ನಟಿ ರವೀನಾ ಟಂಡನ್ ಅವರ ತಂದೆ, ರವಿ ಟಂಡನ್ ಇಂದು ನಿಧನರಾಗಿದ್ದಾರೆ.

ಜನಪ್ರಿಯ ನಟಿ ರವೀನಾ ಟಂಡನ್ ಅವರ ತಂದೆ, ಜನಪ್ರಿಯ ಸಿನಿಮಾ ನಿರ್ದೇಶಕ ರವಿ ಟಂಡನ್ ಇಂದು ನಿಧನರಾಗಿದ್ದಾರೆ.ರವೀನಾ ಟಂಡನ್‌ರ ತಂದೆ ರವಿ ಟಂಡನ್ ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ಮತ್ತು ನಿರ್ಮಾಪಕ. ‘ಖೇಲ್‌ ಖೇಲ್‌ ಮೆ’, ‘ನಜರಾನಾ’, ‘ಅನ್ಹೋನೆ’, ‘ಜಿಂದಗಿ’, ‘ಮಜ್ಬೂರ್’, ‘ಖುದ್ದಾರ್’ ಸೇರಿದಂತೆ ಇನ್ನೂ ಕೆಲವು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.ಜೊತೆಗೆ ‘ಏಕ್ ಮೇ ಔರ್ ಏಕ್ ತು’, ‘ಅಪ್ನೆ ರಂಗ್ ಹಜಾರ್’, ‘ಅನ್ಹೋನೆ’ ಹಾಗೂ ಇನ್ನೂ ಕೆಲವು ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದಾರೆ. ‘ಲವ್ ಇನ್ ಶಿಮ್ಲಾ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದಾರೆ ರವಿ ಟಂಡನ್.ತಂದೆ ನಿಧನರಾದ ಸುದ್ದಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ರವೀನಾ ಟಂಡನ್ ಖಚಿತ ಪಡಿಸಿದ್ದು, ತಂದೆಯ ಜೊತೆಗೆ ಕೆಲವು ಹಳೆಯ ಚಿತ್ರಗಳನ್ನು ಹಂಚಿಕೊಳ್ಳುವ ಜೊತೆಗೆ ತಂದೆಯ ಬಗ್ಗೆ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.ತಂದೆಯೊಂದಿಗಿನ ಹಲವು ಚಿತ್ರಗಳನ್ನು ಹಂಚಿಕೊಂಡಿರುವ ರವೀನಾ, ”ನೀವು ಸದಾ ನನ್ನೊಂದಿಗೆ ನಡೆಯುತ್ತಿರುತ್ತೀರಿ. ನಾನು ಸದಾ ನಿಮ್ಮವಳಾಗಿರುತ್ತೇನೆ. ನಾನು ನಿಮ್ಮನ್ನು ಹೋಗಲು ಬಿಡುವುದಿಲ್ಲ. ಲವ್ ಯು ಅಪ್ಪ” ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ ರವೀನಾ ಟಂಡನ್.ರವೀನಾರ ಪೋಸ್ಟ್‌ಗೆ ನಟಿಯರಾದ ನಮ್ರತಾ ಶಿರೋಡ್ಕರ್, ನೀಲಂ ಕೊಠಾರಿ, ಜೂಹಿ ಚಾವ್ಲಾ ಸೇರಿದಂತೆ ಹಲವು ನಟಿಯರು ಪ್ರತಿಕ್ರಿಯಿಸಿದ್ದು, ರವೀನಾಗೆ ಸಂತಾಪ ಹೇಳಿದ್ದಾರೆ.ಈ ಹಿಂದಿನ ಹಲವು ಸಂದರ್ಶನಗಳಲ್ಲಿ ರವೀನಾ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದರು. ತಂದೆ ಸಿನಿಮಾ ಉದ್ಯಮದ ವ್ಯಕ್ತಿಯಾಗಿದ್ದರೂ ಸಹ ನಮ್ಮನ್ನು ಸಿನಿಮಾ ಸೆಟ್‌ಗಳಿಂದ ದೂರವೇ ಇಟ್ಟಿದ್ದರು. ಬಹಳ ಅಪರೂಪಕ್ಕೆ ನಮ್ಮನ್ನು ಸಿನಿಮಾ ಸೆಟ್‌ಗೆ ಕರೆದುಕೊಂಡು ಹೋಗುತ್ತಿದ್ದರು. ನಾನು ನಟಿಯಾಗುವ ಸಮಯದಲ್ಲಿಯೂ ಸಹ ನಾನು ಅಪ್ಪನೊಂದಿಗೆ ಮಾತುಕತೆ ನಡೆಸಿ ಒಪ್ಪಿಗೆ ಪಡೆದ ಮೇಲಷ್ಟೆ ಸಿನಿಮಾ ರಂಗಕ್ಕೆ ಬಂದೆ. ಆಗ ಪ್ರತಿ ಅವಕಾಶ ಬಂದಾಗಲೂ ಅಪ್ಪನೊಂದಿಗೆ ಚರ್ಚಿಸುತ್ತಿದ್ದೆ ಎಂದಿದ್ದರು.ನಟಿ ರವೀನಾ ಟಂಡನ್ ‘ಕೆಜಿಎಫ್ 2’ ಸಿನಿಮಾದಲ್ಲಿ ನಟಿಸಿದ್ದು, ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ಡಬ್ಬಿಂಗ್ ಅನ್ನು ಮುಗಿಸಿದ್ದಾರೆ. ಏಪ್ರಿಲ್ 14 ರಂದು ಸಿನಿಮಾ ಬಿಡುಗಡೆ ಆಗಲಿದೆ. ಕೆಲವು ದಿನಗಳ ಹಿಂದಷ್ಟೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರವೀನಾ ತಾವು ರಾಜಕೀಯಕ್ಕೆ ಪಾದಾರ್ಪಣೆ ಮಾಡುವುದಾಗಿಯೂ ಹೇಳಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗೆಹ್ರಾಯಾನ್‌ನಲ್ಲಿ ಹದ್ದಿನ ಕಣ್ಣಿನ ಅಭಿಮಾನಿಗಳು ದೀಪಿಕಾ ಪಡುಕೋಣೆ ಅವರ ಸಹೋದರಿ ಅನಿಶಾ ಪಡುಕೋಣೆಯನ್ನು ಗುರುತಿಸಿದ್ದಾರೆ. ಇಲ್ಲಿ ನೋಡಿ

