ರಾಜ್ಯ ಸರ್ಕಾರಕ್ಕೆ ಸೇರಬೇಕಾದ 76 ಲಕ್ಷ ರೂ. ಗುಳುಂ! ಡಿ‌ ಗ್ರೂಪ್​ ನೌಕರನ ಕೈಚಳಕ, ಪತ್ನಿ, ನೆಂಟರ ಖಾತೆಗೆ ಹಣ ಜಮೆ

ರಾಮನಗರ: ಅಧಿಕಾರಿಗಳ ನಕಲಿ ಡಿಜಿಟಲ್​​ ಸಹಿಯನ್ನು ದುರ್ಬಳಕೆ ಮಾಡಿಕೊಂಡು, ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ಲಕ್ಷಾಂತರ ರೂಪಾಯಿ ಗುಳಂ ಮಾಡುತ್ತಿದ್ದ ರಾಮನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ ದರ್ಜೆಯ ​ನೌಕರ ಸೇರಿದಂತೆ ಒಟ್ಟು 8 ಮಂದಿಯ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಆರೋಪಿಗಳು ಸುಮಾರು 76 ಲಕ್ಷ ರೂ. ಹಣ ದುರುಪಯೋಗ ಮಾಡಿದ್ದಾರೆ. ಅಧಿಕಾರಿಗಳ ನಕಲಿ ಸಹಿ ಹಾಗೂ ಖಜಾನೆ -2 ಡಿಎಸ್ ಡಿಜಿಟಲ್ ಕೀ ಬಳಸಿ ಹಣ ಕಬಳಿಸಿದ್ದಾರೆ. ವಂಚಿಸಿದ ಹಣವನ್ನು ತನ್ನ ಹೆಂಡತಿ, ಸಂಭಂದಿಕರ ಖಾತೆಗೆ ಮಂಜುನಾಥ್​ ಜಮಾವಣೆ ಮಾಡಿಕೊಂಡಿದ್ದ.

ಅಂದಹಾಗೆ ಆರೋಪಿ ಮುಂಜುನಾಥ್​ ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್​​​ನಲ್ಲಿ ಡಿ ಗ್ರೂಪ್ ನೌಕರನಾಗಿದ್ದ. ಬಳಿಕ ಆತನನ್ನು ರಾಮನಗರ ತಾಲೂಕು ಕಚೇರಿಯಲ್ಲಿ ಡಿ-ದರ್ಜೆ ಸಿಬ್ಬಂದಿಯಾಗಿ ಖಜಾನೆ ಕೆಲಸಗಳನ್ನು ನೋಡಿಕೊಳ್ಳಲು ನೇಮಿಸಲಾಗಿತ್ತು. ಅಲ್ಲಿನ ವಿಚಾರಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದ ಮಂಜುನಾಥ್​, 2019 ರಿಂದ‌ 2022ರ ವರೆಗೂ ಹಣವನ್ನು ವಂಚಿಸಿದ್ದಾನೆ.

ಕಳ್ಳತನ ಮಾಡಿದ ಹಣದಲ್ಲಿ ಮನೆ ಕಟ್ಟಿಕೊಂಡು ಇನ್ನುಳಿದ ಹಣವನ್ನು ಜೂಜಿನಲ್ಲಿ ಕಳೆದಿದ್ದಾನೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ನೀಡಿದ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿದೆ. ಸದ್ಯ ಆರೋಪಿ ಮಂಜುನಾಥ್​ ಪೋಲಿಸರ ವಶದಲ್ಲಿದ್ದಾನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಸವಕಲ್ಯಾಣ ಕಾಂಗ್ರೆಸ್ ಆಕಾಂಕ್ಷಿಗಳ ಮಧ್ಯ ಮಾರಾಮಾರಿ.

Fri Feb 3 , 2023
ಬಸವಕಲ್ಯಾಣ ಕಾಂಗ್ರೆಸ್ ಆಕಾಂಕ್ಷಿಗಳ ಮಧ್ಯ ಮಾರಾಮಾರಿ ನಾಳೆ ಬಸವಕಲ್ಯಾಣದಲ್ಲಿ ನಡೆಯಲಿರುವ ಪ್ರಜಾಧ್ವನಿಯಾತ್ರೆ ಪೂರ್ವಭಾವಿ ಸಭೆಯಲ್ಲಿ ಕಿರಿಕಿರಿ ಸಭೆಯಲ್ಲಿ ಬಸವಕಲ್ಯಾಣ ಆಕಾಂಕ್ಷಿಗಳಾದ ವಿಜಯ ಸಿಂಗ್ ಮತ್ತು ಆನಂದ ದೇವಪ್ಪ ಮಧ್ಯ ನಡೆದ ಗಲಾಟೆ ಬಿಕೆಡಿಬಿ ಅತಿಥಿ ಗ್ರಹದಲ್ಲಿ ಕೈ ಆಕಾಂಕ್ಷಿಗಳ ಮಧ್ಯ ಹೊಡೆದಾಟ ನಡೆದಿದೆ ಎಂಬ ಆರೋಪ ವಿಜಯ ಸಿಂಗ್ ಬೆಂಬಲಿಗರಿಂದ ಆನಂದ ದೇವಪ್ಪ ಮೇಲೆ ಹಲ್ಲೆ ಮಾಡಿರುವ ಆರೋಪ ನಾಳೆ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರು ಪ್ರಜಾಧ್ವನಿ ಯಾತ್ರೆ ಪ್ರಜಾಧ್ವನಿ ಸಮಾವೇಶದ […]

Advertisement

Wordpress Social Share Plugin powered by Ultimatelysocial