ಸತ್ಯನಾ .? ಶಿವನಾ.? ಕೋಟಿಗೊಬ್ಬ 3 ಕಹಾನಿ

ಸುದ್ದಿ ಮೇಲೆ ಸುದ್ದಿಮಾಡ್ತಿರೋ ಈ ಸಿನಿಮಾ ನೋಡಿ ನೀವ್‌ ಆಗ್ತಿರಾ ಹೈರಾಣ . ಆ ಒಂದು ಟ್ರೇಲರ್‌ ಬಿಡುಗಡೆಗೆ ಅಭಿಮಾನಿಗಳು ಬಕಪ್ಷಿಯಂತೆ ಕಾಯುತಿದ್ರು.ಅಂತು ಬಿಡುಗಡೆ ಆಯ್ತು ನೋಡಿ ಕೋಟಿಗೊಬ್ಬ 3 ಟ್ರೇಲರ್‌ . ಅಬ್ಬಬಾ ರಿವೀವ್ಸ್‌ ಬಂದಿದೆ ಬಂದಿದ್ದು , ಸದ್ದು ಮಾಡಿ ಹಂಗಾಮ ಆಗಿದ್ದೆ ಆಗಿದು . “ ಚಿನ್ನ ಲೈಫ್‌ ಅಲ್ಲಿ ಎರಡ್‌ ಪಾಠ ಕಲ್ತಿದ್ದೀನಿ  ಒಂದು ಒವರ್‌ ಆಗಿ ಮಾತಾಡ್ಬಾರ್ದು ಎರಡನೇಯದ್ದು ಒವರ್‌ ಆಗಿ ಮಾತಾಡೊದನ್ನ ಕೇಳುಸ್ಕೊಳ್ಳುಬಾರ್ದು. ಹಾಗೇ ಸಿನಿಮಾ ನೋಡೊಕು ಮುನ್ನ ಓವರ್‌ ನಿರೀಕ್ಷೆ ಇಟ್ಟುಕೊಳ್ಳಲುಬಾರ್ದು . ಸ್ವಾಗ್‌ ಡೈಲಾಗ್‌ ಮೂಲಕ ಬ್ಯಾಂಗ್‌ ಎಂಟ್ರಿ ನೀಡಿರುವ badsha ಸ್ಟೈಲ್‌ ಅಲ್ಲೇ ಸೈಕ್‌ ಹಿಡಿಸುತ್ತಿದ್ದಾರೆ .ಎನ್‌ ರೀ ಆ raw ಎಂಟ್ರಿ ,ಮಾಸ್‌ ಗೆ ಮಾಸ್‌ ಟಚ್‌ ಕೊಟ್ಟು ಟಚ್‌ ಮಾಡೋರನ್ನ ಪಂಚ್‌ ನಿಂದ ವಾಂಚೋ ಆ ಸೀನ್ಸ್‌ ಎಲ್ಲವೂ ಕಮಾಲ್‌.

ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು ಸೂರಪ್ಪ ಬಾಬು ನಿರ್ಮಿಸಿರುವ ಈ ಚಿತ್ರ ಜಬರ್ದಸ್‌ ಆಗಿ  ಮೂಡಿ ಬಂದಿದೆ ವಿದೇಶದಲ್ಲಿ ಶೂಟ್‌ ಮಾಡಿರುವ ಕಾರಣ ತೆರೆ ಮೇಲೆ ನೋಡೊಕೆ ಬಿನ್ನವಾಗಿ ಕಾಣುತ್ತೆ. ದುಬಾರಿ ಸೆಟ್‌, ಕಣ್‌ ಕುಕ್ಕುವ  ಲೊಕೇಶನ್‌, ಐಶಾರಾಮಿ ಕಾರುಗಳು, ಬಾಲಿವುಡ್ ನಟ-ನಟಿಯರು, ವಿದೇಶಿ ನೆಲದಲ್ಲಿ ನಡೆವ ಕಾರ್ ಚೇಸಿಂಗ್, ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿಯೇ ಹಣ ಸುರಿಯಾಗಿದೆ ಎಂಬುದನ್ನು ಸಾರಿ ಹೇಳುತ್ತಿವೆ.

ಎಸ್‌ ಚಿತ್ರದಲ್ಲಿ ಮಲಯಾಳಂ ನಟಿ ಮಡೋನಾ ಸೆಬಾಸ್ಟಿಯನ್‌ ನಗು ಹಾಗೂ  ಶ್ರದ್ಧಾ ದಾಸ್‌ ಗ್ಲಾಮರಸ್‌ ಮೈಮಾಟದ ಝಲಕ್ ಪಡೆ ಹೈಕಲ ಬುರುಡೆ ಕೆಡಿಸಿದೆ. ಸದ್ಯ ಮೆದುಳಿಗೆ ಕೈ ಹಾಕಿದ ಈ ಬೆಡಗಿರ ನಡುವೆ ತಂಡ ತಂಡ ಕೂಲ್‌ ಮಾಡಲು ರಂಗಾಯಣ ರಘು, ತಬಲಾ ನಾಣಿ ನಗೆ ಟಾನಿಕ್‌ ನೊಂದಿಗೆ ತೆರೆ ಮೇಲೆ ಅಪ್ಪಳಿಸಲಿದ್ದಾರೆ. ಇನ್ನು ಕಣಲ್ಲೇ ಕೊಲ್ಲೋ ಕಿಚ್ಚನಿಗೆ ಮಚ್ಚಿನಿಂದ  ಬೀಸಲು ದಿ ವಿಲನ್‌ ‌ ನವಾಬ್ ಶಾ ಗಜಬ್‌ ಎಂಟ್ರಿ ಕೊಟಿದ್ದಾರೆ. ಇದಾಗಲೇ ರವಿಶಂಕರ್‌ ಕೋಟಿಗೊಬ್ಬ 2 ನಲ್ಲಿ ತಮ್ಮ ಜಲಕ್‌ ತೊರಿಸಿದ್ದು ಕೋಟಿಗೊಬ್ಬ3ನಲ್ಲಿ ಏನ್‌ ಕಮಾಲ್‌ ಮಾಡಲಿದ್ದಾರೆ ನೋಡಬೇಕಿದೆ. ಕೋಟಿಗೊಬ್ಬ 3 BGM, ಎಪೇಕ್ಷ್‌, ಹಾಗೂ ಅರ್ಜುನ್‌ ಜನ್ಯ ಮೂಸಿಕ್‌ ಸ್ಕೋರ್‌ ಚಿಂದಿ ಸ್ಕೋರ್‌ ಹೊಡೆದಿದೆ.

