528 ಎಕರೆ ಪ್ರದೇಶದಲ್ಲಿರುವ ಶ್ರೀಗಂಧದ ಮರಗಳು- 8 ರಿಂದ 10 ಗಂಧದ ಮರಗಳ ಕಳ್ಳತನ

ಬಾಗಲಕೋಟೆ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯ 528 ಎಕರೆ ಪ್ರದೇಶದಲ್ಲಿರುವ ಶ್ರೀಗಂಧದ ಮರಗಳಲ್ಲಿ ಇತ್ತೀಚೆಗೆ 8 ರಿಂದ 10 ಮರಗಳ ಕಳ್ಳತನವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಏಳು ಜನರ ತಂಡ ಪೂಜಾವನ ಹಿಂಭಾಗದ ಸಿಬ್ಬಂದಿ ವಸತಿ ಗೃಹದ ಹಿಂದೆ ಹುವುಗಳ ಬನದ ಬಳಿ ಇದ್ದ ಶ್ರೀಗಂಧದ ಮರಗಳನ್ನು ಯಂತ್ರದ ಸಹಾಯದಿಂದ ಕತ್ತರಿಸಿ ಕಳುವು ಮಾಡಿದೆ.

ಭದ್ರತೆಗೆ ಇದ್ದ ಮೂವರು ಸಿಬ್ಬಂದಿ ಕಳ್ಳರನ್ನು ನೋಡಿ ಮಂಡಳಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಲು ದೂರವಾಣಿ ಕರೆ ಮಾಡಿದರೂ ಯಾರೂ ಕರೆ ಸ್ವೀಕರಿಸಿಲ್ಲ. ಕಳ್ಳರು ಬಂದಿದ್ದಾರೆ ಬನ್ನಿ ಎಂದು ಭದ್ರತಾ ಸಿಬ್ಬಂದಿ ಕೂಗಿದರೂ ವಸತಿ ಗೃಹದ ಸಿಬ್ಬಂದಿ ಸಹಾಯಕ್ಕೆ ಬಂದಿಲ್ಲದ ಕಾರಣ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಲ್ಲದೇ ಇಷ್ಟೆಲ್ಲಾ ಶ್ರೀಗಂಧದ ಮರಗಳು ಕಳ್ಳತನವಾಗುತ್ತಿದ್ದರೂ ಪ್ರಾಧಿಕಾರದ ಅಧಿಕಾರಗಳು ಪ್ರಕರಣ ದಾಖಲಿಸಿಲ್ಲದಿರುವುದು ಸಂಶಯಕ್ಕೆ ಎಡೆ ಮಾಡಿ ಕೊಟ್ಟಿದೆ.

 

 

Please follow and like us:

Leave a Reply

Your email address will not be published. Required fields are marked *

Next Post

ಕೆಕೆಆರ್ ಗೆ ದೊಡ್ಡ ಆಘಾತ.! ಸ್ಟಾರ್ ವೇಗಿ ಟೂರ್ನಿಯಿಂದ ಔಟ್

Wed Oct 7 , 2020
ಗೆಲುವಿನ ಕನವರಿಕೆಯಲ್ಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.  ಕೊಲ್ಕತ್ತಾ ತಂಡದ ವೇಗದ ಬೌಲರ್ ಅಲಿಖಾನ್ ಗಾಯಕ್ಕೆ ತುತ್ತಾಗಿದ್ದು, 13 ನೇ ಆವೃತ್ತಿಯ ಟೂರ್ನಿಯಿಂದ ಹೊರ ನಡೆದಿದ್ದಾರೆ. ಅಲಿಖಾನ್ ಮೂಲತಃ ಅಮೆರಿದಕವರಾಗಿದ್ದು, ವಿಶ್ವದ ಶ್ರೀಮಂತ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್  ನಲ್ಲಿ ಸ್ಥಾನ ಪಡೆದ ಮೊದಲ ಅಮೆರಿಕ ಆಟಗಾರ ಎಂಬ ಹಿರಿಮೆಗೂ ಪಾತ್ರರಾಗಿದ್ದರು. ಕೊಲ್ಕತ್ತಾ ತಂಡವು ಡಿಸೆಂಬರ್ ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕ್ರಿಕೆಟ್ ಜನಕರ ನಾಡಿನ […]

Advertisement

Wordpress Social Share Plugin powered by Ultimatelysocial