೀಸ್ ಮಾಡಿದ್ದಾರೆ.’ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಮಹೇಶ್ ಗೌಡ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಎರಡನೇ ಸಿನಿಮಾ. ಈ ಸಿನಿಮಾಗೆ ತಾವೇ ಕಥೆ ಬರೆದು ಆಕ್ಷನ್ ಕಟ್ ಹೇಳುವುದರ ಜೊತೆಗೆ ತಮ್ಮದೇ ಹೊನ್ನುಡಿ ಪ್ರೊಡಕ್ಷನ್ ನಡಿ ಮಹೇಶ್ ಚಿತ್ರಕ್ಕೆ ಬಂಡವಾಳ ಹಾಕ್ತಿದ್ದು, ಜೊತೆ ದಿನೇಶ್ ಎಂಬ ಪಾತ್ರ ಪೋಷಣೆ ಮಾಡ್ತಿದ್ದಾರೆ. ಹಳ್ಳಿ ಹುಡ್ಗಿ ಕವಿತಾ ಆಗಿ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಮಹೇಶ್ ಗೆ ಜೋಡಿಯಾಗಿ ಬಣ್ಣ ಹಚ್ಚಿದ್ದಾರೆ.

ನಾಯಕ ದಿನೇಶ್ ತೊನ್ನು(ವಿಟಿಲಿಗೋ) ಸಮಸ್ಯೆ ಇರುತ್ತೇ. ಆತ ಪಕ್ಕದ ಊರಿನ ಚೆಂದದ ಮುದ್ದು ಮುದ್ದಾದ ಹುಡ್ಗಿ ಕವಿತಾಳನ್ನು ವರಿಸ್ತಾರೆ. ಸಮಸ್ಯೆ ಗೊತ್ತಿದ್ರೂ ಕವಿತಾ ತನ್ನನ್ನ ಮದ್ವೆಯಾಗೋದೇಕೆ ಅನ್ನೋ ಕನ್ಫೂಷನ್ ದಿನೇಶ್ ಗೆ ಕಾಡ್ತಿರುತ್ತದೆ. ಅದನ್ನು ಕಾಮಿಡಿಯಲ್ಲಿ ಹೇಳೋದೇ ದೊಡ್ಡ ಚಾಲೆಂಜ್ ಅಂತಾರೇ ಮಹೇಶ್.. ಅಂದಹಾಗೇ ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಸಿನಿಮಾ ರೋಮ್ಯಾಂಟಿಕ್ ಕಾಮಿಡಿ ಜಾನರ್ ಚಿತ್ರವಾಗಿದ್ದು, ಪಕ್ಕಾ ಮನರಂಜನೆ ನೀಡಲಿದೆ.

ಮಹೇಶ್ ಗೌಡ ತಮ್ಮದೇ ತೊನ್ನಿನ ಸಮಸ್ಯೆಯನ್ನು ಇಲ್ಲಿ ಕಥೆಯಾಗಿ ಪರಿವರ್ತಿಸಿದ್ದಾರೆ. ಇಂತಹ ಸಿನಿಮಾಗಳನ್ನು ತೆರೆಮೇಲೆ ಮಾಡೋದು ಕಷ್ಟವೇ ಸರಿ. ಅಂತಹ ಸಾಹಸಕ್ಕೆ ಮುಂದಾಗಿರುವ ಮಹೇಶ್ ಗೌಡ ಕಾರ್ಯಕ್ಕೆ ಶಹಬ್ಬಾಸ್ ಹೇಳಲೇಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಸ್ಲಿಂ ಸರ್ಕಾರಿ ನೌಕರರಿಗೆ ವಿಶೇಷ ಅವಕಾಶ ?

Fri Apr 8 , 2022
  ಹೈದರಾಬಾದ್ : ರಂಜಾನ್ ತಿಂಗಳಲ್ಲಿ ಸರ್ಕಾರಿ ನೌಕರರು ಸೇರಿದಂತೆ ಶಿಕ್ಷಕರು ಒಂದು ಗಂಟೆ ಮುಂಚಿತವಾಗಿ ಕಚೇರಿಯಿಂದ ತೆರಳಲು ಆಂಧ್ರ ಪ್ರದೇಶ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ. ರಂಜಾನ್ ತಿಂಗಳಲ್ಲಿ ಮುಸ್ಲಿಮರು ಉಪವಾಸ ಮಾಡುವ ಸಲುವಾಗಿ ಅನುಕೂಲ ಆಗುವ ರೀತಿಯಲ್ಲಿ ಸರ್ಕಾರಿ ನೌಕರರು, ಶಿಕ್ಷಕರು, ಶಾಲಾ-ಕಾಲೇಜ್ನಲ್ಲಿರುವ ಮುಸ್ಲಿಂ ವಿದ್ಯಾರ್ಥಿಗಳಿಗೆ ಸಂಜೆ ಒಂದು ಗಂಟೆ ಮುಂಚಿತವಾಗಿ ಮನೆಗೆ ತೆರಳಲು ಅವಕಾಶ ನೀಡಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಮುಸ್ಲಿಮರಿಗೆ ಏಪ್ರಿಲ್ 3 ರಿಂದ ಮೇ 4ರ […]

Advertisement

Wordpress Social Share Plugin powered by Ultimatelysocial