ಟಾಲಿವುಡ್ಗೆ ಶಿವಣ್ಣನ ಭರ್ಜರಿ ರೀ ಎಂಟ್ರಿ!
ಟಾಲಿವುಡ್ ಚಿತ್ರರಂಗ ಭರ್ಜರಿಯಾಗಿದೆ. ಇಲ್ಲಿ ನಿರ್ಮಾಣ ಆಗೋ ಚಿತ್ರಗಳು ದೊಡ್ಡ ಬಜೆಟ್ ಚಿತ್ರಗಳೇ ಆಗಿರುತ್ತವೆ. ಇಂತಹ ಈ ಇಂಡಸ್ಟ್ರಿಯಲ್ಲಿ ಕನ್ನಡದ ಕಲಾವಿದರೂ ಈಗೀಗ ಮಿಂಚುತ್ತಿದ್ದಾರೆ. ಡಾಲಿ ಧನಂಜಯ್, ದುನಿಯಾ ವಿಜಯ ಇಲ್ಲಿ ಹೆಸರು ಮಾಡಿದ್ದಾರೆ. ಟಾಲಿವುಡ್ಗೆ ಮತ್ತೆ ಕಾಲಿಡ್ತಿರೋ ಹ್ಯಾಟ್ರಿಕ್ ಹೀರೋ ಶಿವಣ್ಣ
ಟಾಲಿವುಡ್ನ ಯಾವ ಚಿತ್ರದಲ್ಲಿ ಶಿವಣ್ಣನ ಅಭಿನಯ
ಟಾಲಿವುಡ್ನಲ್ಲಿ ಶಿವರಾಜ್ ಕುಮಾರ್ ಅಭಿನಯಿಸೋದು ಪಕ್ಕಾ ಆಗಿದೆ. ಹಾಗೆ ಒಪ್ಪಿಕೊಂಡಿರೋ ಈ ಚಿತ್ರದ ಕಥೆ ಕನ್ನಡದಲ್ಲಿ ಈಗಾಗಲೇ ಹಿಟ್ ಆಗಿದೆ. ಈ ಚಿತ್ರದಲ್ಲಿ ಶಿವರಾಜ್ಕುಮಾರ್ ಭರ್ಜರಿಯಾಗಿಯೇ ಅಭಿನಯಿಸಿದ್ದಾರೆ. ಜನರ ಮನಸು ಕೂಡ ಗೆದ್ದಿದ್ದಾರೆ.
ಹೌದು, ಶಿವರಾಜ್ ಕುಮಾರ್ ಟಾಲಿವುಡ್ಗೆ ತಮ್ಮ ವೇದ ಚಿತ್ರವನ್ನ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳಿಗೆ ದಿಲ್ ಕದ್ದ ಶಿವರಾಜ್ ಕುಮಾರ್ ಈಗ ತಮ್ಮ ನಿರ್ಮಾಣದ ವೇದ ಸಿನಿಮಾವನ್ನ ಟಾಲಿವುಡ್ನಲ್ಲೂ ರಿಲೀಸ್ ಮಾಡುತ್ತಿದ್ದಾರೆ.
ಟಾಲಿವುಡ್ನ ತೆಲುಗು ಭಾಷೆಯಲ್ಲಿ ವೇದ ಚಿತ್ರ ರಿಲೀಸ್
ಕನ್ನಡದ ವೇದ ಸಿನಿಮಾ ಬೇರೆ ಭಾಷೆಯಲ್ಲಿ ರಿಲೀಸ್ ಆಗುತ್ತದೆ ಅನ್ನೋದನ್ನ ಶಿವರಾಜ್ಕುಮಾರ್ ಹೇಳಿಕೊಂಡಿದ್ದರು. ಕನ್ನಡ ವೇದ ಚಿತ್ರದ ಪ್ರಮೋಷನ್ ದಿನಗಳಲ್ಲಿ ಈ ವಿಷಯವನ್ನ ಸ್ವತಃ ಶಿವಣ್ಣ ಹೇಳಿಕೊಂಡಿದ್ದರು. ಅದರಂತೆ ಕನ್ನಡದ ವೇದ ಸಿನಿಮಾ ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.
ಕನ್ನಡದಲ್ಲಿ ವೇದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿದೆ. ಈ ಚಿತ್ರದ ಮೂಲಕ ಶಿವಣ್ಣ ಕನ್ನಡದ ಪ್ರೇಕ್ಷಕರಿಗೆ ಹೊಸ ರೀತಿ ಕಾಣಿಸಿಕೊಂಡರು. ಜನರ ಹೃದಯದಲ್ಲಿ ಒಂದು ಜಾಗೃತಿ ಕೂಡ ಮೂಡಿಸಿದ್ದರು.
ಕನ್ನಡದಲ್ಲಿ 50 ದಿನ ಪೂರೈಸಿದ ವೇದ ಸಿನಿಮಾ
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ವೇದ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿತ್ತು. ಬಹು ನಿರೀಕ್ಷೆಯೊಂದಿಗೆ ಡಿಸೆಂಬರ್-23 ರಂದು ರಾಜ್ಯದೆಲ್ಲೆಡೆ ವೇದ ರಿಲೀಸ್ ಆಗಿತ್ತು. ಒಳ್ಳೆ ಓಪನಿಂಗ್ನೊಂದಿಗೆ ಕನ್ನಡ ನಾಡಿನ ಜನರ ಹೃದಯವನ್ನ ಕನ್ನಡದ ವೇದ ಗೆದ್ದೆ ಬಿಟ್ಟಿತ್ತು.
https://play.google.com/store/apps/details?id=com.speed.newskannada