ಕನ್ನಡದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ ಪಟಾಕಿ ಪೋರಿಯೋ ಹಾಡಿಗೆ ನಾಟಿ ಪೋರಿ ಸ್ಟೇಪ್ಸ್‌ ಹಾಕಿ  ಬಾಡಿ ಹೀಟ್‌ ಮಾಡಿದ್ದಾರೆ. ಸುದೀಪ್ ದ್ವಿಪಾತ್ರದಲ್ಲಿ ಅಥವಾ ಒಬ್ಬನೇ ಎರಡು ವ್ಯಕ್ತಿಗಳಾಗಿ ಕಾಣಿಸಿಕೊಂಡಿದ್ದಾರೆ ಎಂಬುದು ಟ್ರೇಲರ್‌ನಿಂದ ಖಾತ್ರಿಯಾಗುತ್ತಿದೆ. ‘ಕೋಟಿಗೊಬ್ಬ 2’ ಸಿನಿಮಾದಲ್ಲಿಯೂ ಇಂಥಹುದೇ ಕತೆ ಇತ್ತು. ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಅಂತರಾಷ್ಟ್ರೀಯ ಪೊಲೀಸರಿಗೆ ಬೇಕಾದ ವಿಲನ್ ಆಗಿ ಹಾಗೂ ಠಪೋರಿ ಯುವಕನಾಗಿ ಎರಡು ಶೇಡ್‌ನಲ್ಲಿ ಸುದೀಪ್ ನಟಿಸಿದ್ದು. ಇಬ್ಬರೂ ಒಬ್ಬರೇನಾ ಅಥವಾ ಸುದೀಪ್ ದ್ವಿಪಾತ್ರದಲ್ಲಿ ನಟಿಸಿದ್ದಾರಾ? ಎಂಬುದರ ಜೊತೆಗೆ ಸಿನಿಮಾದ ಮನರಂಜನೆಯನ್ನು ಆಸ್ವಾದಿಸಲು ಅಕ್ಟೋಬರ್ 14  ಚಿತ್ರಮಂದಿರಗಳಿಗೆ ತೆರಳಬೇಕಾಗುತ್ತದೆ.

ಅದೇ ದಿನ ಸಲಗ ನಡೆದಿದೇ ದಾರಿ ಎಂದು ಕೋಟಿಗೊಬ್ಬನಿಗೆ ಟಾಂಗ್‌ ಕೊಡಲು ಎರಡು ಚಿತ್ರಗಳು ರನ್ನಿಂಗ್‌ ರೇಸ್ಗೆ ಸಜ್ಜಾದಂಗೆ ರಗಡ್‌ ಆಗಿ ಸಜ್ಜಾಗಿವೆ.  ಇಷ್ಟೆಲ್ಲಾ twist ಅಂಡ್‌ turn ಇರೋ ಆ ದಿನ ಬಹಳ ವಿಶೇಷ ಅದೇ ದಸರ ಹಬ್ಬ . ಯಾವ ಚಿತ್ರ ಪಟಾಕಿ ಹೊಡೆದು ಬಾಕ್ಸ್‌ ಆಫೀಸ್‌ ಧೂಳ್‌ ಏಬ್ಬಿಸಿ ದಮ್‌  ಬಿರಿಯಾನಿ ಮಾಡುತ್ತೋ ಅಥವಾ ಖಾಲಿ ಪುಲವ್‌ ಮಾಡುತ್ತೋ ಸದ್ಯ ಬುರುಡೆ ಬಿಸಿ ಮಾಡಿಕೊಳ್ಳದೇ ಚಾ…. ಕುಡಿದು ರಿಲ್ಯಾಕ್ಸ್‌ ಮಾಡಿ . ಇನ್ನು ಟ್ರೇಲರ್‌ ಬಿಡುಗಡೆಯಾಗಿ ಕೆಲವೇ ತಾಸಿಗೆ ಮಿಲಿಯನ್‌ ಗಟ್ಟಲೇ ವೀವ್ಸ್‌ ಪಡೆದಿದ್ದು ,ಕೋಟಿಗೊಬ್ಬ 3 ಚಿತ್ರದ ಅಡ್ವಾನ್ಸ್‌ ಟಿಕೇಟ್‌ ಬುಕಿಂಗ್‌ 11 ಮತ್ತು 12 ಶುರುವಾಗುತ್ತೆ. ಮತ್ತೆ ಯಾಕೆ ತಡ hurry up .

 

 

 

 

 

Please follow and like us:

Leave a Reply

Your email address will not be published. Required fields are marked *

Next Post

The huge benefits and Disadvantages of International Online dating

Sat Oct 9 , 2021
International internet dating sounds tough, but it hasn’t got to be. It can be while flexible or if you other dating tastes. It means that you have been willing to get your take pleasure in abroad. However , you’ll need to decide if you want to commit to a long-distance […]

Advertisement

Wordpress Social Share Plugin powered by Ultimatelysocial