ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ  ಮೇಲೆ‌ ಮೃಧುಧೋರಣೆ ತೊರುತ್ತಿದೆ ಭಾಲ್ಕಿಯಲ್ಲಿ. ಕೆ ಪಿ  ಸಿ ಸಿ ಕಾರ್ಯಾಧ್ಯಕ್ಷ ಈಶ್ವರ ಬಿ.ಖಂಡ್ರೆ ಬಿಜೆಪಿ ನಾಯಕರ ವಿರುದ್ದ ಕಿಡಿ  ಕಾರಿದ್ದಾರೆ.ಬೀದರ್ ನಲ್ಲಿ ಮಾತನಾಡಿದ ಅವರು,ಕಲ್ಯಾಣ ಕರ್ನಾಟಕ ಭಾಗದ 200ಕ್ಕೂ ಹೆಚ್ಚು  ಯುವಕರನ್ನು ಮೆಗಾ ಎಂಜನಿಯರಿಂಗ್ ಕಂಪನಿ ಕುವೈತ್ ಗೆ ಕರೆದೊಯ್ಯಲಾಗಿದೆ,ಕೊರೊನಾ ಹಿನ್ನೆಲೆ, ಅವರ ಸ್ಥಿತಿ ಪರದೇಶದಲ್ಲಿ ಅತಂತ್ರವಾಗಿದೆ.. ಅವರ ವೀಸಾ ಅವಧಿ ಮುಗಿದು, ಊಟಕ್ಕೂ ಪರದಾಡುತ್ತಿದ್ದಾರೆ.ಕರೆದೊಯ್ದವರು ಸುಳ್ಳು ಹೇಳಿ, ಬೋಗಸ್ ಟಿಕೆಟ್ ಕೊಡುತ್ತಿರುವ ಆರೋಪ ಕೇಳಿ ಬಂದಿವೆ.

ಕುವೈತ್ ನಲ್ಲಿ ಸಿಲುಕಿದ ಯುವಕರು ನನ್ನೊಂದಿಗೆ ವಿಡಿಯೊ ಮೂಲಕ ನೇರವಾಗಿ ಸಂಪರ್ಕಿಸಿದ್ದಾರೆ. ವಾಟ್ಸ್ ಅಪ್ ನಲ್ಲೂ ವಿಡಿಯೋ ಹರಿಬಿಟ್ಟಿದ್ದಾರೆ. ಇದೆಲ್ಲ ಗಮನಕ್ಕಿದ್ದರೂ ಸರ್ಕಾರ ಏನು ಮಾಡುತ್ತಿವೆ? ಕರ್ನಾಟಕದ ಸಂಸದರು ಏನು ಮಾಡುತ್ತಿದ್ದಾರೆ ? ಮೋಸ ಮಾಡಿರುವ ಕಂಪನಿ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಸಾವಿಗೆ ಆಸ್ಪತ್ರೆ ನಿರ್ಲಕ್ಷ್ಯ ಎಂದು ಸಂಬಂಧಿಕರಿಂದ ದಾಂಧಲೆ

Mon Aug 3 , 2020
ಅನ್ಸರ್‌ ಪಾಶಾ ಎಂಬ ವ್ಯಕ್ತಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು, ಹಲವು ಬಾರಿ ಜಯದೇವ ಆಸ್ಪತ್ರೆಯಲ್ಲೆ ಚಿಕಿತ್ಸೆ ಪಡೆದಿದ್ದ ಪಾಶಾ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ರು. ರೋಗಿ ಸ್ಥಿತಿ ಗಂಭೀರವಾಗಿದೆ ಎಂದು‌ ತಿಳಿಸಿದ್ದ ವೈದ್ಯರು ಬಳಿಕ ಚಿಕಿತ್ಸೆ ಫಲಿಸದೆ ಅನ್ಸಾರ್ ಪಾಶಾ ಸಾವನ್ನಪ್ಪಿದ್ದಾರೆ. ರೋಗಿ ಸಾವಿಗೆ ಆಸ್ಪತ್ರೆ ನಿರ್ಲಕ್ಷ್ಯ ಎಂದು ಆರೋಪಿಸಿ ಸಂಬಂದಿಕರಿಂದ ದಾಂಧಲೆ ಮಾಡಿದ್ದಾರೆ. ತಿಲಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ. […]

Advertisement

Wordpress Social Share Plugin powered by Ultimatelysocial