21 ದಿನಗಳಿಂದ ಸತತವಾಗಿ ಪೆಟ್ರೋಲ್ ಬೆಲೆ ಏರಿಕೆ

ಕಳೆದ 21 ದಿನಗಳಿಂದ ಸತತವಾಗಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇದೀಗ ಬೆಲೆ ಏರಿಕೆಯನ್ನು ಖಂಡಿಸಿರುವ NSUI ಇಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಬಳಿ ಶವದಂತೆ ಬೈಕ್ ಹೊತ್ತು ಮೆರವಣಿಗೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆಯನ್ನು ದಾಖಲಿಸಿದೆ. ಹಾಗೆಯೇ NSUI ರಾಜ್ಯಾಧ್ಯಕ್ಷ ಮಂಜುನಾಥ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಯಲ್ಲಿ ಬೈಕ್ ಗೆ ಶವದಂತೆ ಸಂಸ್ಕಾರ ಮಾಡಿ ಕೊನೆಗೆ ಬೆಂಕಿ ಹಚ್ಚಿ ಬೈಕನ್ನು ಸುಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಲಾಗಿದೆ. ನಂತರ ಮಾತನಾಡಿದ ಮಂಜುನಾಥ್ ಮೊದಲೇ ಕೊರೋನಾ ದಿಂದ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ಏರಿಕೆ ಮಾಡುವ ಮೂಲಕ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಗುರಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಸತತವಾಗಿ ಏರಿಕೆ ಕಂಡ ತೈಲ

Sat Jun 27 , 2020
ಸತತ 21ನೇ ದಿನವೂ ತೈಲ ಬೆಲೆ ಏರಿಕೆ ಕಂಡಿದ್ದು, ಪ್ರತೀ ಲೀಟರ್  ಪೆಟ್ರೋಲ್ ಬೆಲೆಯಲ್ಲಿ 0.25 ಪೈಸೆ ಹಾಗೂ ಪ್ರತೀ ಲೀಟರ್ ಡೀಸೆಲ್ ದರದಲ್ಲಿ 0.21 ಪೈಸೆಯಷ್ಟು ಏರಿಕೆಯಾಗಿದೆ. ಕಳೆದ ಮೂರು ವಾರಗಳಲ್ಲಿ ಡೀಸೆಲ್ ಪ್ರತೀ ಲೀಟರ್ ಮೇಲೆ ರೂ.11.03, ಪೆಟ್ರೋಲ್ ಪ್ರತಿ ಲೀಟರ್ ಮೇಲೆ ರೂ.9.12 ಹೆಚ್ಚಳವಾದಂತಾಗಿದೆ. ಹಾಗೆಯೇ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ರೂ.80.38ಕ್ಕೆ ತಲುಪಿದ್ದು, ಡೀಸೆಲ್ ಲೀಟರ್’ಗೆ 80.40ಕ್ಕೆ ತಲುಪಿದೆ. ಇನ್ನು ಇಂದು ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ […]

Advertisement

Wordpress Social Share Plugin powered by Ultimatelysocial