Sat Feb 12 , 2022
    ಗೆಹ್ರೈಯಾನ್ ಶುಕ್ರವಾರ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಯಿತು, ಅದರ ನಂತರ ಅಭಿಮಾನಿಯೊಬ್ಬರು ಚಲನಚಿತ್ರದಲ್ಲಿ ಕಾಣಿಸಿಕೊಂಡ ಆಸಕ್ತಿದಾಯಕ ವಿವರವನ್ನು ಗಮನಿಸಿದರು. ಟ್ವಿಟರ್‌ನಲ್ಲಿ, ಹದ್ದಿನ ಕಣ್ಣಿನ ಅಭಿಮಾನಿ ಚಿತ್ರದ ತುಣುಕನ್ನು ಹಂಚಿಕೊಂಡಿದ್ದಾರೆ ಮತ್ತು ನಟಿ ದೀಪಿಕಾ ಪಡುಕೋಣೆ ಮತ್ತು ಅವರ ಸಹೋದರಿ ಅನಿಶಾ ಪಡುಕೋಣೆ ಅವರ ಬಾಲ್ಯದ ಫೋಟೋವನ್ನು ಒಳಗೊಂಡಿರುವ ಫೋಟೋ ಫ್ರೇಮ್ ಅನ್ನು ತೋರಿಸಿದ್ದಾರೆ. ದೃಶ್ಯದ ಸ್ಕ್ರೀನ್‌ಶಾಟ್ ಅನ್ನು ಮೂಲ ಫೋಟೋದೊಂದಿಗೆ ಹಂಚಿಕೊಂಡಿರುವ ನೆಟಿಜನ್, “#Gehraiyaan ಕುಟುಂಬದ ಭಾವಚಿತ್ರಗಳ ನಡುವೆ […]

Advertisement

Wordpress Social Share Plugin powered by Ultimatelysocial