19ನೇ ಮಹಡಿಯಿಂದ ಹಾರಿ ಮಹಿಳೆ ಆತ್ಮಹತ್ಯೆ

 

ಇತ್ತೀಚೆಗಷ್ಟೇ ಶಾಲಾ ಬಾಲಕನೋರ್ವ ಅಪಾರ್ಟ್​​ಮೆಂಟ್​ನಿಂದ  ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಬೆಂಗಳೂರಿನ   ಜನರನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಇಂತದ್ದೇ ಘಟನೆ ನಗರದಲ್ಲಿ ಮರುಕಳಿಸಿದ್ದು, ಅಪಾರ್ಟ್ಮೆಂಟ್​ನ 19ನೇ ಮಹಡಿಯಿಂದ ಬಿದ್ದು ಮಹಿಳೆಯೊಬ್ಬರು  ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ತಲಘಟ್ಟಪುರದಲ್ಲಿ ನಡೆದಿದೆ.
40 ವರ್ಷದ ಕರಿಷ್ಮಾ ಆತ್ಮಹತ್ಯೆಗೆ ಶರಣಾದ ಮಹಿಳೆ ಎಂದು ಗುರುತಿಸಲಾಗಿದೆ. ಮೃತ ಮಹಿಳೆ ಕಳೆದ ಕೆಲ ದಿನಗಳಿಂದ ಮಾನಸಿಕ ಖಿನ್ನತೆಗೆ  ಒಳಗಾಗಿದ್ದರಂತೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಅಂದಹಾಗೇ, ಕಳೆದ 15 ವರ್ಷಗಳಿಂದ‌ ಕೆನಾಡದಲ್ಲಿ ವಾಸವಾಗಿದ್ದ ಕರಿಷ್ಮಾ ಮತ್ತು ಕರಣ್ ದಂಪತಿಗಳು ಕೆಲ ಸಮಯದ ಹಿಂದೆ ಭಾರತಕ್ಕೆ ವಾಪಸ್​ ಆಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಕರಿಷ್ಮಾ, ಕೆಲ ದಿನಗಳಿಂದ ಡಿಪ್ರೆಶನ್ ನಲ್ಲಿದ್ದರಂತೆ. ಇದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳಲು ವಿದೇಶದಿಂದ ವಾಪಸ್ ಆಗಿದ್ದರಂತೆ. ನಟಿ ತುನಿಷಾ ಶರ್ಮಾ ಆತ್ಮಹತ್ಯೆ, ಸಹನಟ ಶೀಝಾನ್ ಖಾನ್ ಅರೆಸ್ಟ್
ಕೆನಡಾದ ಪ್ರತಿಷ್ಠಿತ ಕಂಪನಿಯೊಂದರಲ್ಲಿ‌ ಕೆಲಸ ಮಾಡ್ತಿದ್ದ ದಂಪತಿ, ಖುಷಿ ಖುಷಿಯಾಗೇ ಲೈಪ್ ಲೀಡ್ ಮಾಡುತ್ತಿದ್ದರು. ಹೀಗಿದ್ದ ಕುಟುಂಬದಲ್ಲಿ ಕರಿಷ್ಮಾ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ.
ಇದರಿಂದ ಕೆನಡಾದಿಂದ ಬೆಂಗಳೂರಿಗೆ ವಾಪಸ್ ಬಂದು ತಲಘಟ್ಟಪುರದ ಅಪಾರ್ಟ್ಮೆಂಟ್ ನಲ್ಲಿ ವಾಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

Please follow and like us:

Leave a Reply

Your email address will not be published. Required fields are marked *

Next Post

ರೇವಣ್ಣ ಗೆಲುವಿನ ಹೊಳೆಗಿಲ್ಲ ಅಡೆತಡೆ

Mon Dec 26 , 2022
      ಪ್ರಪ್ರಥಮ ಕನ್ನಡಿಗ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜಕೀಯ ಪಟ್ಟುಗಳನ್ನು ಕಲಿತು ಬೆಳೆದ, ಪ್ರಸ್ತುತ ಅವರ ಪುತ್ರ ಎಚ್.ಡಿ. ರೇವಣ್ಣ ಅವರ ಅಭೇದ್ಯ ಕೋಟೆಯಂತಾಗಿರುವ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಕಣಗಳಲ್ಲಿ ಒಂದು.1957ರಿಂದ ಇದುವರೆಗೂ ನಡೆದಿರುವ 14 ಸಾರ್ವತ್ರಿಕ ಚುನಾವಣೆಗಳಲ್ಲಿ ಒಮ್ಮೆ ವೈ.ವೀರಭದ್ರಪ್ಪ, ಆರು ಬಾರಿ ಎಚ್.ಡಿ. ದೇವೇಗೌಡ, ತಲಾ ಒಂದು ಬಾರಿ ಜಿ.ಪುಟ್ಟಸ್ವಾಮಿಗೌಡ ಮತ್ತು ಎ. ದೊಡ್ಡೇಗೌಡ ಹಾಗೂ ಐದು ಬಾರಿ ಎಚ್.ಡಿ. ರೇವಣ್ಣ ಕ್ಷೇತ್ರವನ್ನು […]

Advertisement

Wordpress Social Share Plugin powered by Ultimatelysocial