ಗದಗ:ಹಳ್ಳಿ ಸೊಗಡಿನ ಅಂದ ಹೆಚ್ಚಿಸಿದ ವಿದ್ಯಾರ್ಥಿಗಳು

ಗದಗ:ಕಾಲೇಜು ಅಂಗಳದಲ್ಲಿ ಹಳ್ಳಿ ಸೊಗಡಿನ ಅಂದ ತುಂಬಿಕೊಂಡಿತ್ತು. ಟ್ರ್ಯಾಕ್ಟರ್ ಏರಿ ಹುಡುಗರು ಕಾಲೇಜಿಗೆ ಎಂಟ್ರಿಕೊಟ್ರೆ ಹುಡ್ಗೀರು ಬುತ್ತಿ ಹೊತ್ತು ಬಂದಿದ್ರು.. ಇದ್ರಿಂದಾಗಿ ಅಲ್ಲಿ ಅಪ್ಪಟ ಹಳ್ಳಿ ಸೊಗಡಿನ ಜಾನಪದ ಲೋಕ ಸೃಷ್ಟಿ ಯಾಗಿತ್ತು.

ರಂಗು ರಂಗಿನ ಪೇಟಾ ಧೋತಿ, ಜುಬ್ಬಾ ಹಾಕ್ಕೊಂಡು ಹುಡುಗ್ರು ಮಿಂಚ್ತಿದ್ರೆ.. ಹುಡುಗೀರ್ ನಾವೇನ್ ಕಮ್ಮಿ ಅಂತಾ ಇಳಕಲ್ ಸೀರೆ ಹಾಕ್ಕೊಂಡು ಫುಲ್ ರೆಡಿಯಾದೆ. ಕಾಲೇಜು ಮೈದಾನದಲ್ಲಿ ಫನ್ ವೀಕ್ ಅಂದ್ರೆ ಕೇಳ್ಬೇಕಾ ಹುಡುಗ್ರು ಹುಡುಗೀರು ಸೇರ್ಕೊಂಡು ಫುಲ್ ಎಂಹಾಯ್ ಮಾಡುತ್ತಿರೋ ಗದಗ ನಗರದ ವಾಣಿಜ್ಯ ಹಾಗೂ ಕಲಾ ಕಾಲೇಜನಲ್ಲಿ. ಹೌದು ಕಾಲೇಜು ಸಂಪ್ರದಾಯಿಕ ದಿನಕ್ಕೆ ಸಾಕ್ಷಿಯಾಗಿತ್ತು. ಪಾಠದ ಜಂಜಾಟದಲ್ಲಿ ಕೊಂಚ ರಿಲೀಫ್ ಆಗಿದ್ದ ವಿದ್ಯಾರ್ಥಿಗಳಿಗೆ ಇಂದು ಮನೋರಂಜನೆಯ ಜೊತೆಗೆ ನಮ್ಮ ತನದ ಅರಿವು ಮೂಡಿಸಲು ಕಾಲೇಜು ಅಂಗಳ ಉತ್ತಮ ವೇದಿಕೆಯಾಯಿತು. ಇನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಟ್ರ್ಯಾಕ್ಟರ್ ಏರಿ ಕಾಲೇಜ್ ಗೆ ಎಂಟ್ರಿ ಕೊಟ್ರೆ ಉಪನ್ಯಾಸಕರು ಖುಷಿಯಿಂದ ಸ್ವಾಗತಿಸಿದ್ರು. ಪ್ರತಿಯೊಬ್ಬರು ತಂದ ಖಡಕ್ ರೊಟ್ಟಿ, ಚಪಾತಿ, ಹುರಳಿ ಕಾಳು ಹುಗ್ಗಿ, ಸೋಪ್ಪು, ಸೇರಿ ಬಗೆಬಗೆಯ ಭಕ್ಷ ಭೋಜನ ಕಟ್ಟಿಕೊಂಡು ಬಂದಿದ್ರು. ಎಲ್ಲರೂ ಸೇರಿ ತರತರಹದ ಪರಸ್ಪರರು ಕೈತುತ್ತು ನೀಡುತ್ತ ಊಟ ಸವಿದ್ರು. ಈ ಮೂಲಕ ಗ್ರಾಮೀಣ ಜನರ ಖಾದ್ಯದ ಕಲ್ಪನೆ ಮೂಡಿತು. ತಾವು ಉಟ್ಟ ಉಡುಗೆಯನ್ನು ಓರಿಗೆಯ ಗೆಳತಿಯರೆಲ್ಲ ಸೇರಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ರು. ಹತ್ತು ಹಲವು ಜಾನಪದ ನೃತ್ಯಕ್ಕೆ ವಿದ್ಯಾರ್ಥಿನಿಯರು ಹೆಜ್ಜೆಹಾಕಿ ಸಕತ್ ಎಂಜಾಯ್ ಮಾಡಿದ್ರು. ಪ್ಯಾಟಿ ಹುಡ್ಗಿಯರು ಹಳ್ಳಿ ಉಡುಗೆ ತೊಟ್ಟು ಸೆಲ್ಫಿ ಫೋಟೋ ತೆಗೆದುಕೊಂಡು ಖುಷಿ ಪಟ್ಟಿದ್ದಾರೆ.

