1200 ಕಿ.ಮಿ ಸೈಕಲ್ ತುಳಿದ ಯುವತಿಗೆ ಬಿಗ್ ಆಫರ್

ಪಾಟ್ನಾ: ಕೊರೊನಾ ವೈರಸ್‌ ಲಾಕ್‌ಡೌನ್‌ ನಡುವೆ ಅಪ್ಪನನ್ನು ಕೂರಿಸಿಕೊಂಡು ಸುಮಾರು 1200 ಕಿ.ಮೀ ಸೈಕಲ್ ತುಳಿದಿರುವ ಯುವತಿಗೆ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಆಫರ್ ನೀಡಿದೆ. ಯುವತಿಯ ಸಾಹಸ ಗಮನಿಸಿದ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಟ್ರಯಲ್ಸ್ ಗೆ ಬರುವಂತೆ ಸೂಚನೆ ನೀಡಿದೆ.

ಈ ಬಗ್ಗೆ ಸಂತಸ ಹಂಚಿಕೊಂಡಿರುವ ಜ್ಯೋತಿ ”ಇದು ನಿಜಕ್ಕೂ ಖುಷಿ ಕೊಟ್ಟಿದೆ, ಮುಂದಿನ ತಿಂಗಳು ದೆಹಲಿಯಲ್ಲಿ ಟ್ರಯಲ್ಸ್ ಗೆ ಭಾಗಿಯಾಗಲಿದ್ದೇನೆ” ಎಂದು ಪಿಟಿಐಗೆ ತಿಳಿಸಿದ್ದಾರೆ. ಒಂದು ವೇಳೆ ಜ್ಯೋತಿ ಸೈಕ್ಲಿಂಗ್ ಟ್ರಯಲ್ಸ್ ಪಾಸ್ ಮಾಡಿದರೆ, ದೆಹಲಿಯ ಇಂದಿರಾ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿರುವ ‘ಸ್ಟೇಟ್ ಆಫ್‌ ದ ಆರ್ಟ್ ನ್ಯಾಷನಲ್’ ಸೈಕ್ಲಿಂಗ್ ಅಕಾಡೆಮಿಯಲ್ಲಿ ಅಭ್ಯಾಸಕ್ಕೆ ಆಯ್ಕೆಯಾಗಲಿದ್ದಾಳೆ ಎಂದು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಮುಖ್ಯಸ್ಥಓಂಕಾರ್ ಸಿಂಗ್ ತಿಳಿಸಿದ್ದಾರೆ.

ಏಳು ದಿನಗಳ ವರೆಗೆ ಬೈಸಿಕಲ್ ಮೇಲೆ ಪ್ರಯಾಣ ಮಾಡಿದ್ದ ಜ್ಯೋತಿಕುಮಾರಿಯ ಸಾಹಸ, ಧೈರ್ಯ, ತಂದೆ ಮೇಲಿನ ಪ್ರೀತಿ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದನ್ನು ಗಮನಿಸಿರುವ ಅಮೇರಿಕಾ ಅಧ್ಯಕ್ಷ ಡೋನಾಲ್ಟ್ ಟ್ರಂಪ್ ಪುತ್ರಿ ಇವಾಂಕ ಟ್ವೀಟ್ ಮಾಡಿದ್ದಾರೆ. ಬಿಹಾರ ಮೂಲದ ಜ್ಯೋತಿ, ತಂದೆಯ ಜೊತೆ ದೆಹಲಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದರು. ಲಾಕ್‌ಡೌನ್ ಆದ ಬಳಿಕ ಜೀವನ ಸಾಗಿಸುವುದು ತೀರಾ ಕಷ್ಟವಾಗಿದೆ. ಜ್ಯೋತಿ ತಂದೆಗೆ ಕಾಲಿಗೆ ಗಾಯವಾಗಿದ್ದು, ನಡೆಯಲು ಕಷ್ಟವಾಗಿತ್ತು. ಹಾಗಾಗಿ, ಸ್ವಗ್ರಾಮಕ್ಕೆ ಹೋಗಲು ನಿರ್ಧರಿಸಿ ಸೈಕಲ್ ಪಡೆದು, ರಾತ್ರಿ-ಹಗಲು ಪ್ರಯಾಣ ಮಾಡಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಒಂದೇ ಅವಧಿಯಲ್ಲಿ ಎರಡು ಪದವಿಗೆ ಅವಕಾಶ

Sat May 23 , 2020
ವಿದ್ಯರ‍್ಥಿಗಳಿಗೆ ಒಂದೇ ಶೈಕ್ಷಣಿಕ ಅವಧಿಯಲ್ಲಿ ಎರಡು ಡಿಗ್ರಿಗಳನ್ನು ಪೂರೈಸುವ ಅವಕಾಶ ಕಲ್ಪಿಸುವ ಪ್ರಸ್ತಾವನೆಗೆ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ  ಒಪ್ಪಿಗೆ ನೀಡಿದೆ. ಯುಜಿಸಿಯ ಉಪ ನರ‍್ದೇಶಕ ಭೂಷಣ್‌ ಪಟರ‍್ಧನ್‌ ಮಾತನಾಡಿ, “ಸರ‍್ವಜನಿಕರಿಂದ, ವಿದ್ಯರ‍್ಥಿಗಳಿಂದ ಅಭಿಪ್ರಾಯಗಳನ್ನು ಪಡೆದ ನಂತರ ಈ ನರ‍್ಧಾರ ಕೈಗೊಳ್ಳಲಾಗಿದ್ದು, ಎರಡು ಪದವಿಗಳನ್ನು ಪೂರೈಸಿದರೆ ಉದ್ಯೋಗಾವಕಾಶಗಳೂ ಹೆಚ್ಚಾಗುತ್ತವೆ ಎಂಬ ಉದ್ದೇಶದಿಂದ ಸ್ನಾತಕ, ಸ್ನಾತಕೋತ್ತರ ಪದವಿಗಳ ಇಂಟಿಗ್ರೇಟೆಡ್‌ ಕರ‍್ಸ್‌ಗಳನ್ನು ನಡೆಸಲು ಯುಜಿಸಿ ಅನುಮತಿ ನೀಡಿದೆ. Please follow and like us:

Advertisement

Wordpress Social Share Plugin powered by Ultimatelysocial