15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ಸರ್ಕಾರಿ ವಾಹನಗಳನ್ನು ಏ.1 ರಿಂದ ಗುಜರಿಗೆ ಹಾಕಲಾಗುತ್ತದೆ.

15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ಸರ್ಕಾರಿ ವಾಹನಗಳನ್ನು ಏ.1 ರಿಂದ ಗುಜರಿಗೆ ಹಾಕಲಾಗುತ್ತದೆ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಹಳೆ ವಾಹನಗಳ ಬದಲಾಗಿ ಹೊಸ ವಾಹನಗಳ ಬಳಕೆ ಮಾಡಲಾಗುವುದು, ಇದರಿಂದ ಮಾಲೀನ್ಯಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಸಾರ್ವಜನಿಕ ವಲಯಗಳ ಸಾರಿಗೆ ನಿಗಮಗಳ ಸ್ವಾಮ್ಯದ 15 ವರ್ಷ ಮೇಲ್ಪಟ್ಟ ಒಟ್ಟಾರೆ 9 ಲಕ್ಷಕ್ಕೂ ಅಧಿಕ ವಾಹನಗಳನ್ನು ರದ್ದುಗೊಳಿಸಿ ಗುಜರಿಗೆ ಹಾಕಲು ಅನುಮೋದನೆ ನೀಡಲಾಗಿದೆ.

ಏಪ್ರಿಲ್‌ನಲ್ಲಿಯೇ ಅವುಗಳ ಸ್ಥಾನಕ್ಕೆ ನೂತನ ವಾಹನಗಳು ಬರಲಿವೆ. ಇದರಿಂದಾಗಿ ವಾಯುಮಾಲಿನ್ಯ ಕಡಿಮೆಯಾಗುತ್ತದೆ ಎಂದಿದ್ದಾರೆ. ದೇಶದ ರಕ್ಷಣೆ, ಆಂತರಿಕ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಶಸ್ತ್ರಸಜ್ಜಿತ ವಾಹನಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಾತಿ ತಾರತಮ್ಯ ದೇಶದ ಹಲವು ಭಾಗಗಳಲ್ಲಿ ಇನ್ನೂ ತಾಂಡವವಾಡುತ್ತಿದ್ದು,

Tue Jan 31 , 2023
ಜಾತಿ ತಾರತಮ್ಯ ದೇಶದ ಹಲವು ಭಾಗಗಳಲ್ಲಿ ಇನ್ನೂ ತಾಂಡವವಾಡುತ್ತಿದ್ದು, ಅಸ್ಪೃಶ್ಯತೆಯ ಆಚರಣೆ ವಿಚಾರ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತದೆ. ಇದನ್ನು ಸಂಪೂರ್ಣವಾಗಿ ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿದ್ದು, ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಹೌದು, ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಮುತ್ತು ಮಾರಿಯಮ್ಮ ದೇಗುಲ ಪ್ರವೇಶಕ್ಕೆ 80 ವರ್ಷಗಳ ಬಳಿಕ ದಲಿತ ಸಮುದಾಯದ ಜನರಿಗೆ ಅವಕಾಶ ಮಾಡಿಕೊಡಲಾಗಿದೆ. ಮೇಲ್ವರ್ಗದ ಜನರ ವಿರೋಧದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಸುಮಾರು 300 ಮಂದಿ ದೇವರ ದರ್ಶನ […]

Advertisement

Wordpress Social Share Plugin powered by Ultimatelysocial