ಅತ್ಯಂತ ವೇಗವಾಗಿ 400 ಕೋಟಿ ಕ್ಲಬ್ ಸೇರಿದ ಪಠಾಣ್:

ಸುಮಾರು 4 ವರ್ಷಗಳ ಬಿಡುವಿನ ನಂತರ ಬಿಡುಗಡೆಯಾದ ಶಾರೂಖ್ ಖಾನ್ ಅಭಿನಯದ ಪಠಾಣ್ ಚಿತ್ರ ಅತ್ಯಂತ ವೇಗವಾಗಿ 400 ಕೋಟಿ ರೂ. ಗಳಿಸಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜನವರಿ 25ರಂದು ಜಗತ್ತಿನಾದ್ಯಂತ ಏಕಾಕಾಲದಲ್ಲಿ ಬಿಡುಗಡೆ ಆದ ಪಠಾಣ್ ಚಿತ್ರ 4 ದಿನದಲ್ಲಿ 400 ಕೋಟಿ ರೂ.ಗೂ ಅಧಿಕ ಮೊತ್ತ ಗಳಿಸಿ ದಾಖಲೆ ಬರೆದಿದೆ.

ವಿಶೇಷ ಅಂದರೆ ಭಾರತದಲ್ಲೇ 200 ಕೋಟಿ ರೂ. ಗಳಿಸಿದೆ.

ಶುಕ್ರವಾರದ ವೇಳೆ ಭಾರತದಲ್ಲಿ 166 ಕೋಟಿ ಹಾಗೂ ಜಾಗತಿಕ ಮಟ್ಟದಲ್ಲಿ 316 ಕೋಟಿ ರೂ. ಗಳಿಸಿದ್ದ ಪಠಾಣ್ ಶನಿವಾರ 400 ಕೋಟಿ ರೂ. ಗಳಿಸಿದ್ದು, ಇದೇ ವೇಗದಲ್ಲಿ ಸಾಗಿದರೆ ಭಾನುವಾರ 500 ಕೋಟಿ ರೂ. ಗಳಿಸಲಿದೆ.

ಸೋಮವಾರದ ನಂತರ ಪಠಾಣ್ ಚಿತ್ರದ ಗಳಿಕೆ ಕುಸಿಯುವ ನಿರೀಕ್ಷೆ ಇದ್ದು, ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಶೇ.50ರಷ್ಟು ಮಾರುಕಟ್ಟೆ ಅತಿಕ್ರಮಿಸಿದ್ದು, ಸದ್ಯಕ್ಕೆ ಯಾವುದೇ ದೊಡ್ಡ ಚಿತ್ರದ ಪೈಪೋಟಿ ಇಲ್ಲದ ಕಾರಣ ಮುಂದಿನ ವಾರವೂ ಗಳಿಕೆ ಉತ್ತಮವಾಗಿ ಇರಲಿದೆ ಎಂದು ವಿಶ್ಲೇಷಿಸಲಾಗಿದೆ.

ಚಿತ್ರದ ಯಶಸ್ಸಿನ ಕುರಿತು ಮೊದಲ ಬಾರಿ ಪ್ರತಿಕ್ರಿಯೆ ನೀಡಿರುವ ಶಾರೂಖ್ ಖಾನ್, ಹ್ಹ ಹ್ಹ ಹ್ಹ. ನಾನೀಗ ಊರಿಗೆ ವಾಪಸ್ ಹೋಗಲಾ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಚಿತ್ರದ ಪ್ರಚಾರದಲ್ಲಿ ಯಾಕೆ ಭಾಗವಹಿಸಿಲ್ಲ ಎಂಬ ಅಭಿಮಾನಿಗಳ ಪ್ರಶ್ನೆಗೆ ಸಿಂಹಕ್ಕೆ ಪ್ರಚಾರಕ್ಕೆ ಅವಶ್ಯಕತೆ ಇಲ್ಲ ಎಂದು ಪ್ರತಿಕ್ರಿಯಿಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ.

Sun Jan 29 , 2023
ಬೆಳಗಾವಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ. ಮೂರು ತಿಂಗಳಲ್ಲಿ ಚುನಾವಣೆ ಎದುರಿಸಲಿದ್ದೇವೆ. ಅಮಿತ್ ಶಾ ನಮಗೆ ಮಾರ್ಗದರ್ಶನ ಮಾಡಿದ್ದಾರೆ. ಬರುವ ಚುನಾವಣೆಯಲ್ಲಿ ನಾವು ನೂರಕ್ಕೆ ನೂರರಷ್ಟು 140 ಸ್ಥಾನ ಪಡೆಯುತ್ತೇವೆ. ಯಾರೋ ನಾನೇ ಮುಂದಿನ ಮುಖ್ಯಮಂತ್ರಿ ಎಂದು ತಿರುಕನ ಕನಸು ಕಾಣುತ್ತಿದ್ದಾರೆ, ಅದು ನನಸಾಗಲ್ಲ. ಸೂರ್ಯಚಂದ್ರ ಇರುವುದು ಎಷ್ಟು ಸತ್ಯವೋ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಬಿಜೆಪಿ ಟಿಕೆಟ್‌ಗಾಗಿ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಪೈಪೋಟಿ ವಿಚಾರ. […]

Advertisement

Wordpress Social Share Plugin powered by Ultimatelysocial