ಸರಕಾರಿ ಪದವಿ ಕಾಲೇಜಿಗಳಲ್ಲಿ ಖಾಲಿ ಇರುವ 1,250 ಸಹಾಯಕ ಪ್ರಾಧ್ಯಾಪಕರ ಹುದ್ದೆ.

ಬೆಂಗಳೂರು: ಸರಕಾರಿ ಪದವಿ ಕಾಲೇಜಿಗಳಲ್ಲಿ ಖಾಲಿ ಇರುವ 1,250 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಲಿಖೀತ ಪರೀಕ್ಷೆ ಮುಗಿದಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಡಾ| ಅವಿನಾಶ್‌ ಉಮೇಶ್‌ ಜಾಧವ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಒಟ್ಟು 6,500 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 5,000 ಹುದ್ದೆಗಳು ಭರ್ತಿಯಾಗಿವೆ. ಹೊಸದಾಗಿ 1,250 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಲಿಖೀತ ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹುದ್ದೆಗಳನ್ನು ಭರ್ತಿ ಮಾಡಲು ನಮಗೆ ಹೆಚ್ಚುವರಿಯಾಗಿ 8,000 ಹುದ್ದೆಗಳು ಬೇಕಾಗುತ್ತದೆ. 12 ಸಾವಿರ ಅತಿಥಿ ಉಪನ್ಯಾಸಕರ ಮೂಲಕವೂ ಕೊರತೆ ಇರುವ ಕಡೆ ಪಾಠ ಪ್ರವಚನಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಎಲ್ಲೆಲ್ಲಿ ಹುದ್ದೆಗಳು ಖಾಲಿ ಇವೆಯೋ ಅಲ್ಲೆಲ್ಲ ಭರ್ತಿ ಮಾಡಬೇಕು. ಕೆಲವು ಕಾಲೇಜುಗಳಲ್ಲಿ 80-90ರಷ್ಟು ವಿದ್ಯಾರ್ಥಿಗಳಿಗೆ ಒಬ್ಬರೇ ಪ್ರಾಧ್ಯಾಪಕರಿದ್ದು, ಇಂತಹ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ಮಾಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ರಾಜಕಾರಣದಲ್ಲಿ ಇಲ್ಲದೆಯೂ ನಾನು ಹಿಂದೆಯೇ ಸಮಾಜ ಸೇವೆ ಶುರುಮಾಡಿದ್ದೇನೆ.

Fri Feb 17 , 2023
ಬೆಂಗಳೂರು: ‘ರಾಜಕಾರಣದಲ್ಲಿ ಇಲ್ಲದೆಯೂ ನಾನು ಹಿಂದೆಯೇ ಸಮಾಜ ಸೇವೆ ಶುರುಮಾಡಿದ್ದೇನೆ. ಅದಕ್ಕೆ ರಾಜಕೀಯಕ್ಕೆ ಬರಬೇಕು ಅಂತಿಲ್ಲ. ರಾಜಕೀಯ ಪಕ್ಷಗಳು ಇಲ್ಲದೆಯೇ ನನಗೆ ಫ್ಯಾನ್ಸ್ ಪಕ್ಷ, ಗೆಳೆಯರ ಪಕ್ಷ, ಬಳಗದ ಪಕ್ಷ ಅಂತ ತುಂಬ ಪಕ್ಷಗಳಿವೆ. ಅವರ ಜತೆ ಸೇರಿಕೊಂಡು ಒಳ್ಳೆಯ ಕೆಲಸ ಮಾಡುತ್ತಿರುತ್ತೇವೆ. ಕುರ್ಚಿ ಆಸೆ ಇನ್ನೂ ಬಂದಿಲ್ಲ…’ ಇವು ಖ್ಯಾತ ನಟ ಸುದೀಪ್ ಸ್ಪಷ್ಟನುಡಿ. ಫೆ.24 ಮತ್ತು 25ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕೆಸಿಸಿ (ಕನ್ನಡ ಚಲನಚಿತ್ರ ಕಪ್) ಬಗ್ಗೆ ದಿಗ್ವಿಜಯ […]

Advertisement

Wordpress Social Share Plugin powered by Ultimatelysocial