ಬಾಲಿವುಡ್ ನಟಿ: ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಮಂಗಳಸೂತ್ರ ಧರಿಸಿದಾಗ ಆದ ಅನುಭ;

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಮಂಗಳಸೂತ್ರ ಧರಿಸಿದಾಗ ಆದ ಅನುಭವವನ್ನು ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಒಬ್ಬ ಅದ್ಭುತ ನಟಿ ಮಾತ್ರವಲ್ಲದೇ ಫ್ಯಾಶನ್‌ಗೆ ಬಹಳಷ್ಟು ಒತ್ತು ಕೊಡುವ ಮಾಡರ್ನ್ ಮಹಿಳೆಯೂ ಹೌದು.

ನಟಿ 2018ರಲ್ಲಿ ಅಮೇರಿಕನ್ ಗಾಯಕ ನಿಕ್ ಜೋನಾಸ್ ಅವರನ್ನು ವಿವಾಹವಾಗಿದ್ದು, ಇವರಿಬ್ಬರ ಪ್ರೇಮಮಯ ಜೀವನಕ್ಕೆ ಮೂಕವಿಸ್ಮಿತರಾದವರೇ ಇಲ್ಲ.

ಪ್ರಿಯಾಂಕಾ ಚೋಪ್ರಾ ಇತ್ತೀಚಿನ ಒಂದು ಬ್ರಾಂಡ್ ಶೂಟ್‌ನಲ್ಲಿ ತಮ್ಮ ಮದುವೆಯ ಸಂದರ್ಭದ ಬಗ್ಗೆ ನೆನಪಿಸಿಕೊಂಡಿದ್ದಾರೆ. ಅವರು ಮೊದಲ ಬಾರಿಗೆ ಮಂಗಳ ಸೂತ್ರವನ್ನು ಧರಿಸಿದಾಗ ಏನನ್ನಿಸಿತು ಎಂಬುವುದರ ಬಗ್ಗೆ ತಿಳಿಸಿದ್ದಾರೆ. ನಾನು ಮಂಗಳಸೂತ್ರವನ್ನು ಮೊದಲ ಬಾರಿಗೆ ಧರಿಸಿದ ಸಂದರ್ಭ ನನಗಿನ್ನೂ ನೆನಪಿದೆ. ಏಕೆಂದರೆ ಮಂಗಳಸೂತ್ರದ ಅರ್ಥ ಏನು ಎಂಬುದರ ಬಗ್ಗೆ ಕಲ್ಪನೆ ಮಾಡಿಕೊಂಡೇ ಬೆಳೆದಿದ್ದೇನೆ. ಆ ಕ್ಷಣ ನನಗೆ ಬಹಳ ವಿಶೇಷವಾಗಿತ್ತು.

ಅದೇ ಸಂದರ್ಭದಲ್ಲಿ ನಾನೊಬ್ಬ ಆಧುನಿಕ ಮಹಿಳೆಯಾಗಿ ಇದರ ಅರ್ಥದ ಪರಿಣಾಮ ಏನು ಎಂಬುದರ ಬಗ್ಗೆ ನನಗೂ ಅರಿವಿತ್ತು ಎಂದರು. ನಾನು ಮಂಗಳಸೂತ್ರ ಧರಿಸಲು ಇಷ್ಟಪಡುತ್ತೇನೋ ಅಥವಾ ಪಿತೃಪ್ರಧಾನಕ್ಕೆ ಒಳಗಾಗುತ್ತೇನೋ? ಆದರೆ ಅದೇ ಸಂದರ್ಭದಲ್ಲಿ ನನಗನ್ನಿಸಿದ್ದು ನಾನು ಇವೆರಡೂ ತಲೆಮಾರಿನ ಮಧ್ಯದಲ್ಲಿರುತ್ತೇನೆ ಎಂದು. ಸಂಪ್ರದಾಯವನ್ನು ಕಾಪಾಡಿಕೊಳ್ಳಬೇಕು. ಆದರೆ ನೀವು ಯಾರು ಹಾಗೂ ಯಾವ ಕಾರಣಕ್ಕೆ ಇಲ್ಲಿ ನಿಂತಿರುವಿರಿ ಎಂಬುದನ್ನೂ ತಿಳಿದುಕೊಳ್ಳಬೇಕು. ಮುಂದಿನ ಪೀಳಿಗೆಯ ಹುಡುಗಿಯರು ಭಿನ್ನವಾಗುವುದನ್ನು ನಾವು ನೋಡುತ್ತೇವೆ ಎಂದು ಪ್ರಿಯಾಂಕಾ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

SANDALWOOD SWEETY:ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್ ವಿಡಿಯೋ ವೈರಲ್;

Fri Jan 21 , 2022
ಬೆಂಗಳೂರು: ಸ್ಯಾಂಡಲ್ ವುಡ್ ‘ಸ್ವೀಟಿ’ ಎಂದೇ ಖ್ಯಾತರಾದ ರಾಧಿಕಾ ಕುಮಾರಸ್ವಾಮಿ ಅವರ ಡ್ಯಾನ್ಸ್ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಹಿಂದಿ ಹಾಡೊಂದಕ್ಕೆ ಮಸ್ತು ಸ್ಟೆಪ್ ಹಾಕಿದ್ದಾರೆ. ಹಿಂದಿಯ ‘ಮೇರಾ ಯಾರಾದ ಕವರ್’ ಸಾಂಗ್ ಗೆ ರಾಧಿಕಾ ಕುಮಾರಸ್ವಾಮಿ ಹೆಜ್ಜೆ ಹಾಕಿದ್ದಾರೆ.ಅವರ ಈ ಇನ್ಸ್ಟಗ್ರಾಮ್ ರೀಲ್ ಸದ್ಯ ವೈರಲ್ ಆಗಿದ್ದು, ಅಭಿಮಾನಿಗಳು ಪಿಧಾ ಆಗಿದ್ದಾರೆ. ಕಪ್ಪು ಬಣ್ಣದ ಗೌನ್ ತೊಟ್ಟು ಹರೆಯದ ಹುಡುಗಿಯರು ಕೂಡಾ ನಾಚುವಂತೆ ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್ […]

Advertisement

Wordpress Social Share Plugin powered by Ultimatelysocial