ವಿದ್ಯಾರ್ಥಿಗಳ ಜೊತೆಗೆ ಕಾಲೇಜಿನ ಶಿಕ್ಷಕರು ಇಂದು ಪಕ್ಕಾ ಸಾಂಪ್ರದಾಯಿಕ ಉಡುಗೆಯಲ್ಲಿದ್ರು. ಕೇವಲ ಶಿಕ್ಷಕಿಯರಷ್ಟೆ ಅಲ್ಲದೇ ಶಿಕ್ಷಕರು ಧೋತಿ, ರುಮಾಲು, ಜಾಕೇಟ್ ತೊಟ್ಟು ಅಪ್ಪಟ ಹಳ್ಳಿಯವರಂತೆ ಕಂಡ್ರು. ಇಂದು ಬಟ್ಟೆಗಳು ನಮ್ಮತನ ಹಾಗೂ ಸಂಪ್ರದಾಯವನ್ನು ಮರೆಸುತ್ತಿವೆ. ಸಂಸ್ಕೃತಿಯನ್ನು ಪರಿಚಯಿಸುವುದರ ಜೊತೆಗೆ ನಮ್ಮ ಹಳ್ಳಿಸೊಗಡಿನ ಅರಿವು ಯುವಕರಲ್ಲಿ ಮೂಡಿಸಬೇಕಾದ ಅವಶ್ಯಕತೆ ಇದೆ ಅಂತಾರೆ ಶಿಕ್ಷಕರು..

ಬಂಡಿ ಹೊತ್ತ ಬೆಳ್ಳಾನೆ ಎರಡೆತ್ತಿನ ಗತ್ತು ವಿದ್ಯಾರ್ಥಿಗಳಿಗೂ ಆಕರ್ಶಿಸಿದ್ವು. ಅಪ್ಪಟ ಹಳ್ಳಿ ಹುಡುಗಿಯರಾಗಿ ಬಂದ ಕಾಲೇಜು ಕನ್ಯೇಯರ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು. ಪಠ್ಯೇತರ ಚಟುವಟಿಕೆಗಳ ಮೂಲಕ ಇಂಥ ಕಾರ್ಯಕ್ರಮಗಳನ್ನು ಮಾಡಿದ್ದಾದ್ರೆ ಅದೆಷ್ಟೋ ಯುವಕರಿಗೆ ನಮ್ಮ ಅನ್ನದಾತರ ಬಗ್ಗೆ ಅರಿವು ಮೂಡಲು ಸಾಧ್ಯವಾಗುತ್ತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಡೂರು - ಕನ್ನಡ ಮನಸುಗಳು ತಂಡ... ಕರ್ನಾಟಕ ಇವರ ಆಶ್ರಯದಲ್ಲಿ

Mon Jul 18 , 2022
ಕಡೂರು – ಕನ್ನಡ ಮನಸುಗಳು ತಂಡ… ಕರ್ನಾಟಕ ಇವರ ಆಶ್ರಯದಲ್ಲಿ ಸರ್ಕಾರಿ ಶಾಲೆ ಉಳಿಸಿ ಅಭಿಯಾನ ವನ್ನು…. ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ಓದಿದ ಶಾಲೆಯಾದ ಚಿಕ್ಕಮಗಳೂರು ಜಿಲ್ಲಾ ಕಡೂರು ತಾಲೂಕಿನ ಪಂಚನಹಳ್ಳಿ ಸರ್ಕಾರಿ ಶಾಲೆಯನ್ನು ಸಂಚಾರಿ ವಿಜಯ್ ರವರ ಕನಸಿನ ಜೊತೆಗೆ ಶಾಲೆಯ ಎಲ್ಲಾ ಕೊಠಡಿಗಳಿಗೂ ಸುಣ್ಣ ಬಣ್ಣ.. ಮಕ್ಕಳಿಗೆ ಸ್ಕೂಲ್ ಬೈಗ್ ಡೆಸ್ಕ್ ಇನ್ನು ಶಾಲೆಗೆ ಅಗತ್ಯ ವಸ್ತುಗಳನ್ನು.. ಕನ್ನಡ ಮನಸುಗಳು ತಂಡ ಕೊಟ್ಟರು.. […]

Advertisement

Wordpress Social Share Plugin powered by Ultimatelysocial