ಪುಟ್ಟ ಹುಡುಗಿಯ ಖುಷಿಯ ಡ್ಯಾನ್ಸ್‌ :

ಟ್ವಿಟ್ಟರ್‌, ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಈಗ ಸಾಕಷ್ಟು ವೀಕ್ಷಣೆಯನ್ನು ಗಳಿಸಿದೆ. ಎಲ್ಲರೂ ಬಲು ಆನಂದದಿಂದಲೇ ಈ ದೃಶ್ಯವನ್ನು ನೋಡುತ್ತಿದ್ದು, ಈ ಪುಟಾಣಿಯ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದಾರೆ.

 ಮನಸ್ಸಿಗೆ ಆನಂದ ನೀಡುವ ದೃಶ್ಯವನ್ನು ಹುಡುಕುತ್ತಿದ್ದೀರಾ…? ಹಾಗಾದರೆ, ಇಲ್ಲಿರುವ ದೃಶ್ಯ ನಿಮಗೆ ಖುಷಿಯಾಗಲೂಬಹುದು. ಇದು ಪುಟ್ಟ ಬಾಲಕಿಯೊಬ್ಬಳು ಅದ್ಭುತವಾಗಿ ನೃತ್ಯ ಮಾಡುವ ದೃಶ್ಯ. ಸಹಜವಾಗಿಯೇ ಈ ವಿಡಿಯೋ ಈಗ ಎಲ್ಲರಲ್ಲೂ ಮುಗುಳ್ನಗೆ ಮೂಡಿಸಿದೆ. ಕೆಲವರು ಈ ದೃಶ್ಯವನ್ನು ಮತ್ತೆ ಮತ್ತೆ ನೋಡಿ ಎಂಜಾಯ್ ಮಾಡುತ್ತಿದ್ದಾರೆ.
ಮಕ್ಕಳ ಖುಷಿಯ ಕ್ಷಣದ ದೃಶ್ಯಗಳನ್ನು ನೋಡುವ ಆನಂದವೇ ಬೇರೆ. ಇಂತಹ ದೃಶ್ಯಗಳು ಒಂದು ಕ್ಷಣ ನಮ್ಮ ಎಲ್ಲಾ ನೋವನ್ನು ಮರೆಸಿ ಖುಷಿ ಮೂಡಿಸುತ್ತದೆ. ಹಾಗೆ ಮಂದಹಾಸ ಮೂಡಿಸುವಂತಹ ದೃಶ್ಯಗಳಲ್ಲಿ ಈ ದೃಶ್ಯವೂ ಸೇರುತ್ತದೆ. ಇಲ್ಲೊಬ್ಬಳು ಪಟಾಣಿ ಹರ್ಯಾನ್ವಿ ಹಾಡಿಗೆ ಭರ್ಜರಿಯಾಗಿ ಕುಣಿದಿದ್ದಾಳೆ. ಇದು ನಿಮ್ಮ ಈ ದಿನದ ಖುಷಿಗೆ ಜತೆಯಾಗುವಂತಹ ದೃಶ್ಯ.
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೇದಿಕೆಯಲ್ಲಿ ಗಾಯಕರೊಬ್ಬರು ಹಾಡು ಹಾಡುತ್ತಿದ್ದರೆ ಅಲ್ಲೇ ನಿಂತಿರುವ ಪುಟಾಣಿ ಮ್ಯೂಸಿಕ್ ಬೀಟ್ಸ್‌ಗೆ ಸೊಂಟ ಬಳುಕಿಸುವುದನ್ನು ನೋಡಬಹುದು. ಅತ್ಯಂತ ಮನಮೋಹಕವಾಗಿ ಈ ಬಾಲಕಿ ನೃತ್ಯ ಮಾಡಿದ್ದಾಳೆ. ಈ ನೃತ್ಯಕ್ಕೆ ಗಾಯಕ ಕೂಡಾ ಜತೆಯಾಗುತ್ತಾರೆ. ದಿಶು ಯಾದವ್ ಎಂಬ ಪುಟ್ಟ ಬಾಲಕಿಯ ಖುಷಿಯ ನೃತ್ಯದ ದೃಶ್ಯವಿದು. ಈ ಪುಟಾಣಿ ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನೂ ಸಂಪಾದಿಸಿಕೊಂಡಿದ್ದಾರೆ. ಗಾಯಕ ಅಜಯ್ ಹೂಡಾ ಈ ಹಾಡನ್ನು ಹಾಡುತ್ತಿದ್ದರೆ ದಿಶು ಯಾದಮ್ ಕುಣಿದು ಆನಂದಿಸಿದ್ದಾಳೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದಿನಿಂದ `ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ' ಆರಂಭ

Wed Jan 11 , 2023
ಬೆಂಗಳೂರು : ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಪಕ್ಷವು ಇಂದಿನಿಂದ ಬೆಳಗಾವಿಯ ಗಾಂಧಿಬಾವಿಯಲ್ಲಿ ಪ್ರಜಾಧ್ವನಿ ರಥಯಾತ್ರೆಗೆ ಚಾಲನೆ ನೀಡಲಿದೆ.ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ 20 ಜಿಲ್ಲೆಗಳಲ್ಲಿ 10 ದಿನಗಳ ಕಾಲ ಜಂಟಿಯಾಗಿ ಪ್ರಜಾಧ್ವನಿ ಬಸ್ ಯಾತ್ರೆ ನಡೆಯಲಿದೆ.ಜನವರಿ 11 ರಿಂದ 28 ರವರೆಗೆ 20 ಜಿಲ್ಲೆಗಳಲ್ಲಿ ಉಭಯ ನಾಯಕರು ಒಟ್ಟಿಗೇ ಬಸ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಪ್ರಜಾಧ್ವನಿ ಬಸ್ ಯಾತ್ರೆಯಲ್ಲಿ ಕೇಂದ್ರ, ರಾಜ್ಯದ […]

Advertisement

Wordpress Social Share Plugin powered by Ultimatelysocial