ಗೌತಮ್ ಅದಾನಿ ಪತ್ನಿ ರಾಜ್ಯಸಭೆ ಪ್ರವೇಶಕ್ಕೆ ವೇದಿಕೆ ರೆಡಿ..!

 

ರಾಜ್ಯಸಭೆಗೆ ಉದ್ಯಮಿಗಳು, ಕಲಾವಿದರು ಪ್ರವೇಶಿಸುವುದು ಹೊಸದೇನು ಅಲ್ಲ. ಇದೀಗ ಅಂತಹ ಮತ್ತೊಂದು ವೇದಿಕೆ ಸಜ್ಜಾಗುತ್ತಿದ್ದು, ವಿಶ್ವದ ಐದನೇ ಅತಿ ದೊಡ್ಡ ಸಿರಿವಂತ, ಆದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಅವರ ಪತ್ನಿ ರಾಜ್ಯಸಭೆ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗಿದೆ.

ಜೂನ್ 10ರಂದು ಆಂಧ್ರಪ್ರದೇಶದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಆಡಳಿತರೂಢ ವೈ ಎಸ್ ಆರ್ ಕಾಂಗ್ರೆಸ್ ಪಕ್ಷ ಈ ಎಲ್ಲ ಸ್ಥಾನಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಗೌತಮ್ ಅದಾನಿ ಅಥವಾ ಅವರ ಪತ್ನಿ ಪ್ರೀತಿ ಅದಾನಿ ಆಂಧ್ರಪ್ರದೇಶದಿಂದ ರಾಜ್ಯಸಭೆ ಪ್ರವೇಶಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗಾಗಲೇ ಈ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಲಾಗಿದ್ದು, ಇದಕ್ಕೆ ಅವರು ಸಹ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಗೌತಮ್ ಅದಾನಿ ಅಥವಾ ಅವರ ಪತ್ನಿ ಪ್ರೀತಿ ಅದಾನಿ ಆಂಧ್ರಪ್ರದೇಶದಿಂದ ರಾಜ್ಯಸಭೆ ಪ್ರವೇಶಿಸುವುದು ಖಚಿತವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಣದ ಸಮಸ್ಯೆ ಇರುವವರು ನಿಮ್ಮ ಸಂಪಾದನೆ ಹೆಚ್ಚಲು ಈ ಗಿಡವನ್ನು ಮನೆಯಲ್ಲಿ ನೆಡಿ.!

Sun May 15 , 2022
ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಿದ್ದರೆ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ. ಪರಿಸರದಲ್ಲಿ ಬೆಳೆಯುವ ಮರಗಿಡಗಳು ಕೂಡ ನಮ್ಮ ಮನೆಯಲ್ಲಿ ನಕರಾತ್ಮಕಶಕ್ತಿಯನ್ನು ಹೊಡೆದೋಡಿಸಿ ಸಕರಾತ್ಮಕತೆ ನೆಲೆಸಿರುವಂತೆ ಮಾಡುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲಿರುವ ಹಣಕಾಸಿನ ಸಮಸ್ಯೆಯನ್ನು ನಿವಾರಿಸಿ ಹಣವನ್ನು ನಿಮ್ಮ ಕಡೆ ಆಕರ್ಷಿಸಲು ಈ ಗಿಡವನ್ನು ಮನೆಯಲ್ಲಿ ನೆಡಿ. ಜೇಡ್ ಪ್ಲಾಂಟ್ ಮನೆಯಲ್ಲಿ ಸಕರಾತ್ಮಕತೆಯನ್ನು ನೆಲೆಸುವಂತೆ ಮಾಡುತ್ತದೆ. ಇದನ್ನು ಸಂಪತ್ತಿನ ಗಿಡವೆಂದು ಕರೆಯುತ್ತಾರೆ. ಇದನ್ನು ಮನೆಯ ಬಳಿ ನೆಡುವುದರಿಂದ ಸಂಪತ್ತು ಹೆಚ್ಚಾಗುತ್ತದೆ. ಇದು ಸಂಪತ್ತನ್ನು […]

Advertisement

Wordpress Social Share Plugin powered by Ultimatelysocial