ಜಾಕ್ವಲಿನ್ ಫರ್ನಾಂಡೀಸ್ ವಿರುದ್ದ ನೋರಾ ಪತೇಹಿ ಮಾನನಷ್ಟ‌ ಪ್ರಕರಣ.

 

ಬಾಲಿವುಡ್ ನಟಿಯರಿಬ್ಬರ ಹಾದಿ ಬೀದಿ ಜಗಳ‌ ಮಾನನಷ್ಟ ಹಾನಿ ಪ್ರಕರಣದ ತನಕ ಬಂದಿದ್ದು ಜಾಕ್ವಲಿನ್ ಫರ್ನಾಂಡೀಸ್ ವಿರುದ್ದ ‌ನೋರಾ ಪತೇಹಿ ದಾಖಲಿಸಿರುವ ವಿಚಾರಣೆಯನ್ನು ಮಾರ್ಚ್ 25 ರಂದು ಕೈಗೆತ್ತಿಕೊಳ್ಳಲು ದೆಹಲಿ ಕೋರ್ಟ್ ಸಮ್ಮತಿ ಸೂಚಿಸಿದೆ. ವಿವಿಧ ಮಾದ್ಯಮ‌ ಸಂಸ್ಥೆಗಳು ಮತ್ತು ಜಾಕ್ವಲಿನ್ ಫರ್ನಾಂಡೀಸ್ ವಿರುದ್ದ ದೆಹಲಿ ಪಾಟಿಯಾಲ ಹೌಸ್ ನ್ಯಾಯಾಲಯದಲ್ಲಿ ದಾಖಲು ಮಾಡಿರುವ ಪ್ರಕರಣವಮ್ಮು ಮಾರ್ಚ್ . 25 ರಂದು ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.200 ಕೋಟಿ ರೂಪಾಯಿ ಹಗರಣಕ್ಕೆ ಸಂಬಂದಿಸಿದಂತೆ ಕಾಮನ್ ಮ್ಯಾನ್ ಸುಕೇಶ್ ಚಂದ್ರಶೇಖರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನ ನಟಿಯರಿಬ್ಬರನ್ನೂ ಜಾರಿ ನಿರ್ದೇಶನಾಲಯ ಸಿಬಿಐ ಸೇರಿದಂತೆ ಮತ್ತಿತರ ತನಿಖಾ ಸಂಸ್ಥೆಗಳು ಸುದೀರ್ಘ ವಿಚಾರಣೆ ನಡೆಸಿದ್ದವು ಇಬ್ಬರನ್ನೂ ಪ್ರತ್ಯೇವಾಗಿ ವಿಚಾರಣೆ ನಡೆಸಿ, ಕೆಲವು ಸಮಯ ಜೊತೆಯಾಗಿ ಇಬ್ಬರನ್ನು ಮುಖಾಮುಖಿ ಕೂರಿಸಿ ವಿಚಾರಣೆ ನಡೆಸಲಾಗಿತ್ತು.ನಟಿ ಜಾಕ್ವಲಿನ್ ಫರ್ನಾಂಡೀಸ್ ಸಹವಾಸದಿಂದ ಮಾನ ಹಾನಿಯಾಗಿದೆ ಎಂದು ಬಾಲಿವುಡ್ ನಟಿ ನೃತ್ಯ ನಿರ್ದೇಶಕಿ ನೋರಾ ಪತೇಹಿ ಮಾನ ನಷ್ಟ ಮೊಕದಮ್ಮೆ ಹೂಡಿದ್ದಾರೆ.ಪ್ರಕಣದ ವಿಚಾರಣೆ ನಡೆಸಿದ ಮೆಟ್ರೊ ಮ್ಯಾಜಿಸ್ಟೇಟ್ ನ್ಯಾಯಾಲಯ ಪ್ರಕರಣವನ್ನು ದೆಹಲಿ ಪಾಟಿಯಾಲ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.ಕಳೆದ ವರ್ಷ ಡಿಸೆಂಬರ್ 19 ರಂದು ನಟಿ ಜಾಕ್ವಲಿನ್ ವಿರುದ್ದ ನೋರಾ ಮಾನನಷ್ಟ ಪ್ರಕರಣ ದಾಖಲಿಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾರ್ಕಿಂಗ್ ಸ್ಥಳದಲ್ಲೇ ಹೊತ್ತಿ ಉರಿದ ಎಲೆಕ್ಟ್ರಿಕ್ ಕಾರ್.

Sun Jan 22 , 2023
ಹೈದರಾಬಾದ್: ಹೈದರಾಬಾದ್ ನುಮಾಯಿಶ್ ಎಕ್ಸಿಬಿಷನ್‌ ನಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟ್ರಿಕ್ ಕಾರ್ ಗೆ ಶನಿವಾರ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ ಮೂರು ಕಾರ್ ಗಳು ಸುಟ್ಟು ಭಸ್ಮವಾಗಿವೆ. ಎಲೆಕ್ಟ್ರಿಕ್ ಕಾರ್ ನಿಂದ ಉಂಟಾದ ಬೆಂಕಿ ಪಾರ್ಕಿಂಗ್ ಸ್ಥಳದಲ್ಲಿ ಇತರ ಐದು ವಾಹನಗಳಿಗೆ ವ್ಯಾಪಿಸಿತು, ಇದರಲ್ಲಿ ಮೂರು ಕಾರುಗಳು ಸುಟ್ಟು ಭಸ್ಮವಾಗಿದ್ದು, ಎರಡು ಕಾರುಗಳು ಭಾಗಶಃ ಹಾನಿಗೊಳಗಾಗಿವೆ. ಘಟನೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಎಂದು ಇನ್ಸ್‌ ಪೆಕ್ಟರ್ ಬಿ. ಪ್ರಸಾದ ರಾವ್ ಮಾಹಿತಿ ನೀಡಿದ್ದಾರೆ. […]

Advertisement

Wordpress Social Share Plugin powered by Ultimatelysocial