ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಹಲವು ಕಾರ್ಯಕ್ರಮ.

ಕರ್ನಾಟಕ ರತ್ನ ಪುನೀತ್ ರಾಜ್ ಅವರ ನೆನಪಿನಲ್ಲಿ ಬೆಂಗಳೂರು ಮತ್ತು ಚಾಮರಾಜ ನಗರ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ವಸತಿ ಸಚಿವ ವಿ‌.ಸೋಮಣ್ಣ ಹೇಳಿದ್ದಾರೆ. ಐದು ದಿನಗಳ ಉಲ್ಲಾಸ್ ತರಬೇತಿ ಶಾಲೆ ಮತ್ತು ಅಪ್ಪು ಮಕ್ಕಳ ಚಿತ್ರೋತ್ಸವದ ಚಾಲನೆ ನೀಡಿ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆಯಲ್ಲಿ ಸಮುದಾಯಭವನ ಉದ್ಘಾಟನೆ ಮಾಡಲಾಗಿದ್ದು ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು.ಇದಲ್ಲದೆ ಪುನೀತ್ ರಾಜ್ ಕುಮಾರ್ ಅವರ ಹೆಸರಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅದೇ ರೀತಿ ಬೆಂಗಳೂರಿನಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪುನೀತ್ ರಾಜ್ ಕುಮಾತ್ ತಮ್ಮ ಜೀವಿತಾವಧಿಯಲ್ಲಿ ಎಂದೂ ಮರೆಯದ ಕೆಲಸಗಳ ಮೂಲಕ ಅಜರಾಮರವಾಗಿದ್ದಾರೆ.‌ಪುನೀತ್ ಅವರ ಭಾವಚಿತ್ರಕ್ಕರ ಪುಷ್ಪನಮನ ಸಲ್ಲಿಸುವುದು ಬೇಸರದ ಸಂಗತಿ ಎಂದರು.ಅಪ್ಪು ಮಕ್ಕಳ ಚಿತ್ರೋತ್ಸವವನ್ನು ಅಜರಾಮರವಾಗಿಸುವ ನಿಟ್ಟಿನಲ್ಲಿ ಶಾಶ್ವತ ಕಾರ್ಯಕಾರ್ಯಕ್ತಮ ರೂಪಿಸಿ, ಸರ್ಕಾರದಿಂದಲೂ ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ‌ ಡಾ‌.ರಾಜ್ ಕುಮಾರ್ ಅವರ ಕುಟುಂಬ ಸಾವಿರಾರು ವರ್ಷ ಕಳೆದರೂ ಅವರ ಹೆಸರು ಅಜರಾಮರವಾಗಲಿದೆ. ಪುನೀತ್ ರಾಜ್ ಕುಮಾರ್ ಅವರು ಹೆಸರು ಶಾಶ್ವತವಾಗರಲಿದೆ ಎಂದಿದ್ದಾರೆ.ಅಶ್ವಿನಿ ಪುನೀತ್ ರಾಜ್ ಕುಮಾರ್ ಮಾತನಾಡಿ, ಉಲ್ಲಾಸ್ ಮತ್ರು ಅಪ್ಪು ಮಕ್ಕಳ ಚಿತ್ರೋತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ ಮಾತನಾಡಿ, ಉಲ್ಲಾಸ್ , ಅಪ್ಪು ಚಿತ್ರೊತ್ಸವ ಆಯೋಜನೆ ಮಾಡಿರುವುದು ಒಳ್ಳೆಯ ಬೆಳವಣಿಗೆ.ಮಕ್ಕಳ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡುವ ಮುನ್ನವೇ ಚಿತ್ರಮಂದಿರದಿಂದ ಚಿತ್ರ ತೆಗೆದು ಹಾಕ್ತಾರೆ. ಮುಂದೊಂದು ದಿನ ಉಲ್ಲಾಸ್ ಶಾಲೆ ಅಂತರಾಷ್ಡ್ರೀಯ ಮಟ್ಟಕ್ಕೆ ಏರಲಿ.ಶಾಲೆ ಕಲಾವಿದರನ್ನು ತಯಾರು ಮಾಡುವ ಕಾರ್ಖಾನೆಯಾಗಲಿ ಎಂದು ಹಾರೈಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇನ್ಮುಂದೆ ಕೇವಲ 10 ದಿನಗಳಲ್ಲಿ ಪಾಸ್‌ಪೋರ್ಟ್‌ ವೆರಿಫಿಕೇಷನ್!

Thu Feb 23 , 2023
MPassport:ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೇಶದಲ್ಲಿ ಪಾಸ್ಪೋರ್ಟ್ಗಳನ್ನು ವಿತರಿಸುವ ನೋಡಲ್ ಸಚಿವಾಲಯವಾಗಿದ್ದು ಎಂಪಾಸ್ಪೋರ್ಟ್ (mPassport) ಪೊಲೀಸ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಈ ಅಪ್ಲಿಕೇಶನ್ ಪಾಸ್ಪೋರ್ಟ್ ನೀಡುವ ಸಮಯದಲ್ಲಿ ಪೊಲೀಸ್ ಪರಿಶೀಲನೆ ಪ್ರಕ್ರಿಯೆಯಲ್ಲಿ ಸರಳೀಕರಿಸಲು ಮತ್ತು ತ್ವರಿತಗೊಳಿಸಲು ಪ್ರಯತ್ನಿಸುತ್ತದೆ.ಪಾಸ್ಪೋರ್ಟ್ ನೀಡುವ ಪೊಲೀಸ್ ಪರಿಶೀಲನೆಯು ವ್ಯವಸ್ಥೆಯ ಒಂದು ಅವಿಭಾಜ್ಯ ಅಂಗವಾಗಿದೆ. ಮತ್ತು ಸಮಯ ಕಳೆದಂತೆ ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ವಿವಿಧ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.ಯಾರೆಲ್ಲ mPassport ಪೊಲೀಸ್ ಅಪ್ಲಿಕೇಶನ್ ಬಳಸಬಹುದು?ಪೊಲೀಸ್ ಠಾಣೆಯ ಬಳಕೆದಾರರು mPassport […]

Advertisement

Wordpress Social Share Plugin powered by Ultimatelysocial