ಬಿಡುಗಡೆಯಾಯ್ತು ಹಾರುವ ಬೈಕ್‌- 2 ಗಂಟೆ ಚಾರ್ಜ್‌ ಮಾಡಿದ್ರೆ 20 ನಿಮಿಷ ಹಾರಾಟ!

ಕಷ್ಟವಾಗಿರುವ ಈ ಕಾಲದಲ್ಲಿ ಆಕಾಶದಿಂದ ಹಾರಿ ಹೋಗುವ ಹಾಗಿದ್ದರೆ ಎಷ್ಟು ಚೆನ್ನ ಎಂದು ಅಂದುಕೊಳ್ಳುವವರೇ ಎಲ್ಲಾ. ಇದೀಗ ಅಂಥವರ ಕನಸು ನನಸಾಗಿದೆ. ಏಕೆಂದರೆ ಹಾರುವ ಬೈಕ್‌ ರೆಡಿಯಾಗಿದೆ.ಇಲ್ಲಿಯವರೆಗೆ ಹಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಲ್ಪನಿಕ ಬೈಕ್‌ ನಿಜವಾಗಿಯೂ ವಾಸ್ತವಕ್ಕೆ ಬಂದಿದೆ. ಜೇಮ್ಸ್ ಬಾಂಡ್ ಸ್ಟೈಲಿನಲ್ಲಿ ಬೈಕ್ ಮೇಲೆ ಹತ್ತಿ ಹಾರಾಟ ಮಾಡಬಲ್ಲ ಕನಸು ನನಸಾಗಿದೆ.ಅಂಥದ್ದೊಂದು ಬೈಕ್‌ ಅಮೆರಿಕದಲ್ಲಿ ತಯಾರಿಸಲಾಗಿದೆ. ಇದರ ಹೆಸರು ಜೆಟ್ಸನ್ ಒನ್. ಇಂಥದ್ದೊಂದು ಬೈಕ್‌ ವಿನ್ಯಾಸಗೊಳಿಸಿದವರು ಸ್ವೀಡಿಷ್-ಪೋಲಿಷ್ ಕಂಪನಿ ಜೆಟ್ಸನ್. ಸದ್ಯ ಇದು ವಿಶ್ವದ ಮೊದಲ ಹಾರುವ ಬೈಕ್‌ ಎಂದು ಪ್ರಸಿದ್ಧಿ ಪಡೆದಿದೆ. ಖಾಸಗಿ ಬಳಕೆ ಮಾತ್ರವಲ್ಲದೇ ಇದನ್ನು ವಾಣಿಜ್ಯ ಬಳಕೆಗೂ ಬಳಸಲು ಅನುಕೂಲ ಆಗುವಂತೆ ರಚನೆ ಮಾಡಲಾಗಿದೆ.ಕಳೆದ ಅಕ್ಟೋಬರ್‌ನಲ್ಲಿಯೇ ಈ ಬೈಕ್‌ ಬಿಡುಗಡೆಯಾಗಿತ್ತು. ಇದೀಗ ಪೂರ್ಣಪ್ರಮಾಣದಲ್ಲಿ ಹಾರಾಟ ನಡೆಸುತ್ತಿದೆ. ಎರಡು ಗಂಟೆಗಳ ಬ್ಯಾಟರಿ ಚಾರ್ಜಿಂಗ್ ಸಮಯದೊಂದಿಗೆ 20 ನಿಮಿಷಗಳವರೆಗೆ ಹಾರುವ ಸಾಮರ್ಥ್ಯವನ್ನು ಇದು ಹೊಂದಿದೆ. ಇದಾಗಲೇ ಮಾರುಕಟ್ಟೆಗೂ ಬಿಡುಗಡೆಯಾಗಿದ್ದು. ಮುಂದಿನ ವರ್ಷದ ಆದೇಶಗಳನ್ನು ಈಗಾಗಲೇ ತೆಗೆದುಕೊಳ್ಳಲಾಗುತ್ತಿದೆ ಎಂದು ಕಂಪನಿ ಹೇಳಿದೆ.ಬೈಕ್‌ ತೂಕ 86 ಕೆಜಿ ಇದೆ. ಇದು ಸಂಪೂರ್ಣ ಇಲೆಕ್ಟ್ರಿಕ್ ಚಾಲಿತವಾಗಿದೆ. ಪೈಲಟ್ ಪರವಾನಗಿಯ ಅಗತ್ಯವೂ ಇಲ್ಲ, 63 mph (ಅಂದಾಜು 101 kmh) ವೇಗದಲ್ಲಿ ಹಾರಬಲ್ಲದು. ಇದರ ಟೇಕ್ ಆಫ್ ಮಾಡಲು ಯಾವುದೇ ರನ್ ವೇ ಅಗತ್ಯವಿಲ್ಲ ಮತ್ತು ಎಲ್ಲಿ ಬೇಕಾದರೂ ಸುಲಭವಾಗಿ ಲ್ಯಾಂಡ್ ಮಾಡಬಹುದು ಎಂದು ಕಂಪನಿ ಹೇಳಿದೆ. ಇದನ್ನು ಜಾಯ್‌ಸ್ಟಿಕ್‌ನಿಂದ ನಿಯಂತ್ರಿಸಲಾಗುತ್ತದೆ. ಆದರೆ ನಗರಗಳಲ್ಲಿ ಹಾರಲು ಇನ್ನೂ ಅನುಮತಿ ನೀಡಿಲ್ಲ. ಇದನ್ನು ತೆರೆದ ಪ್ರದೇಶದಲ್ಲಿ ಮಾತ್ರ ಹಾರಿಸಬಹುದು. 2026 ರ ವೇಳೆಗೆ ಎರಡು ಆಸನಗಳ ಹಾರುವ ಕಾರನ್ನು ತಯಾರಿಸುವುದು ನಮ್ಮ ಮುಂದಿನ ಯೋಜನೆಯಾಗಿದೆ ಎಂದು ಕಂಪನಿ ಹೇಳಿದೆ.ಅಂದಹಾಗೆ ಇದರ ಬೆಲೆ 68 ಸಾವಿರ ಪೌಂಡ್‌ಗಳು, ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 68.84 ಲಕ್ಷ ರೂಪಾಯಿಗಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್ ವಿವಾದದ ಕುರಿತು ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

Wed Feb 9 , 2022
ಹಿಜಾಬ್ ವಿವಾದದ ಕುರಿತು ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ಇಂದು ಕೈಗೆತ್ತಿಗೊಂಡ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಾಳೆಗೆ ಮುಂದೂಡಿಕೆ ಮಾಡಿದರು. ಮಧ್ಯಾಹ್ನದ ಉಪಹಾರದ ನಂತರ ವಿಚಾರಣೆ ನಡೆಸಿದ ನ್ಯಾಯಾಪೀಠ, ಅರ್ಜಿಗೆ ಸಂಬಂಧಪಟ್ಟಂತೆ ವಾದ ವಿವಾದವನ್ನು ನ್ಯಾಯಾಪೀಠ ಅಲಿಸಿ, .ನಾಳೆ ಮಧ್ಯಾಹ್ನ 2:30ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದರು.   ಅರ್ಜಿದಾರರ ಪರವಾಗಿ ದೇವದತ್‌ ಹಿರಿಯ ವಕೀಲ ದೇವದತ್ ಕಾಮತ್ ವಾದ ಮಂಡನೆ ಮಾಡಿದರೆ, […]

Advertisement

Wordpress Social Share Plugin powered by Ultimatelysocial