ಯಶಸ್ವಿನಿ ಯೋಜನೆ ನೋಂದಣಿಗೆ ಇಂದೇ ಕೊನೆ ದಿನ: ಅವಧಿ ವಿಸ್ತರಣೆಗೆ ಆಗ್ರಹ..!!

ಯಶಸ್ವಿನಿ ಯೋಜನೆ ನೋಂದಣಿಗೆ ಡಿಸೆಂಬರ್ 31 ಕೊನೆಯ ದಿನವಾಗಿದ್ದು, ಲಕ್ಷಾಂತರ ರೈತರು ಇನ್ನೂ ನೋಂದಣಿ ಮಾಡಿಸಿಕೊಂಡಿಲ್ಲ.ಸಹಕಾರ ಸಂಘಗಳಲ್ಲಿ ಖಾತೆ ಹೊಂದಿದ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಷೇರುದಾರರಾಗಿಲ್ಲದ ಕಾರಣ ದಿನಾಂಕ ವಿಸ್ತರಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.ಗ್ರಾಮಾಂತರ ಪ್ರದೇಶಗಳಲ್ಲಿ ಸ್ತ್ರೀಶಕ್ತಿ ಸಹಕಾರ ಸಂಘಗಳ ಮಹಿಳೆಯರು ಸಂಘದ ಖಾತೆ ಹೊಂದಿದ್ದರೂ ವೈಯಕ್ತಿಕವಾಗಿ ಷೇರುದಾರರಾಗಿಲ್ಲ. ಅಂತಹ ಮಹಿಳೆಯರಿಗೆ ಯಶಸ್ವಿನಿ ಯೋಜನೆಯಡಿ ನೋಂದಾಯಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಇನ್ನೂ ಅನೇಕ ರೈತರು ನೋಂದಣಿ ಮಾಡಿಸಿಕೊಂಡಿಲ್ಲ. ರಾಜ್ಯದಲ್ಲಿ ಸುಮಾರು 45,000 ವಿವಿಧ ರೀತಿಯ ಸಹಕಾರ ಸಂಘಗಳಿದ್ದು 2.30 ಕೋಟಿಗೂ ಅಧಿಕ ಸದಸ್ಯರಿದ್ದಾರೆ. ಇವರಲ್ಲಿ 30 ಲಕ್ಷ ಸದಸ್ಯರನ್ನು ಯಶಸ್ವಿನಿ ಯೋಜನೆಗೆ ನೋಂದಾಯಿಸುವ ಗುರಿ ಹೊಂದಿದ್ದು, ಸುಮಾರು 20 ಲಕ್ಷ ನೋಂದಣಿ ಮಾಡಲಾಗಿದೆ. ಯಶಸ್ವಿನಿ ಯೋಜನೆಗೆ ನೊಂದಣಿ ಮಾಡಿಸಿಕೊಳ್ಳಲು ಸಹಕಾರ ಸಂಘಗಳ ಷೇರುದಾರರಾಗಬೇಕಿದೆ. ಕೊನೆಯ ದಿನ ವಿಸ್ತರಿಸಬೇಕೆಂದು ಒತ್ತಾಯ ಕೇಳಿ ಬಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಾಲೆಯಿಂದ ಮನೆಗೆ ಬರುತ್ತಿದ್ದಂತೆ ಅಮ್ಮನ ಸೀರೆಯಲ್ಲಿ ಜೋಲಿ ಕಟ್ಟಿ ಆಟವಾಡಲು ಹೋದ ಬಾಲಕ ದುರಂತ ಅಂತ್ಯ! ಮಂಡ್ಯದಲ್ಲಿ ಮನಕಲಕುವ ಘಟನೆ

Sat Dec 31 , 2022
ಶಾಲೆ ಮುಗಿಸಿಕೊಂಡು ಮನೆಗೆ ಬಂದ 9 ವರ್ಷದ ಬಾಲಕನೊಬ್ಬ ಸೀರೆಯಲ್ಲಿ ಜೋಲಿ ಕಟ್ಟಿಕಂಡು ಖುಷಿಯಿಂದ ಆಟವಾಡಲು ಹೋಗಿ ದುರಂತ ಅಂತ್ಯಕಂಡ ಘಟನೆ ಕಿಕ್ಕೇರಿ ಸಮೀಪದ ಬೇವಿನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಸಂಭವಿಸಿದೆ.ಬೇವಿನಹಳ್ಳಿ ಕೊಪ್ಪಲು ಗ್ರಾಮದ ಶ್ರೀನಿವಾಸ ಅವರ ಪುತ್ರ ಸಮರ್ಥ್​(9) ಮೃತ ಬಾಲಕ.ಗುರುವಾರ ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಸಮರ್ಥ್ ಬಂದಿದ್ದ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಜೋಕಾಲಿ ಆಟವಾಡಬೇಕು ಅನ್ನಿಸಿ, ಅಮ್ಮನ ಸೀರೆ ತೆಗೆದುಕೊಂಡು ಈತನೇ ಜೋಲಿ ಕಟ್ಟಿದ್ದಾನೆ. […]

Advertisement

Wordpress Social Share Plugin powered by Ultimatelysocial