ತೆಲಂಗಾಣದಲ್ಲಿ 5 ವರ್ಷದ ಬಾಲಕ ರೇಬೀಸ್‌ಗೆ ಬಲಿ, ಒಂದೇ ತಿಂಗಳಲ್ಲಿ 2ನೇ ಘಟನೆ ಬೆಳಕಿಗೆ |

ತೆಲಂಗಾಣ : ನಗರದ ಖಮ್ಮಂ ಜಿಲ್ಲೆಯಲ್ಲಿ ಬೀದಿಯಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕ ಬೀದಿನಾಯಿಗಳ ದಾಳಿಯಿಂದ ಗಾಯಗೊಂಡ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ ಬೀದಿಯಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕನಿಗೆ ಕೆಲ ದಿನಗಳ ಹಿಂದೆ ಬೀದಿನಾಯಿಗಳ ಗುಂಪೊಂದು ಕಡಿದಿತ್ತು, ಬೀದಿ ನಾಯಿ ದಾಳಿಗೆ ಒಳಗಾದ ಬಾಲಕ ಬಾನೋತ್ ಭರತ್‌ ಎಂದು ಗುರುತಿಸಲಾಗಿದೆ . ಬಳಿಕ ಬಾಲಕನಿಗೆ ರೇಬಿಸ್‌ ಲಕ್ಷಣಗಳು ಕಾಣಿಸಿಕೊಂಡಿದ್ದು, ಕೂಡಲೇ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಕರೆತರುತ್ತಿದ್ದಾಗ ಮೃತಪಟ್ಟಿದ್ದಾರೆ.

ಮಗುವಿನ ಪೋಷಕರು ಹೇಳುವ ಪ್ರಕಾರ, ರಘುನಾಥಪಾಲೆಂ ಮಂಡಲದ ಪುಟಾಣಿ ತಾಂಡಾದಲ್ಲಿ ಮನೆ ಬಳಿ ಆಟವಾಡುತ್ತಿದ್ದಾಗ ಬೀದಿ ನಾಯಿಗಳ ಹಿಂಡು ದಾಳಿ ಮಾಡಿದ್ದರಿಂದ ಬಾನೋತ್ ಭರತ್ ಗಾಯಗೊಂಡಿದ್ದರು. ಭಾನುವಾರ ಬಾಲಕ ಅಸ್ವಸ್ಥಗೊಂಡಿದ್ದು, ಪೋಷಕರು ಖಮ್ಮಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಾಲಕನನ್ನು ತಪಾಸಣೆಗೊಳಪಡಿಸಿದ ವೈದ್ಯರು ರೇಬಿಸ್‌ ಎಂದು ಶಂಕಿಸಿದ್ದು, ಹೈದರಾಬಾದ್‌ಗೆ ಕರೆದೊಯ್ಯುವಂತೆ ಪೋಷಕರಿಗೆ ಸೂಚಿಸಿದ್ದಾರೆ. ಆದರೆ, ಮಾರ್ಗಮಧ್ಯೆ ಮಗುವಿನ ಸ್ಥಿತಿ ಹದಗೆಟ್ಟಿದ್ದು, ಸೋಮವಾರ ಸೂರ್ಯಪೇಟೆ ಬಳಿ ಸಾವಿಗೀಡಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ರಾಜ್ಯದಲ್ಲಿ ಸಂಭವಿಸಿದ ಎರಡನೇ ಸಾವು ಇದಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Unique Wedding Ideas For a Smaller, More Intimate Wedding

Wed Mar 15 , 2023
Unique marriage ideas are extremely popular these days. Coming from alternative reception themes and creative wedding details that showcase your personality to budget elopements, this trend stems from the post-pandemic shift from large family-focused events towards something more close. Couples will be embracing https://www.promundo.cl/uncategorized/how-to-attract-asian-girls-looking-for-marital-life this newfound freedom to create a […]

Advertisement

Wordpress Social Share Plugin powered by Ultimatelysocial